ಪ್ರಮುಖ ಸುದ್ದಿಮುಖಪುಟLocal storyರಾಜ್ಯರಾಷ್ಟ್ರೀಯಅಂತರರಾಷ್ಟ್ರೀಯCrime newsಮನೋರಂಜನೆ
Advertisement

Sirsi ಭತ್ತದ ಹುಲ್ಲು ಕೊಂಡೊಯ್ಯುತಿದ್ದ ಲಾರಿಗೆ ಬೆಂಕಿ ! ಸಾವಿರಾರು ರೂಪಾಯಿ ನಷ್ಟ.

ಕಾರವಾರ :-ಉತ್ತರ ಕನ್ನಡ ಜಿಲ್ಲೆಯ ಶಿರಸಿ,(sirsi) ನಗರದ ಝೋ ಸರ್ಕಲ್ ಬಳಿ ಭತ್ತದ ಹುಲ್ಲು ಕೊಂಡೊಯ್ಯುತಿದ್ದ ಲಾರಿಗೆ ವಿದ್ಯುತ್ ತಂತಿ ತಗಲಿ ಬೆಂಕಿ ಹೊತ್ತಿಕೊಂಡ ಘಟನೆ ಶುಕ್ರವಾರ ಮಧ್ಯಹ್ನ ನಡೆದಿದೆ.
09:22 PM Jan 11, 2025 IST | ಶುಭಸಾಗರ್
In Sirsi, a fire broke out in a truck carrying paddy straw, causing a loss of several thousand rupees.

Sirsi news :-ಉತ್ತರ ಕನ್ನಡ ಜಿಲ್ಲೆಯ ಶಿರಸಿ(sirsi) ನಗರದ ಝೋ ಸರ್ಕಲ್ ಬಳಿ ಭತ್ತದ ಹುಲ್ಲು ಕೊಂಡೊಯ್ಯುತಿದ್ದ ಲಾರಿಗೆ ವಿದ್ಯುತ್ ತಂತಿ ತಗಲಿ ಬೆಂಕಿ ಹೊತ್ತಿಕೊಂಡ ಘಟನೆ ಶುಕ್ರವಾರ ಮಧ್ಯಹ್ನ ನಡೆದಿದೆ.

Advertisement

ಇದನ್ನೂ ಓದಿ:-Karwar :ಆಧಿತ್ಯ ಬಿರ್ಲಾ ಕಾರ್ಖಾನೆಯಲ್ಲಿ ಕ್ಲೋರಿನ್ ಲೀಕ್ ಹತ್ತಕ್ಕೂ ಹೆಚ್ಚು ಜನ ಅಸ್ವಸ್ಥ.

ಶಿರಸಿಯ ಹುಲೇಕಲ್ ನಿಂದ ದಾಸನಕೊಪ್ಪಕ್ಕೆ ಬಿಳಿಹುಲ್ಲನ್ನು (ಭತ್ತದ ಹುಲ್ಲು) ತೆಗೆದುಕೊಂಡು ಹೊರಟಿದ್ದ ಲಾರಿ ಝೂ ಸರ್ಕಲ್ ಬಳಿ ಬಂದಾಗ ವಿದ್ಯುತ್ ತಂತಿ ಮೇಲ್ಭಾಗದ ಹುಲ್ಲುಗಳಿಗೆ ತಾಗಿ ಶಾರ್ಟ ಸರ್ಕ್ಯುಟ್ ಆಗಿದೆ.

ಇದನ್ನೂ ಓದಿ:-Karnataka|ಎರಡು ದಶಕದ ನಕ್ಸಲ್ ಹೋರಾಟಕ್ಕೆ ತೆರೆ ಆರು Naxals ಮುಖ್ಯಮಂತ್ರಿ ಮುಂದೆ ಶರಣಾಗತಿ.

Advertisement

ಬೆಂಕಿಯ ಕಿಡಿ ಒಣಗಿದ ಹುಲ್ಲಿನ ಮೇಲೆ ಬಿದ್ದಿದ್ದು ತಕ್ಷಣ ಬೆಂಕಿ ಹೊತ್ತಿಕೊಂಡಿದೆ. ಇದನ್ನು ಗಮನಿಸಿದ ಪೊಲೀಸ್ ಕಾಲೋನಿಯ ಮಹಿಳೆಯರು,ಸ್ಥಳೀಯ ಜನರು ಬೆಂಕಿ ನಂದಿಸುವ ಪ್ರಯತ್ನ ಮಾಡಿದ್ದು ,ತಕ್ಷಣ ಅಗ್ನಿಶಾಮಕ ಸಿಬ್ಬಂದಿಗಳು ಆಗಮಿಸಿ ಬೆಂಕಿ ನಂದಿಸಿ ಆಗುತಿದ್ದ ದೊಡ್ಡ ಅನಾಹುತ ತಪ್ಪಿಸಿದ್ದಾರೆ.

ಘಟನೆಯಲ್ಲಿ ಲಾರಿಯಲ್ಲಿ ಇದ್ದ ಭತ್ತದ ಹುಲ್ಲು ಸುಟ್ಟುಹೋಗಿದ್ದು ,ಅಂದಾಜು 20 ಸಾವಿರಕ್ಕೂ ಹೆಚ್ಚು ನಷ್ಟವಾಗಿದೆ.

 

Advertisement
Tags :
Fire incidentKaravaliLocal newsSirsitruck fireUttara kannda news
Advertisement
Next Article
Advertisement