SIRSI :ಸಿದ್ದರಾಮಯ್ಯನವರನ್ನು ಯಾರೂ ಇಳಿಸಲು ರಡಿ ಇಲ್ಲ. -ಸಚಿವ ಮಧು ಬಂಗಾರಪ್ಪ
Sirsi News 26 October 2024 :- ಬಿಜೆಪಿಗರು ಮಹಾತ್ಮ ಗಾಂಧಿ ನೆನಸೋದು ದುಡ್ಡಲ್ಲಿ ಮಾತ್ರ, ಬಿಜೆಪಿಗರು ಸಂವಿಧಾನದ ಮೂಲಕ ಅಧಿಕಾರಕ್ಕೆ ಬಂದಿಲ್ಲ ನೂರರ ಗಡಿ ದಾಟಿಲ್ಲ ಎಂದು ಬಿಜೆಪಿ ವಿರುದ್ಧ ಶಿಕ್ಷಣ ಸಚಿವ ಮಧು ಬಂಗಾರಪ್ಪ ಕಿಡಿ ಕಾರಿದ್ದಾರೆ.
ಶಿಕ್ಷಣ ಸಚಿವ ಮಧು ಬಂಗಾರಪ್ಪ ಏನಂದ್ರು ವಿಡಿಯೋ ಇಲ್ಲಿದೆ:-
ಇಂದು ಶಿರಸಿಯಲ್ಲಿ ಮಾತನಾಡಿದ ಅವರು
ಬಿಜೆಪಿಗರು ಮಹಾತ್ಮ ಗಾಂಧಿ ನೆನಸೋದು ದುಡ್ಡಲ್ಲಿ ಮಾತ್ರ,ದುಡ್ಡನ್ನು ಕೊಡೋದು ರಿಜೈನ್ ಮಾಡಿಸೋದು,ಚುನಾವಣೆಗೆ ಹೋಗೋದು ,ಚುನಾವಣೆಯಲ್ಲಿ ದುಡ್ಡು ಹಂಚೋದು ಮಾಡುತ್ತಾರೆ.
ಇದನ್ನೂ ಓದಿ:-SIRSI :ಮನೆ ಕಳ್ಳತನ ಆರೋಪಿಗಳಿಗೆ ಜೀವಾವಧಿ ಶಿಕ್ಷೆ! ಇವರು ಅಂತಿಂತ ಕಳ್ಳರಲ್ಲ!
ಪ್ರಜಾಪ್ರಭುತ್ವ ದಲ್ಲಿ ಬಿಜೆಪಿಗರು 110 ಸೀಟಿನ ಮುಂದೆ ಪಾಸಾಗಿದ್ದಾರೆಯೇ ಎಂದು ಪ್ರಶ್ನೆ ಮಾಡಿದ ಅವರು ಬಿಜೆಪಿಗೆ ಕೆಟ್ಟ ಬುದ್ದಿಯಲ್ಲದೇ ಒಳ್ಳೆ ಬುದ್ದಿ ಬರುತ್ತಾ ,ಯಾವತ್ತು ಮುಂದೆಯಿಂದ ಬಂದಿದ್ದಾರೆ.
ಎಲ್ಲಾ ಸೈಡು ,ಬ್ಯಾಕಿನಿಂದ ಬಂದಿದ್ದಾರೆ.
ಈಗಲೂ ವಿಜಯೇಂದ್ರ ಕನಸು ಇಟ್ಟುಕೊಂಡು ಕೂತಿದ್ದಾರೆ.ವಿಜಯೇಂದ್ರ ಹಣ ಮಾಡಿಟ್ಟಿದ್ದಾರೆ.
ಸಿಎಂ ಗೆ ರಿಜೈನ್ ಮಾಡಿ ರಿಜೈನ್ ಮಾಡಿ ಅಂತಾರೆ.
ಕುದ್ದು ಯಡಿಯೂರಪ್ಪನವರೇ ಬೇಲಿನ ಮೇಲೆ ಇದ್ದಾರೆ.
ಪಾದ ಯಾತ್ರೆಯಲ್ಲಿ ಇಡೀ ರಾಜ್ಯದ ಜನರ ಮುಂದೆ
ನಾವು ಕಳ್ಳರು ನಮಗೂ ಒಂದು ಸ್ಪಲ್ಪ ನೋಡಿ ಎಂದಿದ್ದಾರೆ.
ಇದನ್ನೂ ಓದಿ:-SIRSI:ಮಾವನ ಜನ್ಮ ದಿನಕ್ಕಾಗಿ ಶಿರಸಿಯಲ್ಲಿ ವಿಶೇಷ ಪೂಜೆ ಸಲ್ಲಿಸಿದ ನಟ ಶಿವರಾಜ್ ಕುಮಾರ್| ವಿಡಿಯೋ ನೋಡಿ
ಬಿಜೆಪಿಗರೆಲ್ಲರೂ ಕಳ್ಳರೇ, ಮಾನ ಮರ್ಯಾದೆ ಇಲ್ಲ.ಶಾಲೆಗೆ ಶಿಕ್ಷಕರು ಇಲ್ಲ, ಸಮಸ್ಯೆ ಇದೆ ಅಂತ ಪ್ರತಿಭಟನೆ ಮಾತಾಡಲಿ.
ಅದು ಬಿಟ್ಟು ಬಂಗಾರಪ್ಪಂದು ಹೇರ್ ಕಟ್ಟು ,ಇವರದ್ದು ದಾಡಿ ಎಂದು ಫನ್ನಿ ಸ್ಟುಪಿಡ್ ಮಾತನಾಡುತ್ತಾರೆ.ಕಾಮನ್ ಸೆನ್ಸ್ ಕೂಡ ಇಲ್ಲ ಎಂದು ಕಿಡಿ ಕಾರಿದರು.
ಮೂಡ ಪ್ರಕರಣವು ಅದರ ಪಾಡಿಗೆ ಅದು ನಡೆಯುತ್ತಿರುತ್ತದೆ .ಸಿದ್ದರಾಮಯ್ಯನವರನ್ನು ಯಾರೂ ಇಳಿಸಲು ರಡಿ ಇಲ್ಲ.
ಗಣೇಶ ಹಬ್ಬ ಆಯ್ತು, ದಶಮಿಯು ಆಯ್ತು ,ದೀಪಾವಳಿಗೂ ಮುಹೂರ್ತ ಇಟ್ಟಿದ್ದರು .
ಇದ್ಯಾವುದೂ ಸಿದ್ದರಾಮಯ್ಯನವರಿಗೆ (siddaramaiha)ಅನ್ವಯ ಆಗಲ್ಲ.ಈಗ ವಿಜಯೇಂದ್ರ ರವರಿಗೆ ಯತ್ನಾಳ್ ,ರಮೇಶ್ ಜಾರಕಿಹೊಳಿ,ಪ್ರತಾಪ್ ಸಿಂಹ ಅವರ ಪಕ್ಷದ ಹಲವು ಮುಖಂಡರು ಮುಹೂರ್ತ ಫಿಕ್ಸ್ ಮಾಡಿದ್ದಾರೆ.ಬಿಜೆಪಿಗರು ಜೆಡಿಯಸ್ ನನ್ನು ತಿಂದು ಮುಗಿಸುತ್ತಾರೆ ಎಂದರು.
ಇನ್ನು ಅದಿರು ನಾಪತ್ತೆ ಪ್ರಕರಣ ದಲ್ಲಿ ಕಾರವಾರದ ಶಾಸಕ ಸತೀಶ್ ಸೈಲ್ ದೋಷಿ ಹಿನ್ನಲೆಯಲ್ಲಿ ಮಾಧ್ಯಮದವರು ಕೇಳಿದ ಪ್ರಶ್ನೆಗೆ ಉತ್ತರಿಸಿದ ಅವರು ಬಿಜೆಪಿಗರು ವಾಷಿನ್ ಮಿಷನ್ ಗೆ ಹೋದ ತಕ್ಷಣ ಅವರೇನು ಪ್ಯೂವರ್ ಆಗೋಲ್ಲ.
ಕೋರ್ಟ ನಲ್ಲಿ ಅವಕಾಶ ಇದೆ ಅವಕಾಶ ಬಳಸಿಕೊಳ್ಳುತ್ತಾರೆ ಎಂದರು.
ಇನ್ನು ಉಪ ಚುನಾವಣೆಯಲ್ಲಿ ಶಿಗ್ಗಾವಿ ಬಿನ್ನಮತ ಪ್ರಸ್ತಾಪಿಸಿದ ಅವರು ಸಮಸ್ಯೆ ಇದೆ ಬಗೆಹರಿಸಿಕೊಳ್ಳಬೇಕು.ಯುದ್ದಕ್ಕೆ ಹೋಗುವವರು ಎದುರಾಳಿಗೆ ಚುಚ್ಚಬೇಕು ಪಕ್ಕದವರಿಗಲ್ಲ ಎಂದರು.