Yallapur ನೀರಿನ ಟ್ಯಾಂಕ್ ನಲ್ಲಿ ಕೊಳತ ಹಾವು- ನೀರು ಕುಡಿದ ಗ್ರಾಮದ ಜಮ ಅಸ್ವಸ್ಥ
Yallapura news :- ಉತ್ತರ ಕನ್ನಡ ಜಿಲ್ಲೆಯ ಯಲ್ಲಾಪುರ (yallapura) ತಾಲೂಕಿನ ಹುಣಶಟ್ಟಿಕೊಪ್ಪ ಬಳಿಯ ಡೋಮಗೇರಿ ಗೌಳಿವಾಡಕ್ಕೆ ಸರಬರಾಜು ಆದ ನೀರು (water) ಕುಡಿದ ಹಲವರು ಅಸ್ವಸ್ಥರಾಗಿದ್ದಾರೆ. ವಿಷಯ ತಿಳಿದು ಆರೋಗ್ಯ ಸಿಬ್ಬಂದಿಗಳು ಗ್ರಾಮಕ್ಕೆ ಆಗಮಿಸಿ ತಕ್ಷಣ ಅಸ್ವಸ್ಥರಾದವರ ಉಪಚಾರ ನಡೆಸಿದ್ದಾರೆ.
ಗೌಳಿವಾಡದ ಜನರಿಗೆ ಓವರ್‌ಹೆಡ್ ಟ್ಯಾಂಕಿನಿಂದ ನೀರು ಪೂರೈಕೆಯಾಗಿದ್ದು, ಈ ನೀರು ವಾಸನೆಯಿಂದ ಕೂಡಿತ್ತು. ಪೂರ್ತಿ ನೀರು ಖಾಲಿ ಮಾಡಿದಾಗ ಅಲ್ಲಿ ಹಾವು ಸತ್ತಿರುವುದು ಗಮನಕ್ಕೆ ಬಂದಿತು. ಆದರೆ, ಅದು ವಿಷಕಾರಿ ಹಾವು ಆಗಿರಲಿಲ್ಲ. ಅದಾಗಿಯೂ ಆ ನೀರು ಕುಡಿದವರು ವಾಂತಿ-ಬೇದಿಯಿಂದ ತತ್ತರಿಸಿದ್ದಾರೆ.
ಇದನ್ನೂ ಓದಿ:- Yallapura: ಅಪಹರಣಗಾರರ ಜೊತೆ ಫೈರಿಂಗ್ ಫೈಟ್ ಮೂರುಜನ ಪೊಲೀಸರ ಮೇಲೆ ಹಲ್ಲೆ ಆರೋಪಿಗಳಿಗೆ ಗುಂಡೇಟು ! ನಡೆದಿದ್ದೇನು?
ಆರೋಗ್ಯ ಇಲಾಖೆಯ ಸಿಬ್ಬಂದಿ ಭವ್ಯಾ ದೇವಾಡಿಗ, ಸಮೂದಾಯ ಆರೋಗ್ಯ ಅಧಿಕಾರಿ ಶ್ರದ್ಧಾ ಭಗತ ಮುತುವರ್ಜಿವಹಿಸಿ ಅಸ್ವಸ್ಥರಾದವರನ್ನು ಆರೈಕೆ ಮಾಡಿದರು. ಗ್ರಾ ಪಂ ಅಧಿಕಾರಿ ಅಣ್ಣಪ್ಪ ವಡ್ಡರ ಹಾಗೂ ಗ್ರಾ ಪಂ ಸದಸ್ಯರು ನೀರಿನ ಪರಿಶೀಲನೆ ನಡೆಸಿದರು. ನೀರು ಕುಡಿದು ಅಸ್ವಸ್ಥರಾದ 45 ಜನರ ಆರೋಗ್ಯ ತಪಾಸಣೆ ನಡೆದಿದ್ದು, ಎಂಟು ಜನರನ್ನು ಸರ್ಕಾರಿ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ಕೊಡಿಸಲಾಯಿತು.
ಇದನ್ನೂ ಓದಿ:- Yallapura ಡಿಸೇಲ್ ಕಳ್ಳತನ ಮಾಡುತಿದ್ದ ಅಂತರ್ ರಾಜ್ಯ ಕಳ್ಳರ ಬಂಧನ
ಆರೋಗ್ಯಾಧಿಕಾರಿ ಕಳಕಳಿ:
ಕಲುಷಿತ ನೀರು ಕುಡಿಯುವುದರಿಂದ ಸಾಂಕ್ರಾಮಿಕ ರೋಗ ಹರಡುವ ಸಾಧ್ಯತೆಗಳಿವೆ. ಹೀಗಾಗಿ ನೀರು ಕುದಿಸಿ ಆರಿಸಿ ಕುಡಿಯುವುದು ಉತ್ತಮ' ಎಂದು ಆರೋಗ್ಯಾಧಿಕಾರಿ ಡಾ ನರೇಂದ್ರ ಪವಾರ್ ವಿವರಿಸಿದರು. `ವಿಶೇಷವಾಗಿ ಗರ್ಭಿಣಿಯರು ಮತ್ತು ಮಕ್ಕಳು ಆರೋಗ್ಯದ ಬಗ್ಗೆ ಹೆಚ್ಚಿನ ಕಾಳಜಿವಹಿಸಬೇಕು. ವಾಂತಿ - ಬೇಧಿ ಕಂಡು ಬಂದಲ್ಲಿ ತಕ್ಷಣ ಚಿಕಿತ್ಸೆ ಪಡೆಯಬೇಕು' ಎಂದವರು ಸೂಚಿಸಿದರು.