Karnataka:ಬೋರ್ವೆಲ್ ಹಾಕಿಸಿದವರಿಗೆ ರಾಜ್ಯ ಸರ್ಕಾರದಿಂದ ಕಠಿಣ ನಿಯಮ ಜಾರಿ ,ಏನದು ವಿವರ ಇಲ್ಲಿದೆ.
Bangalore 29 November 2024:- ರಾಜ್ಯದಲ್ಲಿ ರೈತಾಪಿ ಕೆಲಸ ಸೇರಿದಂತೆ ಇತರೆ ಕೆಲಸಗಳಿಗೂ ಬೋರ್ವೆಲ್ ತೆಗೆಸುವ ಸಂಖ್ಯೆ ಹೆಚ್ಚಾಗಿದೆ. ನೀರು ಬಾರದಿದ್ರೆ ಹಾಗೆಯೇ ಬಿಟ್ಟು ಅನಾಹುತಕ್ಕೆ ಕಾರಣವಾಗುತ್ತಿದೆ.
ಹೀಗಾಗಿ ನೀರಿಗಾಗಿ ಬೋರ್‌ವೆಲ್ ಕೊರೆಸಲು ರಾಜ್ಯ ಸರ್ಕಾರ ಈಗಾಗಲೇ ಕಟ್ಟುನಿಟ್ಟಿನ ರೂಲ್ಸ್ ಜಾರಿ ಮಾಡಿತ್ತು.
ಇದನ್ನೂ ಓದಿ:-Karnataka Railways: ರೈಲು ಪ್ರಯಾಣಿಕರೇ ಗಮನಿಸಿಈ ರೈಲುಗಳು ಈ ದಿನಾಂಕದಂದು ರದ್ದು, ಸಂಖ್ಯೆಯೂ ಬದಲು!
ಆದ್ರೆ ಇದೀಗ ಬೋರ್‌ವೆಲ್ ತೆಗೆಯುವವರಿಗೆ ಸರ್ಕಾರವು (Karnataka Government )ಮತ್ತಷ್ಟು ಬಿಗಿಯಾದ ಕ್ರಮಗಳ ಜಾರಿಗೆ ಮುಂದಾಗಿದೆ.
ಸಣ್ಣ ನೀರಾವರಿ ಮತ್ತು ಅಂತರ್ಜಲ ಅಭಿವೃದ್ಧಿ ಇಲಾಖೆ ಪ್ರಸ್ತಾಪಿಸಿರುವ ಕರ್ನಾಟಕ ಅಂತರ್ಜಲ ತಿದ್ದುಪಡಿ ಮಸೂದೆ-2024ಕ್ಕೆ ಸಚಿವ ಸಂಪುಟ ಅನುಮೋದನೆ ನೀಡಿದೆ.
ರಾಜ್ಯದ ಹಲವೆಡೆ ಕೊರೆಸಲಾಗಿರುವ ಬೋರ್‌ವೆಲ್‌ಗಳನ್ನು ಮುಚ್ಚಿಲ್ಲ. ಅಲ್ಲಿ ಯಾವುದೇ ಸುರಕ್ಷತಾ ಕ್ರಮಗಳನ್ನು ಪಾಲಿಸದ ಕಾರಣ ಅಪಾಯದ ಸ್ಥಿತಿಯಲ್ಲಿವೆ.
ಹಾಳು ಬಿಟ್ಟ ಬೋರ್ವೆಲ್ ( borewell) ಗಳನ್ನು ತ್ವರಿತವಾಗಿ ಮುಚ್ಚಬೇಕು ಎಂದು ಕಾನೂನು ಸಚಿವ ಹೆಚ್.ಕೆ.ಪಾಟೀಲ್ ಹೇಳಿದ್ದಾರೆ.
ಈ ಹಿಂದೆ ಬೋರ್ ಮೆಲ್ ನಿಂದ ಸಾಕಷ್ಟು ಸಮಸ್ಯೆಯಾಗಿತ್ತು ,ಇದೀಗ ಯಾವುದೇ ಅನಾಹುತಗಳು ಸಂಭವಿಸಬಾರದು ಎಂಬ ನಿಟ್ಟಿನಲ್ಲಿ ಈ ಮಸೂದೆಯನ್ನು ಪ್ರಸ್ತಾಪಿಸಲಾಗಿದೆ.
ಒಂದು ವೇಳೆ ಬೋರ್‌ವೆಲ್ ಮುಚ್ಚದಿದ್ದರೆ ಆಯಾ ಜಮೀನಿನ ಮಾಲೀಕರು, ಬೋರ್‌ವೆಲ್ ಹಾಕಿದ ಏಜೆನ್ಸಿಯವರನ್ನೇ ಹೊಣೆ ಮಾಡಲಾಗುತ್ತದೆ.
ಇದನ್ನೂ ಓದಿ:-Uttara kannda| ಶಾಲೆಯ ನಿರ್ಲಕ್ಷ ಶೌಚಾಲಯಕ್ಕೆ ಹೋದ ಪುಟ್ಟ ಬಾಲಕಿಗೆ ವಿದ್ಯುತ್ ಶಾಕ್ ನಿಂದ ಮೃತ
ಈ ನಿಯಮ ಉಲ್ಲಂಘಿಸಿದರೆ, ಒಂದು ವರ್ಷಗಳ ಕಠಿಣ ಜೈಲು ಶಿಕ್ಷೆ ಸಹ ವಿಧಿಸಲಾಗುವುದು. ಜೊತೆಗೆ ಬೋರ್‌ವೆಲ್ ಮುಚ್ಚದವರಿಗೆ 10,000 ರೂಪಾಯಿವರೆಗೆ ದಂಡ ಕೂಡ ವಿಧಿಸಲಾಗುವುದು.
ಸ್ಥಳೀಯ ಆಡಳಿತದ ಅನುಮತಿಯಿಲ್ಲದೆ ಬೋರ್‌ವೆಲ್ ಕೊರೆದರೆ, ಭಾರಿ ದಂಡ ,ಮೂರು ತಿಂಗಳ ಜೈಲು ಶಿಕ್ಷೆ ವಿಧಿಸಲು ಈ ಮಸೂದೆಯಲ್ಲಿ ಉಲ್ಲೇಖಿಸಲಾಗಿದೆ ಎಂದರು.
ಕರ್ನಾಟಕ ರಾಜ್ಯ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ವಿಶ್ವವಿದ್ಯಾಲಯ ತಿದ್ದುಪಡಿ ವಿಧೇಯಕವೂ ಸೇರಿದಂತೆ ಒಂಬತ್ತು ವಿವಿಧ ವಿಧೇಯಕಗಳಿಗೆ ರಾಜ್ಯ ಸಚಿವ ಸಂಪುಟ ಅನುಮೋದನೆ ನೀಡಿದೆ ಎಂದು ಕಾನೂನು ಮತ್ತು ಸಂಸದೀಯ ವ್ಯವಹಾರಗಳ ಸಚಿವ ಎಚ್.ಕೆ. ಪಾಟೀಲ್ (Minister h.k Patil )ಹೇಳಿದ್ದಾರೆ.