ಪ್ರಮುಖ ಸುದ್ದಿಮುಖಪುಟLocal storyರಾಜ್ಯರಾಷ್ಟ್ರೀಯಅಂತರರಾಷ್ಟ್ರೀಯCrime newsಮನೋರಂಜನೆ
Advertisement

Green river |ಹಸಿರು ಬಣ್ಣಕ್ಕೆ ತಿರುಗಿದ ತುಂಗಭದ್ರಾ ನದಿ ನೀರು ಜನರಲ್ಲಿ ಆತಂಕ!

ಜಿಲ್ಲೆಯಲ್ಲಿ ಹಾದು ಹೋಗಿರುವ ತುಂಗಭದ್ರಾ (thungabadra) ನದಿಯ (river) ನೀರು ಸಂಪೂರ್ಣ ಹಸಿರು ಬಣ್ಣ ಕ್ಕೆ ತಿರುಗಿದೆ. ಇದರಿಂದ ಜಿಲ್ಲೆಯ ಜನರು ಸಾಕಷ್ಟು ಆತಂಕ್ಕಕ್ಕೀಡಾಗಿದ್ದಾರೆ.
11:46 PM Jan 16, 2025 IST | ಶುಭಸಾಗರ್

ಗದಗ ಜಿಲ್ಲೆಯ ಜೀವನಾಡಿಯಾಗಿರುವ ತುಂಗಭದ್ರಾ ನದಿಯ ನೀರು ಹಸಿರು ಬಣ್ಣಕ್ಕೆ ತಿರುಗಿದ್ದು, ಗದಗ, ಮಂಡರಗಿ ಮತ್ತು ಶಿರಹಟ್ಟಿ ಭಾಗದ ಜನರಲ್ಲಿ ಆತಂಕ ತಂದೊಡ್ಡಿದೆ.

Advertisement

ಜಿಲ್ಲೆಯಲ್ಲಿ ಹಾದು ಹೋಗಿರುವ ತುಂಗಭದ್ರಾ (thungabadra) ನದಿಯ (river) ನೀರು ಸಂಪೂರ್ಣ ಹಸಿರು ಬಣ್ಣ ಕ್ಕೆ ತಿರುಗಿದೆ. ಇದರಿಂದ ಜಿಲ್ಲೆಯ ಜನರು ಸಾಕಷ್ಟು ಆತಂಕ್ಕಕ್ಕೀಡಾಗಿದ್ದಾರೆ.

24 ಘಂಟೆಗಳ ಕುಡಿಯುವ ನೀರಿನ ಯೋಜನೆ ಒಳಗೊಂಡಿರುವ ಗದಗ (gadag)ಬೆಟಗೇರಿ ಅವಳಿ ನಗರ ಸೇರಿದಂತೆ ಮುಂಡರಗಿ, ಶಿರಹಟ್ಟಿ, ಲಕ್ಷ್ಮೇಶ್ವರ, ಡಂಬಳ ಪಟ್ಟಣ ಹಾಗೂ ಬಹುಗ್ರಾಮಗಳ ಕುಡಿಯುವ ನೀರಿನ ಯೋಜನೆ ಇದೇ ನದಿಯಿಂದ ಸರಬರಾಜು ಆಗುತ್ತದೆ.

ಇದನ್ನೂ ಓದಿ:-Karavali ಕಡಲಲ್ಲಿ ಬೋಟ್ ಪಲ್ಟಿ ಉತ್ತರ ಕನ್ನಡ ಜಿಲ್ಲೆಯ ವ್ಯಕ್ತಿ ಕಣ್ಮರೆ

Advertisement

ವಿಪರ್ಯಾಸ ಅಂದರೆ, ಕಳೆದ ಒಂದು ವಾರದಿಂದ ನದಿ ನೀರು ಈ ರೀತಿಯ ಬಣ್ಣಕ್ಕೆ ತಿರುಗಿದ್ದು,ಮೊದಲು ನದಿ ನೀರು ಪಾಚಿಕಟ್ಟಿರಬಹುದು ಎಂದು ಸುಮ್ಮನಾಗಿದ್ದರು. ಆದರೆ ಬರುಬರುತ್ತಾ ದಿನಕಳೆದರೂ , ನೀರು ತನ್ನ ಮೊದಲಿನ ಬಣ್ಣಕ್ಕೆ ಹಿಂದಿರುಗಿಲ್ಲ. ಮತ್ತಷ್ಟು ಹಸಿರು ಬಣ್ಣಕ್ಕೆ ತಿರುಗಿದೆ. ಇದರಿಂದ ಆತಂಕಗೊಂಡ ನದಿ ಪಾತ್ರದಲ್ಲಿನ ರೈತರು ತಮ್ಮ ದನ ಕರುಗಳನ್ನ ನದಿಯಲ್ಲಿ ನೀರು ಕುಡಿಸಲು ಹಿಂದೇಟು ಹಾಕಿದ್ದು, ನದಿ ನೀರನ್ನ ಜಾನುವಾರು ಸೇರಿದಂತೆ ತಾವುಗಳು ಕುಡಿಯಲು ಹೆದರುತ್ತಿದ್ದಾರೆ.

ಇನ್ನು ಸ್ಥಳಕ್ಕೆ ಮುಂಡರಗಿ ತಹಶಿಲ್ದಾರ್ ಪಿ.ಎಸ್ ಯರ್ರಿಸ್ವಾಮಿ ಭೇಟಿ ನೀಡಿ ಪರಿಶೀಲನೆ ನಡೆಸಿದರು. ನಂತರ ಮಾತನಾಡಿದ ಅವರು ಕಾರ್ಖಾನೆ ತ್ಯಾಜ್ಯದ ನೀರು ನದಿಗೆ ಬಿಟ್ಟಿರುವ ಆತಂಕ ಜನರಲ್ಲಿದೆ.

ನೀರಿನ ಮಾದರಿಯನ್ನು ಪ್ರಯೋಗಾಲಕ್ಕೆ ಇಂದು ಸಂಜೆ ಅಥವಾ ನಾಳೆ ವಾಟರ್ ಟೆಸ್ಟ್ ರಿಪೋರ್ಟ್ ಬರುವ ಸಾಧ್ಯತೆ ಇದೆ. ವರದಿ ನಂತರ ಮುಂದಿನ ಕ್ರಮ ತೆಗೆದುಕೊಳ್ಳುತ್ತವೆ. ವರದಿ ಬರುವ ವೆರೆಗೆ ನದಿ ನೀರು ಬಳಕೆ ಮಾಡದಂತೆ ನದಿ‌ಪಾತ್ರದ ಗ್ರಾಮಗಳ ಜನರಿಗೆ ಢಂಗೂರ ಸಾರಿ ಹೇಳಲಾಗಿದೆ. ನೀರು ನಿಂತಿರುವುದರಿಂದ ಹಸಿರು ಆಗಿರಬಹುದು ಎಂದು ಸಂಶಯ ವ್ಯಕ್ತಪಡಿಸಿದ್ದಾರೆ.

Thungabadra river

ಇದನ್ನೂ ಓದಿ:-Lokayukta ride|ಉತ್ತರ ಕನ್ನಡ ಜಿಲ್ಲೆಯ ಇಬ್ಬರು ಉನ್ನತ ಅಧಿಕಾರಿಗಳ ಮನೆಯ ಮೇಲೆ ಲೋಕಾಯುಕ್ತ ದಾಳಿ.

ಮುಂಡರಗಿ ತಾಲೂಕಿನ ಹಮ್ಮಿಗಿ ಗ್ರಾಮದಲ್ಲಿ ಶಿಂಗಟಾಲೂರು ಏತನೀರಾವರಿ ಯೋಜನೆಯಡಿ, ತುಂಗಭದ್ರಾ ನದಿಗೆ ಬ್ಯಾರೇಜ್ ನ್ನ (ಕಿರು ಆಣೆಕಟ್ಟು) ನಿರ್ಮಿಸಲಾಗಿದೆ. ಸದ್ಯ ಬ್ಯಾರೇಜ್ ಹಿನ್ನಿರಿನಲ್ಲಿಯೂ ಇರುವ ನೀರು ಹಸಿರು ಬಣ್ಣಕ್ಕೆ ತಿರುಗಿದ್ದು, ಅಲ್ಲಿಂದ ಮುಂದೆ, ಕೊರ್ಲಹಳ್ಳಿ-ಮದಲಗಟ್ಟಿ ಸೇತುವೆ ವರೆಗೂ ನದಿಯ ನೀರು ಹಸಿರುಗೊಂಡಿದೆ.

ಇನ್ನು ನದಿ ಪಾತ್ರದಲ್ಲಿರುವ ಜಮೀನುಗಳಿಗೂ ಸಹ ಪಂಪಸೆಟ್ ಗಳ ಮೂಲಕ ಇದೇ ನೀರು ಹರಿಯುತ್ತಿದೆ. ಇದರಿಂದ ರೈತರು ಕಷ್ಟಪಟ್ಟು ಬೆಳೆದ ಬೆಳೆಗಳು ಎಲ್ಲಿ ಏನಾಗುತ್ತೋ ಅನ್ನುವ ಆತಂಕ ರೈತರಲ್ಲಿ ಕಾಡುತ್ತಿದೆ.

Green river |ಹಸಿರು ಬಣ್ಣಕ್ಕೆ ತಿರುಗಿದ ತುಂಗಭದ್ರಾ ನದಿ ನೀರು ಜನರಲ್ಲಿ ಆತಂಕ!

ನದಿಗೆ ಕಾರ್ಖಾನೆ ರಾಸಾಯನಿಕ ಸೇರಿರುವ ಆತಂಕ!

ತುಂಗಭದ್ರಾ ನದಿ ಪಾತ್ರದಲ್ಲಿ ಹಲವಾರು ಕಾರ್ಖಾನೆಗಳು ಬೀಡುಬಿಟ್ಟಿವೆ. ಇವುಗಳಿಂದ ಬರುವ ತ್ಯಾಜ್ಯಯುಕ್ತ (ರಾಸಾಯನಿಕ) ನೀರನ್ನ ನದಿಗೆ ಹರಿಬಿಟ್ಟಿದ್ದರಿಂದ ನದಿಯ ನೀರು ಹೀಗಾಗಿದೆಯಾ ಎನ್ನುವ ಅನುಮಾನ ಕಾಡತೊಡಗಿದೆ.

ಇನ್ನು ನದಿಗೆ ಡ್ರೈನೇಜ್ ವಾಟರ್ ಅಥವಾ ಕಾರ್ಖಾನೆಯ ತ್ಯಾಜ್ಯ ಬಿಟ್ಟುರುವ ಸಂಶಯ ವ್ಯಕ್ತವಾಗಿದೆ. ಇನ್ನು ಈ ನದಿಯಿಂದ ಸರಬರಾಜಾಗುವ ನೀರನ್ನು ಬೇರೆಡೆ ಸರಬರಾಜಾಗದಂತೆ ತಡೆಯಲಾಗಿದೆ.

ಸದ್ಯ ನದಿಯಲ್ಲಿರುವ ಜಲಚರಗಳಿಗೆ ಈ‌ ಹಸಿರು‌ ಬಣ್ಣದ ನೀರಿನಿಂದ ಯಾವುದೇ ಹಾನಿಯಾಗಿಲ್ಲ‌ .ಸದ್ಯ ನೀರನ್ನು ತಪಾಸಣೆಗೆ ಕಳುಹಿಸಲಾಗಿದ್ದು ,ವರದಿ ಬಂದ ನಂತರ ಇದರ ಒಳವರ್ಮ ತಿಳಿಯಲಿದೆ.

Advertisement
Advertisement
Next Article
Advertisement