ಪ್ರಮುಖ ಸುದ್ದಿಮುಖಪುಟLocal storyರಾಜ್ಯರಾಷ್ಟ್ರೀಯಅಂತರರಾಷ್ಟ್ರೀಯCrime newsಮನೋರಂಜನೆ
Advertisement

Yallapur ನೀರಿನ ಟ್ಯಾಂಕ್ ನಲ್ಲಿ ಕೊಳತ ಹಾವು- ನೀರು ಕುಡಿದ ಗ್ರಾಮದ ಜಮ ಅಸ್ವಸ್ಥ

Yallapura news :- ಉತ್ತರ ಕನ್ನಡ ಜಿಲ್ಲೆಯ ಯಲ್ಲಾಪುರ (yallapura) ತಾಲೂಕಿನ ಹುಣಶಟ್ಟಿಕೊಪ್ಪ ಬಳಿಯ ಡೋಮಗೇರಿ ಗೌಳಿವಾಡಕ್ಕೆ ಸರಬರಾಜು ಆದ ನೀರು (water) ಕುಡಿದ ಹಲವರು ಅಸ್ವಸ್ಥರಾಗಿದ್ದಾರೆ. ವಿಷಯ ತಿಳಿದು ಆರೋಗ್ಯ ಸಿಬ್ಬಂದಿಗಳು ಗ್ರಾಮಕ್ಕೆ ಆಗಮಿಸಿ ತಕ್ಷಣ ಅಸ್ವಸ್ಥರಾದವರ ಉಪಚಾರ ನಡೆಸಿದ್ದಾರೆ.
10:44 PM Jan 12, 2025 IST | ಶುಭಸಾಗರ್
"Snake found in Yellapur water tank; villagers fall ill after drinking the water."

Yallapura news :- ಉತ್ತರ ಕನ್ನಡ ಜಿಲ್ಲೆಯ ಯಲ್ಲಾಪುರ (yallapura) ತಾಲೂಕಿನ ಹುಣಶಟ್ಟಿಕೊಪ್ಪ ಬಳಿಯ ಡೋಮಗೇರಿ ಗೌಳಿವಾಡಕ್ಕೆ ಸರಬರಾಜು ಆದ ನೀರು (water) ಕುಡಿದ ಹಲವರು ಅಸ್ವಸ್ಥರಾಗಿದ್ದಾರೆ. ವಿಷಯ ತಿಳಿದು ಆರೋಗ್ಯ ಸಿಬ್ಬಂದಿಗಳು ಗ್ರಾಮಕ್ಕೆ ಆಗಮಿಸಿ ತಕ್ಷಣ ಅಸ್ವಸ್ಥರಾದವರ ಉಪಚಾರ ನಡೆಸಿದ್ದಾರೆ.

Advertisement

ಗೌಳಿವಾಡದ ಜನರಿಗೆ ಓವರ್‌ಹೆಡ್ ಟ್ಯಾಂಕಿನಿಂದ ನೀರು ಪೂರೈಕೆಯಾಗಿದ್ದು, ಈ ನೀರು ವಾಸನೆಯಿಂದ ಕೂಡಿತ್ತು. ಪೂರ್ತಿ ನೀರು ಖಾಲಿ ಮಾಡಿದಾಗ ಅಲ್ಲಿ ಹಾವು ಸತ್ತಿರುವುದು ಗಮನಕ್ಕೆ ಬಂದಿತು. ಆದರೆ, ಅದು ವಿಷಕಾರಿ ಹಾವು ಆಗಿರಲಿಲ್ಲ. ಅದಾಗಿಯೂ ಆ ನೀರು ಕುಡಿದವರು ವಾಂತಿ-ಬೇದಿಯಿಂದ ತತ್ತರಿಸಿದ್ದಾರೆ.

ಇದನ್ನೂ ಓದಿ:- Yallapura: ಅಪಹರಣಗಾರರ ಜೊತೆ ಫೈರಿಂಗ್ ಫೈಟ್ ಮೂರುಜನ ಪೊಲೀಸರ ಮೇಲೆ ಹಲ್ಲೆ ಆರೋಪಿಗಳಿಗೆ ಗುಂಡೇಟು ! ನಡೆದಿದ್ದೇನು?

ಆರೋಗ್ಯ ಇಲಾಖೆಯ ಸಿಬ್ಬಂದಿ ಭವ್ಯಾ ದೇವಾಡಿಗ, ಸಮೂದಾಯ ಆರೋಗ್ಯ ಅಧಿಕಾರಿ ಶ್ರದ್ಧಾ ಭಗತ ಮುತುವರ್ಜಿವಹಿಸಿ ಅಸ್ವಸ್ಥರಾದವರನ್ನು ಆರೈಕೆ ಮಾಡಿದರು. ಗ್ರಾ ಪಂ ಅಧಿಕಾರಿ ಅಣ್ಣಪ್ಪ ವಡ್ಡರ ಹಾಗೂ ಗ್ರಾ ಪಂ ಸದಸ್ಯರು ನೀರಿನ ಪರಿಶೀಲನೆ ನಡೆಸಿದರು. ನೀರು ಕುಡಿದು ಅಸ್ವಸ್ಥರಾದ 45 ಜನರ ಆರೋಗ್ಯ ತಪಾಸಣೆ ನಡೆದಿದ್ದು, ಎಂಟು ಜನರನ್ನು ಸರ್ಕಾರಿ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ಕೊಡಿಸಲಾಯಿತು.

Advertisement

ಇದನ್ನೂ ಓದಿ:- Yallapura ಡಿಸೇಲ್‌ ಕಳ್ಳತನ ಮಾಡುತಿದ್ದ ಅಂತರ್‌ ರಾಜ್ಯ ಕಳ್ಳರ ಬಂಧನ

ಆರೋಗ್ಯಾಧಿಕಾರಿ ಕಳಕಳಿ:

ಕಲುಷಿತ ನೀರು ಕುಡಿಯುವುದರಿಂದ ಸಾಂಕ್ರಾಮಿಕ ರೋಗ ಹರಡುವ ಸಾಧ್ಯತೆಗಳಿವೆ. ಹೀಗಾಗಿ ನೀರು ಕುದಿಸಿ ಆರಿಸಿ ಕುಡಿಯುವುದು ಉತ್ತಮ' ಎಂದು ಆರೋಗ್ಯಾಧಿಕಾರಿ ಡಾ ನರೇಂದ್ರ ಪವಾರ್ ವಿವರಿಸಿದರು. `ವಿಶೇಷವಾಗಿ ಗರ್ಭಿಣಿಯರು ಮತ್ತು ಮಕ್ಕಳು ಆರೋಗ್ಯದ ಬಗ್ಗೆ ಹೆಚ್ಚಿನ ಕಾಳಜಿವಹಿಸಬೇಕು. ವಾಂತಿ - ಬೇಧಿ ಕಂಡು ಬಂದಲ್ಲಿ ತಕ್ಷಣ ಚಿಕಿತ್ಸೆ ಪಡೆಯಬೇಕು' ಎಂದವರು ಸೂಚಿಸಿದರು.

Advertisement
Tags :
CleanWaterCrisisContaminatedWaterEmergencyHealthHazardIndianewsKarnatakaPublicHealthSnakeFoundVillagersFellIllWaterTankYellapur
Advertisement
Next Article
Advertisement