News impact:ಮರ ಕಡಿತಲೆ- ಅಂಕೋಲ ಪುರಸಭೆ ಮುಖ್ಯಾಧಿಕಾರಿ ಮೇಲೆ ಪ್ರಕರಣ ದಾಖಲು
News impact:ಮರ ಕಡಿತಲೆ- ಅಂಕೋಲ ಪುರಸಭೆ ಮುಖ್ಯಾಧಿಕಾರಿ ಮೇಲೆ ಪ್ರಕರಣ ದಾಖಲು
ಕಾರವಾರ :- ಅಂಕೋಲಾ ತಾಲೂಕಿನ ಹಿಂದೂ ಸ್ಮಶಾನಭೂಮಿಯಲ್ಲಿ ಮರ ಕಡಿದು ನಂತರ ಅದರ ಟೊಂಗೆ ನೆಟ್ಟ ಘಟನೆ ಕುರಿತು ಕನ್ನಡವಾಣಿ ವರದಿ ಬಿತ್ತರಿಸಿದ ಬೆನ್ನಲ್ಲೇ ಅರಣ್ಯ ಇಲಾಖೆ ಅಂಕೋಲ (Ankola)ಪುರಸಭೆ ಮುಖ್ಯಾಧಿಕಾರಿಯ ಮೇಲೆ ಎಫ್ ಐ ಆರ್ ದಾಖಲಿಸಿದ್ದಾರೆ.
ಹಿಂದೂ ಸ್ಮಶಾನ ಭೂಮಿಯಲ್ಲಿ ಪುರಸಭೆ ಅಧಿಕಾರಿಗಳು ಅರಣ್ಯ ಇಲಾಖೆ ಅನುಮತಿ ಇಲ್ಲದೇ ಅನಾವಶ್ಯಕವಾಗಿ ಹದಿನೈದರಿಂದ ಇಪ್ಪತ್ತುವರ್ಷ ಹಳೆಯದಾದ ಅಲದಮರವನ್ನು ಕಡಿದಿದ್ದರು.
ಇದನ್ನೂ ಓದಿ:-Ankola :ಮರ ಕಡಿದು ಕಡಿದ ಟೊಂಗೆ ನೆಟ್ಟ ಪುರಸಭೆ ಸಿಬ್ಬಂದಿ-ಹೀಗೂ ಇರುತ್ತೆ ನೋಡಿ
ಈ ಕುರಿತು ಕನ್ನಡವಾಣಿ ವರದಿ ಪ್ರಕಟಿಸಿದ ಬೆನ್ನಲ್ಲೇ ಸಾರ್ವಜನಿಕ ವಲಯದಲ್ಲಿ ಬಾರಿ ಆಕ್ರೋಶ ವ್ಯಕ್ತವಾಗಿತ್ತು, ಹಿಂದೂ ಸ್ಮಶಾನ ಭೂಮಿ ಅಭಿವೃದ್ಧಿ ಕಮಿಟಿಯ ಮುಖ್ಯಸ್ಥರು ಸ್ಮಶಾನದ ಮರಗಳ ಮೇಲೆ ನಡೆದ ದೌರ್ಜನ್ಯದ ಕುರಿತು ಪುರಸಭೆ ಮುಖ್ಯಾಧಿಕಾರಿಗೆ ಧಿಕ್ಕಾರ ಕೂಗಿ ಎಚ್ಚರಿಸಿದ್ದರು. ಅದರಂತೆಯೇ ಮಾಡಿದ ತಪ್ಪನ್ನು ಮುಚ್ಚಿಹಾಕಲು ರಾತ್ರೋ ರಾತ್ರಿ ಬುಡದಲ್ಲೇ ಕತ್ತರಿಸಿದ ಮರವನ್ನು ಮತ್ತೆ ನೆಟ್ಟು ಬಯಲಾಟ ಪ್ರದರ್ಶಿಸಿದ್ದು ಸಾರ್ವಜನಿಕ ವಲಯದಲ್ಲಿ ಬಾರಿ ಚರ್ಚೆಗೆ ಗ್ರಾಸವಾಗಿತ್ತು.
ಸುದ್ದಿ ಪ್ರಸಾರವಾದ ಬೆನ್ನಲ್ಲೇ ಅರಣ್ಯ ಇಲಾಖೆಯ ಅಧಿಕಾರಿಗಳು ಸ್ಮಶಾನ ಭೂಮಿಯಲ್ಲಿ ಮರಗಳನ್ನು ಕಡಿದ ಬಗ್ಗೆ ಪಂಚನಾಮೆ ನಡೆಸಿ ಮುಖ್ಯಾಧಿಕಾರಿಯ ಮೇಲೆ ಎಫ್ ಐ ಆರ್ ದಾಖಲಿಸಿದ್ದಾರೆ.
ಇಂದು ರಾತ್ರಿ ಪ್ರಕರಣ ದಾಖಲಿಸಿರುವ ಬಗ್ಗೆ ಅರಣ್ಯ ಇಲಾಖೆಯಿಂದ ಮಾಹಿತಿ ಬಂದಿದ್ದು ಎಫ್.ಐ.ಆರ್ ಪ್ರತಿ ದೊರಕಬೇಕಿದೆ.