Udupi| ಉಡುಪಿಗೆ ಮೋದಿ ಆಗಮನ | ಏನಾಯ್ತು ಇಲ್ಲಿವರೆಗೆ ?
Udupi| ಉಡುಪಿಗೆ ಮೋದಿ ಆಗಮನ | ಏನಾಯ್ತು ಇಲ್ಲಿವರೆಗೆ ?
Udupi news:- ಕರಾವಳಿ ಜಿಲ್ಲೆ ಉಡುಪಿಗೆ ಇಂದು ಪ್ರಧಾನಿ ನರೇಂದ್ರಮೋದಿಯವರು ಆಗಮಿಸಿದ್ದಾರೆ.ಪರ್ಯಾಯ ಪುತ್ತಿಗೆಮಠ ಹಾಗೂ ಶ್ರೀಕೃಷ್ಣಮಠದ ಕಾರ್ಯಕ್ರಮಗಳಲ್ಲಿ ಭಾಗವಹಿಸಲು ಪ್ರಧಾನಿ ನರೇಂದ್ರ ಮೋದಿ ಇಂದು ಉಡುಪಿಗೆ ಆಗಮಿಸಿದ್ದಾರೆ. ಪ್ರಧಾನಿ ಭೇಟಿ ಹಿನ್ನೆಲೆ ಪೊಲೀಸ್ ಬಿಗಿ ಬಂದೋಬಸ್ತ್ ಕಲ್ಪಿಸಲಾಗಿದೆ.
ಮೊದಲು ಮಂಗಳೂರಿನ ವಿಮಾನ ನಿಲ್ದಾಣಕ್ಕೆ ಆಗಮಿಸಿದ ನರೇಂದ್ರ ಮೋದಿಯವರಿಗೆ ಜಿಲ್ಲಾ ಉಸ್ತುವಾರಿ ಸಚಿವ ದಿನೇಶ್ ಗುಂಡುರಾವ್ ರವರು ಸ್ವಾಗತ ಕೋರಿದರು.
Udupi| ಕಡವೆ ಗೆ ಬೈಕ್ ಡಿಕ್ಕಿ ವಾಹನ ಸವಾರ ಸಾವು ಸಹ ಸವಾರ ಗಂಭೀರ
ನಂತರ ಹೆಲೆಕಾಪ್ಟರ್ ಮೂಲಕ ಆದಿಉಡುಪಿಯ ಹೆಲಿಪಾಡ್ ಗೆ ಆಗಮಿಸಿದರು.ಇಲ್ಲಿ ರಾಜ್ಯದ ರಾಜ್ಯಪಾಲರು,ಬಿಜೆಪಿ ನಾಯಕರು ಅವರಿಗೆ ಸ್ವಾಗತ ಕೋರಿದರು.ನಂತರ ಉಡುಪಿಯ ಜಯಲಕ್ಷ್ಮೀ ಸರ್ಕಲ್ ಬಳಿ ಸೇರಿದ ಜನಸ್ತೋಮ ಹೂಮಳೆ ಸುರಿಸಿ ಮೋದಿಗೆ ಸ್ವಾಗತ ಕೋರಿದರು.ಇದೇ ಸಂದರ್ಭದಲ್ಲಿ ಕಾರಿನಿಂದ ಹೊರಬಂದ ಮೋದಿಯವರು ಜನರತ್ತ ಕೈಬೀಸಿ ಖುಷಿಪಟ್ಟರು.ಉಡುಪಿಯ ರಥಬೀದಿಯಲ್ಲಿ ಮೋದಿ 2 ಕಿ.ಮೀ ರೋಡ್ ಶೋ ನೆಡೆಸಿದರು.
ಮೋದಿ ಕಾರ್ಯಕ್ರಮ ಏನೇನು?
- ಚಿನ್ನದ ಕವಚ ಅಳವಡಿಸಿರುವ ಕನಕನ ಕಿಂಡಿ ಲೋಕಾರ್ಪಣೆ.
- ಸ್ವರ್ಣ ಖಚಿತ ಕನಕನ ಕಿಂಡಿಯ ಮೂಲಕ ಶ್ರೀಕೃಷ್ಣದೇವರ ದರ್ಶನ.
- ಅಷ್ಟಮಠಾಧೀಶರೊಂದಿಗೆ ಪ್ರಧಾನಿ ಮೋದಿ ಮಾತುಕತೆ
- ಮಠದಲ್ಲಿ ವೈದಿಕರಿಂದ ಉಪನಿಷತ್ತು, ವೇದ, ಗೀತೆ ಪಠಣ
- ಗೀತಾ ಮಂದಿರಕ್ಕೆ ಭೇಟಿ ನೀಡಲಿರುವ ಪ್ರಧಾನಿ ಮೋದಿ
- ಗೀತಾ ಮಂದಿರದಲ್ಲಿ ನೂತನ ಅನಂತಪದ್ಮನಾಭ ದೇವರ ಪ್ರತಿಮೆ ಅನಾವರಣ.
- ಧ್ಯಾನ ಮಂದಿರದಲ್ಲಿ ಧ್ಯಾನ ಮಾಡಲಿರುವ ಪ್ರಧಾನಿ ಮೋದಿ
- ಗೀತಾ ಮಂದಿರದಲ್ಲೇ ಲಘು ಉಪಹಾರ ಸ್ವೀಕಾರ
- ಮೋದಿಗಾಗಿ ತುಳುನಾಡಿನ ತಿಂಡಿಗಳ ಸಿದ್ಧತೆ
- ಲಕ್ಷ ಕಂಠ ಭಗವದ್ಗೀತಾ ಸಮಾವೇಶದಲ್ಲಿ ಪ್ರಧಾನಿ ಭಾಗಿ
- ನೆಲದ ಮೇಲೆ ಅಸೀನರಾಗಲಿರುವ ಪ್ರಧಾನಿ ಮೋದಿ
- ಭಗವದ್ಗೀತೆಯ 10 ಶ್ಲೋಕಗಳ ಪಠಣ ಮಾಡಲಿರುವ ಮೋದಿ.
ಉಡುಪಿ ಕೃಷ್ಣ ಮಠದಲ್ಲಿ ಲಕ್ಷ ಕಂಠ ಭಗವದ್ಗೀತೆ ಪಠಣ
- ಕೃಷ್ಣ ಮಠದ ಆವರಣದಲ್ಲಿ ಪಾರಾಯಣ ಪ್ರಕ್ರಿಯೆ ಆರಂಭ
- ಭಗವದ್ಗೀತೆಯ 18 ಅಧ್ಯಾಯಗಳನ್ನು ಪಠಿಸಲಿರುವ ಭಕ್ತರು
- ಮಧ್ಯಾಹ್ನ 12 .15ರ ಸುಮಾರಿಗೆ ಸಭಾಂಗಣಕ್ಕೆ ಆಗಮಿಸಲಿರುವ ನರೇಂದ್ರ ಮೋದಿ
- 15ನೇ ಅಧ್ಯಾಯ ಪುರುಷೋತ್ತಮ ಸೂಕ್ತ ಪಠಿಸಲಿರುವ ಮೋದಿ
- ಸುಮಾರು 18 ಸಾವಿರ ಜನ ಭಗವದ್ಗೀತೆ ಸಮಾವೇಶದಲ್ಲಿ ಭಾಗಿ