Sirsi| ಬಾಯಿ ಚಪಲ,ಕಾಡುಹಂದಿ ,ಆಮೆ ಮಾಂಸ ತಿಂದು ಸಿಕ್ಕಿಬಿದ್ದ ಆರೋಪಿ| ಉಳಿದವರು ಪರಾರಿ
Sirsi| ಬಾಯಿ ಚಪಲ,ಕಾಡುಹಂದಿ ,ಆಮೆ ಮಾಂಸ ತಿಂದು ಸಿಕ್ಕಿಬಿದ್ದ ಆರೋಪಿ| ಉಳಿದವರು ಪರಾರಿ
ಕಾರವಾರ(october 11):-ಶಿರಸಿಯಂತಹ(sirsi) ಮಲೆನಾಡು ಹಳ್ಳಿಗಳಲ್ಲಿ ಆಗಾಗ ಕಾಡಿನಲ್ಲಿ ಹಂದಿ ,ಕಾಡು ಕುರಿ ,ಮೊಲ ಹೀಗೆ ಹಲವು ಪ್ರಾಣಿಗಳ ಭೇಟೆ ಮಾಮೂಲಿಯಾಗಿ ನಡೆಯುತ್ತಲೇ ಇರುತ್ತದೆ.
ಹೀಗಾಗಿ ಅರಣ್ಯ ಇಲಾಖೆ ಅಧಿಕಾರಿಗಳು ಇಂತಹ ಭೇಟೆಗಾರ ಮೇಲೆ ಕಣ್ಣಿಟ್ಟು ಬಂಧಿಸುವ ಕೆಲಸ ಮಾಡುತ್ತಾರೆ.ಶಿರಸಿಯಲ್ಲಿ ಬಾಯಿ ಚಪಲಕ್ಕಾಗಿ ಕಾಡು ಹಂದಿ ,ಆಮೆ ಬೇಟೆಯಾಡಿ ,ಕೊನೆಗೆ ಬೇಯಿಸಿದ ಮಾಂಸದ ಜೊತೆ ಆರೋಪಿಗಳು ಅರಣ್ಯ ಇಲಾಖೆ ಅಧಿಕಾರಿಗಳಿಗೆ ಸಿಕ್ಕಿಬಿದ್ದ ಘಟನೆ ಬನವಾಸಿ ವಲಯದ ಎಕ್ಕಂಬಿ ಶಾಖೆಯ ಬಿಸಲಕೊಪ್ಪ ಗಸ್ತಿನ ಮುಡೇಬೈಲ್ ನಲ್ಲಿ ನಡೆದಿದೆ.

ಮುಖ್ಯ ಆರೋಪಿಯಾದ ಮುಡೇ ಬೈಲಿನ ಶಂಕರ ಲಕ್ಷ್ಮಣ ನಾಯ್ಕ, ಗಂಗಾಧರ ಗಣಪತಿ ಗೌಡ, ಶಂಕರ ಬೊಮ್ಮು ಗೌಡ, ಇವರುಗಳನ್ನು ಬಂಧಿಸಿ ನ್ಯಾಯಾಲಯಕ್ಕೆ ಹಾಜರು ಪಡಿಸಿದ್ದು ಆರೋಪಿಗಳಾದ ರವಿ ಮಾದೇವ ಗೌಡ,ಗಣಪತಿ ಬೊಮ್ಮುಗೌಡ ತಲೆಮರೆಸಿಕೊಂಡಿದ್ದು ಶೋಧನಾ ಕಾರ್ಯ ಕೈಗೊಳ್ಳಲಾಗಿದೆ.
Sirsi|ಗುತ್ತಿಗೆದಾರನ ಮನೆಯಲ್ಲಿ ಕಳ್ಳತನ -10 ಲಕ್ಷಕ್ಕೂ ಹೆಚ್ಚು ಮೌಲ್ಯದ ನಗದು ಚಿನ್ನಾಭರಣ ಕಳ್ಳತನ
ಬಂಧಿತರಿಂದ ಮನೆಯಲ್ಲಿ ಅಡುಗೆ ಮಾಡಿ ಅರೆ ಬೇಯಿಸಿದ 6 ಕೆ.ಜಿ ಕಾಡುಹಂದಿ ಮಾಂಸ ಪೂರ್ತಿ ಬೆಯಿಸಿದ 6 ಕೆ.ಜಿ ಕಾಡುಹಂದಿ ಮಾಂಸ ಮತ್ತು 0.550 ಕೆ.ಜಿ ಆಮೆಯ ಮಾಂಸ ವಶಕ್ಕೆ ಪಡೆಯಲಾಗಿದೆ.
ಆರೋಪಿತರ ವಿರುದ್ಧ ವನ್ಯಜೀವಿ ಸಂರಕ್ಷಣಾ ಕಾಯ್ದೆ 1972 ರ ಸೆಕ್ಷನ್ 9, 39 r/w 51, ಕರ್ನಾಟಕ ಅರಣ್ಯ ಕಾಯ್ದೆ 1963 ರ ಸೆಕ್ಷನ್ 24(j) r/w 62, 80 ರ ಉಲ್ಲಂಘನೆ ಮಾಡಿದ ಬಗ್ಗೆ ಪ್ರಕರಣ ದಾಖಲಾಗಿದೆ.
(Sirsi: Forest officials arrest three for hunting wild boar and turtle in Banavasi range; two accused absconding. Case filed under Wildlife Protection Act.)