Sirsi | ಶ್ರೀಗಂಧ ಕಳ್ಳತನ ಮಾಲು ಸಮೇತ ಮೂವರ ಬಂಧನ
Sirsi | ಶ್ರೀಗಂಧ ಕಳ್ಳತನ ಮಾಲು ಸಮೇತ ಮೂವರ ಬಂಧನ
ಕಾರವಾರ:- ಉತ್ತರ ಕನ್ನಡ ಜಿಲ್ಲೆಯ ಶಿರಸಿಯ ಶಿಂಗನಳ್ಳಿ ಗ್ರಾಮದಲ್ಲಿನ ಅರಣ್ಯದಲ್ಲಿ ಅಕ್ರಮವಾಗಿ ಪ್ರವೇಶಿಸಿ ಶ್ರೀಗಂಧ ಮರವನ್ನು ಕಡಿದು ಕಳ್ಳತನ ಮಾಡುತಿದ್ದ ಮೂವರು ಮರಕಳ್ಳರನ್ನ ಅರಣ್ಯ ಇಲಾಖೆ ಅಧಿಕಾರಿಗಳು ಮಾಲು ಸಮೇತ ವಶಕ್ಕೆ ಪಡೆದಿದ್ದಾರೆ.

ಬಂಧಿತರು ಶಿಂಗನಳ್ಳಿಯ ಸುಬ್ರಾಯ ನಾರಾಯಣ ನಾಯ್ಕ(66), ರಾಮ ಅಣ್ಣಪ್ಪ ನಾಯ್ಕ (60), ಬಿಗಿರಿಕೊಪ್ಪದ ಅಬ್ದುಲ್ ರಹೀಮ್ ಅಬ್ದುಲ್ ಗಫರ್ ಸಾಬ್, (63) ಎಂದಾಗಿದ್ದು ,ಈವರಿಂದ ಒಟ್ಟೂ 41.890 ಕೆ.ಜಿ. 11 ಶ್ರೀಗಂಧದ ಹಸಿತುಂಡುಗಳನ್ನು ವಶಕ್ಕೆ ಪಡೆಯಲಾಗಿದೆ. ಇದರ ಜೊತೆಗೆ ಕೃತ್ಯಕ್ಕೆ ಬಳಸಿದ ಕತ್ತಿ , ಕೈಗರಗಸ,ನೀರಿನ ಬಾಟಲಿ, ಮೊಬೈಲ್ ಫೋನ್ ಗಳನ್ನು ವಶಕ್ಕೆ ಪಡೆಯಲಾಗಿದೆ.
ಇದನ್ನೂ ಓದಿ:-Sirsi: ಮದ್ಯ ಸೇವಿಸಿ ಸಹೋದರ ಜಗಳ ಸುತ್ತಿಗೆಯ ಹೊಡೆತಕ್ಕೆ ಅಣ್ಣ ಸಾವು
ಕಾರ್ಯಾಚರಣೆಯಲ್ಲಿ ಉಪ ಅರಣ್ಯ ಸಂರಕ್ಷಣಾಧಿಕಾರಿಗಳಾದ ಅಜ್ಜಯ್ಯ ಜಿ. ಆರ್. ಜಾನ್ಮನೆ ಸಹಾಯಕ ಅರಣ್ಯ ಸಂರಕ್ಷಣಾಧಿಕಾರಿ ಹರೀಶ್ ,ಸಿ.ಎನ್. ರವರ ಮಾರ್ಗದರ್ಶನದಲ್ಲಿ ವಲಯ ಅರಣ್ಯಾಧಿಕಾರಿ ಶಿವಾನಂದ ನಿಂಗಾಣಿ ನೇತ್ರತ್ವದಲ್ಲಿ ಕಾರ್ಯಾಚರಣೆ ನಡೆಸಿ ಕರ್ನಾಟಕ ಅರಣ್ಯ ಕಾಯ್ದೆ 1963 ರ 00 24(3), 84, 85, 87 R/W 86 & ថថ ៨ ដល់ 1969 d ನಿಯಮ 144, 145 ರಂತೆ ಪ್ರಕರಣ ದಾಖಲಿಸಿ ಬಂಧಿಸಲಾಗಿದೆ.