Yallapura ಗಾಂಜಾ ಮಾರಾಟ ಇಬ್ಬರು ಮಹಿಳೆಯರ ಬಂಧನ
Yallapura news :-ಹುಬ್ಬಳ್ಳಿಯಿಂದ (Hubli) ಯಲ್ಲಾಪುರಕ್ಕೆ(yallapura) ಮಾದಕ ಪದಾರ್ಥವನ್ನು ಸಾಗಾಟ ಮಾಡುತಿದ್ದ ಹಾಗೂ ಕರೀದಿಗೆ ಬಂದಿದ್ದ ಇಬ್ಬರು ಮಹಿಳೆಯರನ್ನು ಯಲ್ಲಾಪುರ ಪೊಲೀಸರು ನಗರದ ತಳ್ಳಿಕೇರಿ ಕ್ರಾಸ್ ಬಳಿ ಬಂಧಿಸಿದ್ದಾರೆ.
ಬಂಧಿತ ಮಹಿಳೆಯರು ಹುಬ್ಬಳ್ಳಿಯ ನಸೀಮಾಬಾನು (35), ಯಲ್ಲಾಪುರದ ಅಂಬೇಡ್ಕರ್ ನಗರದ ಆಯಿಷಾ ಅಬ್ದುಲ್ ಮುನಾಫ್ ಗೋಜನೂರು (35) ಎಂದಾಗಿದೆ. ಬಂಧಿತರಿಂದ 50ಸಾವಿರ ಮೌಲ್ಯದ 1 ಕೆ.ಜಿ.128 ಗ್ರಾಂ ಗಾಂಜಾ ಹಾಗೂ ಗಾಂಜಾ ಸಾಗಾಟ ಮಾಡಲು ಬಳಸಿದ ಸ್ಕೂಟಿ ಹಾಗೂ ಗಾಂಜಾ ಮಾರಾಟದಿಂದ ಸಂಗ್ರಹಿಸಿದ 2500/- ರೂ.ಗಳು ಒಟ್ಟು ಮೌಲ್ಯ 82.250/- ರೂಪಾಯಿ ಸ್ವತ್ತನ್ನು ವಶಕ್ಕೆ ಪಡೆಯಲಾಗಿದೆ.
ಇದನ್ನೂ ಓದಿ:- Yallapura ಬೆಳಗಾವಿಯಿಂದ ಗೋಕರ್ಣಕ್ಕೆ ತೆರಳುತಿದ್ದ ಕಾರು ಅಪಘಾತ -ಆರು ಜನರಿಗೆ ಗಾಯ.
ಮಹಿಳೆಯರ ಗಾಂಜಾ ಸಾಗಾಟದ ಬಗ್ಗೆ ಮಾಹಿತಿ ಪಡೆದ ಯಲ್ಲಾಪುರ ಪೊಲೀಸರು ಖಚಿತ ಮಾಹಿತಿ ಆಧರಿಸಿ ದಾಳಿ ನಡೆಸಿದ್ದು ,ಈ ವೇಳೆ ಹುಬ್ಬಳ್ಳಿಯಿಂದ ಬಂದ
ನಸೀಮಾಬಾನು ಯಲ್ಲಾಪುರದ ಆಯಿಷಾಗೆ ಗಾಂಜಾ ತುಂಬಿದ ಪಟ್ಟಣ ಹಸ್ತಾಂತರ ಮಾಡುವ ವೇಳೆ ಮಾಲು ಸಮೇತ ವಶಕ್ಕೆ ಪಡೆದಿದ್ದಾರೆ.
ಇದನ್ನೂ ಓದಿ:-Karnataka ಮರಣಗಳ ಪರಿಹಾರದಲ್ಲೂ ತಾರತಮ್ಯ ಮಾಡಿದ ಕೇಂದ್ರ,ರಾಜ್ಯ ಸರ್ಕಾರ !
ಕಾರ್ಯಾಚರಣೆಯಲ್ಲಿ ಯಲ್ಲಾಪುರ ಪಿಎಸ್‌ಐ ಸಿದ್ದಪ್ಪ ಗುಡಿ.ಮಹಾವೀರ ಕಾಂಬ್ಳೆ ಹಾಗೂ ಸಿಬ್ಬಂದಿಯವರಾದ ಮಹಮ್ಮದ ಶಫೀ, ಉಮೇಶ ತುಂಬರಗಿ. ಗಿರೀಶ ಲಮಾಣಿ. ಮುತ್ತಣ್ಣ, ಚನ್ನಕೇಶವ. ಗಂಗಾರಾಮ ಮಹಿಳಾ ಸಿಬ್ಬಂದಿಗಳಾದ ರೇಣುಕಾ ಬೆಳಗಟ್ಟಿ. ದೀಪಾ ಪೈ, ಶೋಭಾ ನಾಯ್ಕ ಭಾಗಿಯಾಗಿ ದಸ್ತಗಿರಿ ಮಾಡಿದ್ದಾರೆ.