ಪ್ರಮುಖ ಸುದ್ದಿಮುಖಪುಟLocal storyರಾಜ್ಯರಾಷ್ಟ್ರೀಯಅಂತರರಾಷ್ಟ್ರೀಯCrime newsಮನೋರಂಜನೆ
Advertisement

Sirsi: 21,18,624 ಲಕ್ಷ  ಮೌಲ್ಯದ ಕುಡಿಯುವ ನೀರಿನ ಪೈಪ್ ಕದ್ದ ಕಳ್ಳರು- ದೂರು ದಾಖಲು

ಕಾರವಾರ :- ಉತ್ತರ ಕನ್ನಡ ಜಿಲ್ಲೆಯ ಶಿರಸಿ (sirsi)ತಾಲೂಕಿನ ಕೆಂಗ್ರೆ ನೀರು ಸರಬರಾಜು ಘಟಕದಿಂದ ಶಿರಸಿ ನಗರಕ್ಕೆ ಪೂರೈಕೆಯ ಹಳೆಯ ಕಾಸ್ಟ್ ಐರನ್ ಪೈಪ್ ಗಳ ಕಳ್ಳತನವಾದ ಕುರಿತು ನಗರಸಭೆಯ ಕಿರಿಯ ಅಭಿಯಂತರ ಸುಫಿಯಾನ್ ಅಹಮ್ಮದ ಬ್ಯಾರಿ ಶಿರಸಿ ಗ್ರಾಮೀಣ ಪೊಲೀಸ್ (police)ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ.
10:52 PM Mar 04, 2025 IST | ಶುಭಸಾಗರ್
Sirsi: Thieves Steal Drinking Water Pipes Worth ₹21.18 Lakh – Complaint Filed

Sirsi: 21,18,624 ಲಕ್ಷ  ಮೌಲ್ಯದ ಕುಡಿಯುವ ನೀರಿನ ಪೈಪ್ ಕದ್ದ ಕಳ್ಳರು- ದೂರು ದಾಖಲು

Advertisement

ಪ್ರಕೃತಿ ಮೆಡಿಕಲ್ ,ಕಾರವಾರ.

ಕಾರವಾರ :- ಉತ್ತರ ಕನ್ನಡ ಜಿಲ್ಲೆಯ ಶಿರಸಿ (sirsi)ತಾಲೂಕಿನ ಕೆಂಗ್ರೆ ನೀರು ಸರಬರಾಜು ಘಟಕದಿಂದ ಶಿರಸಿ ನಗರಕ್ಕೆ ಪೂರೈಕೆಯ ಹಳೆಯ ಕಾಸ್ಟ್ ಐರನ್ ಪೈಪ್ ಗಳ ಕಳ್ಳತನವಾದ ಕುರಿತು ನಗರಸಭೆಯ

ಕಿರಿಯ ಅಭಿಯಂತರ ಸುಫಿಯಾನ್ ಅಹಮ್ಮದ ಬ್ಯಾರಿ ಶಿರಸಿ ಗ್ರಾಮೀಣ ಪೊಲೀಸ್ (police)ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ.

ಇದನ್ನೂ ಓದಿ:-Sirsi ಲೋಕಾಯುಕ್ತ ದಾಳಿ – ಲಂಚ ಪಡೆದ APP ವಶಕ್ಕೆ

Advertisement

ನಗರ ಸಭೆಯ ಸಿಬ್ಬಂದಿಗಳೊಂದಿಗೆ ಕೆಂಗ್ರೆ ನೀರು ಸರಬರಾಜು ಕೇಂದ್ರದ ಪರಿವೀಕ್ಷಣೆಗೆ ಹೋದಾಗ ನೀರು ಸರಬರಾಜಿಗೆ ಅಳವಡಿಸಿದ ಈಗ ನಿರುಪಯುಕ್ತವಾಗಿರುವ ಹಳೆಯ ಕಾಸ್ಟ್ ಐರನ್ ಪೈಪುಗಳನ್ನು ಅಳವಡಿಸಿದ ಸ್ಥಳವು

ಯಥಾಸ್ಥಿತಿಯಲ್ಲಿದ್ದು,  ಹಳೆಯ ಕಾಸ್ಟ್  ಐರನ್ ಪೈಪುಗಳು ಕಳ್ಳತನವಾಗಿರುವ  ಮಾಹಿತಿ ಬಂದಂತೆ ಮರಳಿ ಸಿಬ್ಬಂದಿಗಳೊಂದಿಗೆ ಸ್ಥಳ

ಪರಿಶೀಲನೆಗೆ ಹೋಗಿದ್ದು ಅಲ್ಲಿ ನೀರಿನ ಪೈಪಗಳನ್ನು ಅಗೆದು ತೆಗೆದಿರುವ ಬಗ್ಗೆ ಕುರುಹುಗಳು ಕಂಡು ಬಂದಿದೆ.

ಇದನ್ನೂ ಓದಿ:-Kumta :ಕತಗಾಲ್ ನಲ್ಲಿ ಆಹಾರ ಸಿಗದೇ ನಿತ್ರಾಣಗೊಂಡ ಕರಿ ಚಿರತೆ ರಕ್ಷಣೆ

ಆದರೆ ಸ್ಥಳದಲ್ಲಿ ಯಾವುದೇ ವ್ಯಕ್ತಿಗಳು ಇರಲಿಲ್ಲ. ಫೆ.27 ರಂದು ಮಧ್ಯಾಹ್ನ ಸುಮಾರು 2 ಗಂಟೆಗೆ ಮೇಲಾಧಿಕಾರಿಗಳೊಂದಿಗೆ ಕೆಂಗ್ರೆ ನೀರು ಸರಬುರಾಜು ಕೇಂದ್ರಕ್ಕೆ ಹೋಗಿ ಈ ಹಿಂದೆ ಹಳೆಯ ಕಾಸ್ಟ್ ಐರನ್ ಪೈಪುಗಳನ್ನು ಅಳವಡಿಸಿದ ಸ್ಥಳ ಪರಿಶೀಲನೆ ಮಾಡಿದಾಗ ಕೆಂಗ್ರೆ ನೀರು

ಸರಬರಾಜು ಕೇಂದ್ರದಿಂದ ಹುತ್ಗಾತ ಮಧ್ಯಂತರ ಪಂಪಿನ ಘಟಕಕ್ಕೆ ಬರುವ ಹಳೆಯ ಮುಖ್ಯ ಪೈಪಲೈಲ್ಬಸುಮಾರು 700 ಮೀಟರ್ ಉದ್ದಕ್ಕೆ ಅಳವಡಿಸಿದ ಕಾಸ್ಟ್ ಐರನ್ ಪೈಪುಗಳನ್ನು ನೆಲದಿಂದ ಅಗೆದುಬಗೆದುಕೊಂಡು ಹೋಗಿರುವ ಕುರುಹುಗಳು ಕಂಡು ಬಂದಿರುತ್ತದೆ.

 

6ಮೀಟರ್ (20 ಫೂಟ್) ಉದ್ದದ ಪೈಪಾಗಿದ್ದು, ಈ ಪ್ರಕಾರ ಒಟ್ಟೂ 116 ಪೈಪುಗಳು ಕಳ್ಳತನವಾಗಿದ್ದು,ಇವುಗಳ ಅಂದಾಜು ಕಿಮ್ಮತ್ತು 2118,624 ಲಕ್ಷ ಆಗಿದೆ.

ಪೈಪಗಳನ್ನು  ನಗರಸಭೆಯ ಗಮನಕ್ಕೆ ತರದೇ ಮತ್ತು ನಗರಸಭೆಯ ಅನುಮತಿಯಿಲ್ಲದೇ, ನಿಯಮದಂತೆ ಯಾವುದೇ ಟೆಂಡರ ಇತ್ಯಾದಿ ಆಗದೇ ಕಳ್ಳತನ ಮಾಡಿಕೊಂಡು ಹೋಗಿದ್ದು,ಶಿವಮೊಗ್ಗ ಜಿಲ್ಲೆಯ ಶಿಕಾರಿಪುರದ ಝಕ್ರಿಯಾ ಸಯ್ಯದ್ ಮೇಲೆ ಗ್ರಾಮೀಣ ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದಾರೆ.

ಪೈಪ್ ಕಳ್ಳನ ಪತ್ತೆಗೆ ಶಿರಸಿ ಗ್ರಾಮೀಣ ಠಾಣೆ ಪೊಲೀಸರು ವಿಶೇಷ ತಂಡ ರಚನೆ ಮಾಡಿದ್ದಾರೆ.

ಇದನ್ನೂ ಓದಿ:-Sirsi ಹತ್ತು ವರ್ಷದ ಪ್ರೀತಿಗೆ ಕೈಕೊಟ್ಟ ಯುವತಿ- ಮದುವೆಯಾದ ಹುಡಗನನ್ನು ಬಸ್ ನಲ್ಲಿಯೇ ಇರಿದು ಕೊಂದ ಪಾಗಲ್ ಪ್ರೇಮಿ

Advertisement
Tags :
CrimenewsDrinkingWaterKarnatakaPipeTheftPoliceComplaintSirsiTheftWaterSupply
Advertisement
Next Article
Advertisement