Gokarna ಓಂ ಬೀಚ್ ನಲ್ಲಿ ಮಹಿಳೆಯರೇ ಹುಷಾರ್ ನಿಮ್ಮ ಮಾನಕ್ಕಿಲ್ಲ ಇಲ್ಲಿ ಕಿಮ್ಮತ್ತು! ಕಾರಣ ಇಲ್ಲಿದೆ.
Kumta news 15 November 2024:- ದೇಶದಲ್ಲಲ್ಲದೇ ವಿದೇಶದಲ್ಲೂ ಪ್ರಸಿದ್ಧಿ ಪಡೆದಿರುವ ಉತ್ತರ ಕನ್ನಡ ಜಿಲ್ಲೆಯ ಕುಮಟಾ ತಾಲೂಕಿನ ಗೋಕರ್ಣ (Gokarna) ಧಾರ್ಮಿಕ ಹಾಗೂ ಪ್ರವಾಸೋಧ್ಯಮದ ಮೂಲಕವೇ ಪ್ರಸಿದ್ಧಿ ಪಡೆದಿದೆ.
ಅದರಲ್ಲಿಯೂ ಗೋಕರ್ಣದ ಓಂ ಬೀಚ್ (OM Beach) ವಿಶ್ವ ಪ್ರಸಿದ್ಧ. ಪ್ರತಿ ವರ್ಷ ಲಕ್ಷಾಂತರ ಜನ ಓಂ ಆಕಾರದ ಈ ಬೀಚಿಗೆ ಭೇಟಿ ನೀಡುತ್ತಾರೆ.
ವಿದೇಶಿಗರ ಅಚ್ಚು ಮೆಚ್ಚಿನ ತಾಣದಲ್ಲಿ ಓಂ ಬೀಚ್ ಸಹ ಒಂದು. ಆದರೇ ಇಷ್ಟೆಲ್ಲಾ ಪ್ರಸಿದ್ಧಿ ಪಡೆದಿರುವ ಗೋಕರ್ಣದ ಓಂ ಬೀಚ್ ನನ್ನು ಜಿಲ್ಲಾಡಳಿತ ಹಾಗೂ ಗತಿಗೆಟ್ಟ ಪ್ರವಾಸೋಧ್ಯಮ ಇಲಾಖೆ ಸಂಪೂರ್ಣ ನಿರ್ಲಕ್ಷಿಸಿದೆ.
ಹೌದು ಗೋಕರ್ಣದ ಕಡಲು ಕಸದ ರಾಶಿಯಿಂದ ಗಬ್ಬು ನಾರುವ ಹಂತದಲ್ಲಿದೆ.ಈ ಹಿಂದೆ ಸಿ.ಇ.ಓ ಆಗಿದ್ದ ಎಂ.ರೋಷನ್ ರವರು ಸ್ವಚ್ಛ ಗೋಕರ್ಣಕ್ಕಾಗಿ ಅದೇನೋ ಪ್ರಾಜೆಕ್ಟ್ ಮಾಡಿದ್ದರು. ಆದರೇ ಅದು ರಾಜಕಾರಣದ ಕಡಲ ಅಬ್ಬರಕ್ಕೆ ಕಿತ್ತು ಹೋಯಿತು.
ಅದು ಹೋಗಲಿ ಸಮುದ್ರ ತೀರಭಾಗದಲ್ಲಿ ಬೇಕಾದ ಮೂಲಭೂತ ಸೌಕರ್ಯಗಳು ಹಳ್ಳ ಹಿಡಿದಿವೆ.
ಗೋಕರ್ಣದ ಓಂ ಬೀಚ್ ನ ದ್ವಾರದಲ್ಲೇ ಈ ಹಿಂದೆ ಅರಣ್ಯ ಇಲಾಖೆ ಇಲ್ಲಿಗೆ ಬರುವ ಪ್ರವಾಸಿಗರಿಗೆ ಶೌಚಾಲಯ ಹಾಗೂ ಚಿಕ್ಕ ಪಾರ್ಕ ನಿರ್ಮಿಸಿತ್ತು.
ಇದನ್ನೂ ಓದಿ:-Kumta: ಕರಾವಳಿಯಲ್ಲಿ ಮಳೆ ಸಿಡಿಲು ಬಡಿತದಿಂದ ನಾಲ್ಕು ಜನ ಅಸ್ವಸ್ಥ
ಇಲ್ಲಿಗೆ ಬಂದ ಮಹಿಳೆಯರು ,ಪುರುಷರು ನೀರಿನಲ್ಲಿ ಇಳಿದ ನಂತರ ವಸ್ತ್ರ ಬದಲಾವಣೆ ಹಾಗೂ ಶೌಚಾಲಯಕ್ಕೆ ಅರಣ್ಯ ಇಲಾಖೆ ನಿರ್ಮಿಸಿದ್ದ ಶೌಚಾಲಯಕ್ಕೆ ಹೋಗುತಿದ್ದರು.
ಆದರೇ ಇದೀಗ ಶೌಚಾಲಯ ಸಂಪೂರ್ಣ ಶಿಥಿಲಾವಸ್ತೆ ತಲುಪಿದೆ. ಪುರುಷರಿಗೆ ಸಮಸ್ಯೆ ಆಗದಿದ್ದರೂ ಒಂದ ಮಹಿಳಾ ಪ್ರವಾಸಿಗರು ಶೌಚಾಲಯಕ್ಕೆ ಹೋಗಬೇಕು ಎಂದರೇ ಅರಣ್ಯ ಇಲಾಖೆಯ ಏಕೈಕ ಶೌಚಾಲಯ ಸಂಪೂರ್ಣ ಹಾಳಾಗಿದೆ.
ಶೌಚಾಲಯಕ್ಕೆ (Toilet) ಬಾಗಿಲುಗಳೇ ಇಲ್ಲ, ಮಲ ಮೂತ್ರ ವಿಸರ್ಜನೆಗೆ ಮಹಿಳೆಯರಿಗೆ ಪುರುಷರಂತೆ ಬಯಲೇ ಗತಿ!. ವಸ್ತ್ರ ಬದಲಾವಣೆಗೆ ಪೊದೆಗಳೇ ಮಾನ ಕಾಪಾಡುವ ಸಾಧನ!.
ಅನಿವಾರ್ಯವಾಗಿ ಇಲ್ಲಿ ಬಂದ ಮಹಿಳೆಯರು ಪೊದೆಯಲ್ಲಿ ವಸ್ತ್ರ ಬದಲಾವಣೆಗೆ ಅಥವಾ ಶೌಚಕ್ಕೆ ಹೋದರೇ ಕೆಟ್ಟ ಕಣ್ಣುಗಳು ಅತ್ತ ಹೊರಳುತ್ತಿವೆ. ಇನ್ನು ದುಡ್ಡುಕೊಟ್ಟು ರೆಸಾರ್ಟ ,ಹೋಟಲ್ ಗಳಿಗೆ ಹೋಗಬೇಕು.
ಪ್ರವಾಸೋದ್ಯಮ ಇಲಾಖೆ ಕಿವಿ ,ಕಣ್ಣು ಮುಚ್ಚಿಕೊಂಡಿದೆ. ಅರಣ್ಯ ಇಲಾಖೆ ಅನುದಾನದ ಹಾಗೂ ನಿರ್ವಹಣೆಯ ಯೋಚನೆಯಲ್ಲಿದೆ.
ರಸ್ತೆಯನ್ನೇ ನುಂಗಿದ ವ್ಯಾಪಾರಿಗಳು!
ಇನ್ನು ಓಂ ಬೀಚ್ ಗೆ ಹೋಗುವ ಕಿರಿದಾದ ರಸ್ತೆ ತುಂಬ ವಾಣಿಜ್ಯ ಮಳಿಗೆಯದ್ದೇ ಕಾರುಬಾರು. ಸದ್ಯ ಪ್ರವಾಸಿಗರು ಹೆಚ್ಚಾಗಿ ಬರುತ್ತಿರುವುದರಿಂದ ಈ ಭಾಗದಲ್ಲಿ ಹೆಚ್ಚಿನ ಮಳಿಗೆಗಳು ತಲೆಎತ್ತಿವೆ.
ರಸ್ತೆಯನ್ನೇ ನುಂಗಿದ ವ್ಯಾಪಾರಸ್ತರು ಪ್ರವಾಸಿಗರು ಓಡಾಡುವ ಜಾಗದಲ್ಲಿ ತಮ್ಮ ಬಿಡಾರ ಹೂಡಿದ್ದಾರೆ. ನಿಗದಿ ಸ್ಥಳ ನುಂಗಿ ರಸ್ತೆಯನ್ನ ನುಂಗಿ ಹಾಕಿ ವ್ಯಾಪಾರ ಮಾಡುತಿದ್ದಾರೆ.
ಇದರಿಂದ ಬಂದ ಪ್ರವಾಸಿಗರು ಬೀಚಿಗೆ ತೆರಳಲು ಪರಿಶ್ರಮ ಪಡಬೇಕಿದ್ದು , ಯಾಕಪ್ಪ ಬಂದಿದ್ದೇವೆ ಎನ್ನುವ ಸ್ತಿತಿಯನ್ನು ನಿರ್ಮಾಣ ಮಾಡಿದ್ದಾರೆ.
ಸ್ಥಳೀಯ ಆಡಳಿತ ಹಣ ಮಾತ್ರ ನೋಡುತ್ತಿದೆಯೇ ವಿನಹಾ ಬೇಕಾದ ವ್ಯವಸ್ಥೆ ಕಲ್ಪಿಸದೇ ನಿರ್ಲಕ್ಷ ಮಾಡಿದ್ದು ಮಹಿಳೆಯ ಮಾನಕ್ಕೂ ಕುತ್ತು ಬರುತ್ತಿದೆ.
ಸೋಷಿಯಲ್ ಮೀಡಿಯಾದಲ್ಲೂ ಸದ್ದು!
ಇನ್ನು ಓಂ ಬೀಚ್ ,ಗೋಕರ್ಣದ ಕೆಟ್ಟ ವ್ಯವಸ್ಥೆ ಬಗ್ಗೆ ದೇಶ ,ವಿದೇಶದ ಬ್ಲಾಗರ್,ಯೂಟ್ಯೂಬರ್ (YouTube) ಗಳು ತೋರಿಸಿ ಜಿಲ್ಲೆಯ ಮಾನ ಹರಾಜು ಹಾಕುತಿದ್ದಾರೆ.
ಇಷ್ಟೆಲ್ಲಾ ಸಮಸ್ಯೆಗಳಿದ್ದರೂ ಜಿಲ್ಲಾಡಳಿತ, ಪ್ರವಾಸೋದ್ಯಮ ಇಲಾಖೆ ಏನೂ ವ್ಯವಸ್ಥೆ ಕಲ್ಪಿಸದೇ ಹಣ ಗಳಿಕೆ ಮಾತ್ರ ತಮ್ಮದೆನ್ನುವಂತೆ ಇರುವುದು ಮಾತ್ರ ದುರಂತ.
ಕೊನೆ ಪಕ್ಷ ಮಹಿಳೆಯರಿಗೆ ಈ ಭಾಗದಲ್ಲಿ ಸುಸ್ತಿತಿಯ ಶೌಚಾಲಯದ ವ್ಯವಸ್ಥೆ ಕಲ್ಪಿಸುವ ಔದಾರ್ಯ ತೋರುವ ಮೂಲಕವಾದರೂ ಮಹಿಳೆಯರ ಮಾನ ಉಳಿಸಲಿ ಎಂಬುದು ನಮ್ಮ ಆಶಯ.
ಉತ್ತರ ಕನ್ನಡ ಜಿಲ್ಲೆಯ ಜಿಲ್ಲಾಧಿಕಾರಿ ಕೂಡ ಒಬ್ಬ ಮಹಿಳೆ .ಹೀಗಾಗಿ ಇನ್ನೊಬ್ಬ ಮಹಿಳೆಯ ಸಮಸ್ಯೆ ಅರ್ಥ ಆಗಬಹುದು ಎಂಬ ನಂಬಿಕೆ ನಮ್ಮದು.