AR RAHMAN 29 ವರ್ಷದ ದಾಂಪತ್ಯಕ್ಕೆ ವಿದಾಯ
Report By- sagar
ಖ್ಯಾತ ಸಂಗೀತ ನಿರ್ದೇಶಕ ಎ. ಆರ್ ರಹಮಾನ್ (AR RAHAMAN) ಹಾಗೂ ಪತ್ನಿ ಸೈರಾ ಬಾನು (saira banu)ದಾಂಪತ್ಯ ಜೀವನ 29 ವರ್ಷದ ನಂತರ ಅಂತ್ಯವಾಗಿದೆ.
ಈ ಕುರಿತು ರೆಆನ್ ಎಕ್ಸ್ ನಲ್ಲಿ ಟ್ವೀಟ್ ಮಾಡಿ ಈ ಬಗ್ಗೆ ಮಾಹಿತಿ ನೀಡಿದ್ದಾರೆ. ನಮ್ಮ ವೈವಾಹಿಕ ಜೀವನ ಯಶಸ್ವಿಯಾಗಿ 30 ವರ್ಷಕ್ಕೆ ತಲುಪುತ್ತದೆ ಎಂದುಕೊಂಡಿದ್ದೆ. ಅದು ಸಾಧ್ಯವಾಗಲಿಲ್ಲ ಎಂದಿದ್ದಾರೆ.

ಇದನ್ನೂ ಓದಿ:-Karwar :ಖಾಸಗಿ ಕ್ಲಿನಿಕ್ ಗೆ ಬೆಂಕಿ ಲಕ್ಷಾಂತರ ರುಪಾಯಿ ವಸ್ತುಗಳು ಬೆಂಕಿಗಾಹುತಿ
ಎ, ಆರ್ ರಹಮಾನ್ ಹಾಗೂ ಸೈರಾ ಬಾನು ಅವರದ್ದು ಹಿರಿಯರು ನಿಶ್ಚಯಿಸಿದ ಮದುವೆ. ತಾಯಿ ಬಹಳ ಇಷ್ಟಪಟ್ಟು ಮದುವೆ ನಿಶ್ಚಯಿಸಿದ್ದರು. ನಾನು ಆಗ ಬಹಳ ಬ್ಯುಸಿ ಇದ್ದಿದ್ದರಿಂದ ಹುಡುಗಿ ಹುಡುಕುವ ಜವಾಬ್ದಾರಿಯನ್ನು ತಾಯಿಗೆ ವಹಿಸಿದ್ದೆ ಎಂದಿದ್ದರು.
1995ರಲ್ಲಿ ರಹಮಾನ್- ಸೈರಾ ಬಾನು ಮದುವೆ ನಡೆದಿತ್ತು. ಇವರಿಗೆ ಇಬ್ಬರು ಹೆಣ್ಣು ಮಕ್ಕಳು, ಒಬ್ಬ ಮಗ ಇದ್ದಾನೆ.

ವಿಚ್ಛೇದನಕ್ಕೆ ಮಾನಸಿಕ ಕಿರಿಕಿರಿ ಹಾಗೂ ವೈಮನಸ್ಸು ಕಾರಣ ಎಂದು ಹೇಳಲಾಗಿದೆ. ಆದರೇ 29 ವರ್ಷದ ಸುದೀರ್ಘ ದಾಂತ್ಯದಲ್ಲಿದ್ದು ಮಗಳ ವಿವಾಹ ಮಾಡಿಸಿ ಇದೀಗ ಆಂತರಿಕ ಕಾರಣ ವಿಟ್ಟು ರೆಹಮಾನ್ ಪತ್ನಿ ಸಾಹಿರಾ ವಿಚ್ಛೇದನ ನೀಡಿದ್ದು ತಾಲಿವುಡ್ ಹಾಗೂ ಬಾಲಿವುಡ್ ನಲ್ಲಿ ಸಂಚಲನ ಮೂಡಿಸಿದೆ.
ಸೈರಾ ಬಾನು ಪರ ವಕೀಲರು ಇಬ್ಬರ ವಿಚ್ಛೇಧನದ ಬಗ್ಗೆ ಮಾಹಿತಿ ನೀಡಿದ್ದಾರೆ.
ಸೈರಾ ಬಾನು ತಮ್ಮ ಪತಿ ಎ. ಆರ್ ರಹಮಾನ್ ಅವರಿಂದ ದೂರಾಗಲು ನಿರ್ಧರಿಸಿದ್ದಾರೆ. ಸಂಬಂಧದಲ್ಲಿ ಉಂಟಾದ ಭಾವನಾತ್ಮಕ ಒತ್ತಡದಿಂದ ಈ ನಿರ್ಣಯಕ್ಕೆ ಬಂದಿದ್ದಾರೆ" ಎಂದು ತಿಳಿಸಿದ್ದರು.
ಭಾರತ ಮಾತ್ರವಲ್ಲ ಪ್ರಪಂಚದ ಖ್ಯಾತ ಸಂಗೀತ ನಿರ್ದೇಶಕರಲ್ಲಿ ಎ. ಆರ್ ರಹಮಾನ್ ಸಹ ಒಬ್ಬರು. ಆಸ್ಕರ್ ಪ್ರಶಸ್ತಿಯ ಗರಿ ಕೂಡ ಸಿಕ್ಕಿದೆ. 'ರೋಜಾ', 'ಬಾಂಬೆ' ರೀತಿಯ ಸೆನ್ಸೇಷನ್ ಸಿನಿಮಾಗಳಿಗೆ ಸಂಗೀತ ಸಂಯೋಜನೆ ಮಾಡಿ ಅವರು ಗೆದ್ದಿದ್ದರು. ಆ ಬಳಿಕ ಸೈರಾ ಬಾನು ಕೈ ಹಿಡಿದಿದ್ದರು.
ಆಂತರಿಕ ಸಮಸ್ಯೆಯನ್ನು ಸರಿ ಮಾಡಲು ಯಾರಿಂದಲೂ ಸಾಧ್ಯವಿಲ್ಲ ಎಂದು ಕಂಡುಕೊಂಡಿದ್ದಾರೆ. ಬಹಳ ನೋವಿನಿಂದಲೇ ವಿಚ್ಛೇದನದ ನಿರ್ಧಾರಕ್ಕೆ ಬಂದಿದ್ದಾರೆ.
ಈ ಸವಾಲಿನ ಸಮಯ ಎದುರಿಸಲು, ಖಾಸಗಿತನ ಬಯಸುತ್ತಿದ್ದಾರೆ ಎಂದು ಸೈರಾ ಬಾನು ಪರ ವಕೀಲರು ಪತ್ರಿಕಾ ಹೇಳಿಕೆಯಲ್ಲಿ ವಿವರಿಸಿದ್ದರು.
ಬಹಳ ಅನ್ಯೋನ್ಯವಾಗಿದ್ದ ಜೋಡಿ ದಿಢೀರ್ ಈ ನಿರ್ಧಾರಕ್ಕೆ ಬಂದಿದ್ದು ಯಾಕೆ? ಎಂದು ಅಚ್ಚರಿ ವ್ಯಕ್ತಪಡಿಸಿದ್ದಾರೆ. ಪೋಷಕರ ವಿಚ್ಛೇದನ ನಿರ್ಧಾರದ ಬಗ್ಗೆ ಮಕ್ಕಳು ಸೋಶಿಯಲ್ ಮೀಡಿಯಾದಲ್ಲಿ ಪ್ರತಿಕ್ರಿಯಿಸಿದ್ದಾರೆ.
ಯಾರು ಸಹಿರಾ ಬಾನು?.

ಡಿಸೆಂಬರ್ 20 ,1973 ರಲ್ಲಿ ಕೊಚ್ಚಿಯಲ್ಲಿ ಜನಿಸಿದ ಇವರು ಮಧ್ಯಮ ಶ್ರೀಮಂತ ಕುಟುಂಬದಿಂದ ಬಂದವರು. ಸಂಪ್ರದಾಯಿಕ ಕುಟುಂಬದಿಂದ ಬಂದ ಇವರು 1995 ರಲ್ಲಿ ಕುಟುಂಬ ನಿಶ್ಚಯದಂತೆ ವಿವಾಹವಾದರು.
ಕತೀಜ, ರಹೀಮಾ ಮತ್ತು ಅಮೀನ್ ಎಂಬ ಮಕ್ಕಳು ಇವರಿಗಿದ್ದಾರೆ. ಎಲ್ಲಿಯೂ ತಾನೊಬ್ಬ ಸೆಲಬ್ರೆಟಿ ಪತ್ನಿ ಎಂದು ಬೀಗದ ಇವರು ಸರಳತೆಯಿಂದಲೇ ಇದ್ದವರು.
ಸೆಲಬ್ರಟಿಯಂತೆ ಸದಾ ಸುದ್ದಿಯಲ್ಲಿರದೇ ಗಂಡನ ಯಶಸ್ವಿಗೆ ಬೆಂಗಾವಲಾಗಿದ್ದರು.
ಸಿನಿಮಾ ರಂಗದಲ್ಲಿ ಗೆದ್ದ ಎ.ಆರ್ ರೆಹಮಾನ್ ಜೀವನ ರಂಗದಲ್ಲಿ ಮಾತ್ರ ಸೋತಿದ್ದು ಸುದೀರ್ಘ ಅವಧಿಯ ದಾಂಪತ್ಯಕ್ಕೆ ಅಂತ್ಯ ಹಾಡಿದ್ದಾರೆ.
Feed: invalid feed URL