Murdeshwar ದೇವಾಲಯದ ಗೋಪುರದ ತುತ್ತ ತುದಿಗೆ ನಿಂತು ಪ್ರವಾಸಿಗ ಮಾಡಿದ್ದೇನು ಗೊತ್ತಾ?
Murdeshwar news :- ಉತ್ತರ ಕನ್ನಡ ಜಿಲ್ಲೆಯ ಭಟ್ಕಳ ತಾಲೂಕಿನ ಮುರುಡೇಶ್ವರ (Murdeshwar)ದ ಕಡಲತೀರದಲ್ಲಿ ಇತ್ತೀಚೆಗೆ ವಿದ್ಯಾರ್ಥಿನಿಯರು ಕಡಲಿಗಿಳಿದು ದುರಂತ ಸಾವಾದ ಬೆನ್ನಲ್ಲೇ ಎರಡು ತಿಂಗಳು ಕಡಲತೀರವನ್ನು ನಿರ್ಬಂಧ ಮಾಡಲಾಗಿತ್ತು.
ನಂತರ ಸುರಕ್ಷಾ ಕ್ರಮ ಅಳವಡಿಸಿ ಕಡಲ ತೀರಕ್ಕೆ ಪ್ರವಾಸಿಗರಿಗೆ ಅವಕಾಶ ಮಾಡಿಕೊಡಲಾಯಿತು.
ಆದರೇ ಪ್ರವಾಸಿಗರ ಹುಚ್ಚಾಟಗಳು ಎಷ್ಟಿವೆ ಎಂದರೇ ಕಡಲ ತೀರ (beach) ವಾಯ್ತು ಇದೀಗ 130 ಕ್ಕೂ ಹೆಚ್ಚು ಅಡಿ ಎತ್ತರದಲ್ಲಿ ಇರುವ ದೇವಸ್ಥಾನದ ಗೋಪುರದ ಮೇಲೆ ಹತ್ತಿ ಪ್ರವಾಸಿಗನೊಬ್ಬ ತುತ್ತ ತುದಿಗೆ ನಿಂತು ವಿಡಿಯೋ ಮಾಡಿದ್ದು ಇದೀಗ ಸಾಕಷ್ಟು ಚರ್ಚೆ ಹುಟ್ಟುಹಾಕಿದೆ.
ಇದನ್ನೂ ಓದಿ:-Murdeshwar:ಕಡಲ ತೀರ ನಿರ್ಬಂಧ ತೆರವು ಒಂದೇ ಗಂಟೆಯಲ್ಲಿ ಸಾವಿರಕ್ಕೂ ಹೆಚ್ಚು ಪ್ರವಾಸಿಗರ ಆಗಮನ
ದೇವಸ್ಥಾನ ಭಾಗದ ಗೋಪುರದ ಮೇಲ್ಬಾಗಕ್ಕೆ ಲಿಪ್ಟ್ ಇದ್ದು ಅಲ್ಲಿ ಮೇಲೆ ವೀಕ್ಷಣೆಗೆ ಅವಕಾಶ ಇದೆ. ಆದರೇ ಈ ಪ್ರವಾಸಿಗ ಮಾತ್ರ ದೇವಸ್ಥಾನದ ಗೋಪುರದ ಲಿಪ್ಟ್ ಇರುವ ಭಾಗ ಹೊರತುಪಡಿಸಿ ಗೋಪುರದ ತುತ್ತ ತುದಿಗೆ ಹತ್ತಿದ್ದು ಗೋಪುರ ಮೇಲ್ಭಾಗದಲ್ಲಿ ನಿಂತು ರೀಲ್ಸ್ ಮಾಡಿದ್ದಾನೆ. ಸ್ವಲ್ಪ ಆಯಾ ತಪ್ಪುದರೂ ಕೆಳಕ್ಕೆ ಬೀಳುವ ಆತಂಕವಿದೆ. ಹೀಗಿದ್ದರೂ ಯಾರು ಈತನಿಗೆ ಅಷ್ಟು ತುತ್ತ ತುದಿಗೆ ಹೋಗಲು ಅವಕಾಶ ಮಾಡಿಕೊಟ್ಟರು ಎಂಬ ಪ್ರಶ್ನೆ ಎದ್ದಿದೆ.
ಇನ್ನು ಪ್ರವಾಸಿಗರ ಹುಚ್ಚಾಟಕ್ಕೆ ಸಾವು ನೋವುಗಳಾಗುತಿದ್ದು ಇದೀಗ ಈತನ ಗೋಪುರದ ತುತ್ತ ತುದಿಗೆ ರೀಲ್ಸ್ ಮಾಡಿರುವುದು ಚರ್ಚೆಗೆ ಗ್ರಾಸವಾಗಿದೆ.