Uttara kannada: ಆರು ಲಕ್ಷ ಮೌಲ್ಯದ ಗೋಮಾಂಸ ಗೋವಾಕ್ಕೆ ಸಾಗಾಟ-ಇಬ್ಬರ ಬಂಧನ
Uttara kannada: ಆರು ಲಕ್ಷ ಮೌಲ್ಯದ ಗೋಮಾಂಸ ಗೋವಾಕ್ಕೆ ಸಾಗಾಟ-ಇಬ್ಬರ ಬಂಧನ
ಕಾರವಾರ:-ಅಕ್ರಮವಾಗಿ ಗೋಮಾಂಸ ವನ್ನು ಕರ್ನಾಟಕ ಗಡಿಯಿಂದ ಗೋವಾಕ್ಕೆ (Goa) ಸಾಗಿಸುತ್ತಿದ್ದ ಇಬ್ಬರನ್ನು ಉತ್ತರ ಕನ್ನಡ(Uttara kannada) ಜಿಲ್ಲೆಯ ರಾಮನಗರ ಪೊಲೀಸರು ಬಂಧಿಸಿ 6, 75, 500ರೂ. ಮೌಲ್ಯದ 1,930 ಕೆ.ಜಿ. ಗೋಮಾಂಸ ವಶಕ್ಕೆ ಪಡೆದಿದ್ದಾರೆ.
ಬೆಳಗಾವಿಯ ಚಾಲಕ ಸಿದ್ದಪ್ಪಾ ಬಾಳಪ್ಪಾ ಬದ್ದೂರ ಮತ್ತು ಕ್ಲೀನರ್ ರಾಜು ಬಾಳು ನಾಯಕ ಬಂಧಿತ ಆರೋಪಿಗಳಾಗಿದ್ದಾರೆ.ರಾಮನಗರ ಠಾಣೆಯ ಪಿಎಸ್‌ಐ ಮಹಾಂತೇಶ ನಾಯಕ ನೇತೃತ್ವದಲ್ಲಿ ಈ ಕಾರ್ಯಾಚರಣೆ ನಡೆದಿದ್ದು ಪ್ರಕರಣದ ಪ್ರಮುಖ ಆರೋಪಿ ಬೆಳಗಾವಿಯ ಅಮೋಲ್ ಮೋಹನದಾಸ ಎಂಬಾತನಿಗೆ ಪೊಲೀಸರು ಹುಡುಕಾಟ ನಡೆಸಿದ್ದಾರೆ.
ಇದನ್ನೂ ಓದಿ:-Karwar:ಕೇಣಿ ವಾಣಿಜ್ಯ ಬಂದರಿಗಾಗಿ ಮೀನುಗಾರರಿಗೆ ಹಣದ ಅಮಿಷ ,ಸುಳ್ಳು ಪ್ರಚಾರ ವಿರೋಧಿಸಿದ ಮೀನುಗಾರರು
ಅನಮೋಡ ಘಟ್ಟದಲ್ಲಿ ರಸ್ತೆ ಕುಸಿತದಿಂದಾಗಿ ರಸ್ತೆಯಲ್ಲಿ ಸದ್ಯ ಸಂಚಾರ ಸ್ಥಗಿತವಾಗಿತ್ತು.ಈ ಹಿನ್ನೆಲೆ ಪಿಎಸ್‌ಐ ಮಹಾಂತೇಶ ನೇತೃತ್ವದಲ್ಲಿ ರಾಮನಗರದಲ್ಲಿ ಗಸ್ತು ತಿರುಗುತ್ತಿದ್ದವೇಳೆ ಗೋವಾ ಕಡೆಗೆ ಹೋಗುವ ವಾಹನಗಳನ್ನು ನಿಲ್ಲಿಸಿ, ಬದಲಿ ಮಾರ್ಗಸೂಚಿಸಿ ತೋರಿಸುತ್ತಿದ್ದರು.ಈ ವೇಳೆ ಟಾಟಾ ಯೋಧಾ ವಾಹನ (KA 25 AB 6640) ಗೋವಾ ಕಡೆಗೆ ತೆರಳುತ್ತಿತ್ತು,
ವಾಹನ ನಿಲ್ಲಿಸಲು ಹೇಳಿದಾಗ, ಚಾಲಕ ವಾಹನ ನಿಲ್ಲಿಸದೇ ಗೋವಾ ಕಡೆಗೆ ಪರಾರಿಯಾಗಲು ಯತ್ನಿಸುತ್ತಿದ್ದನು.ಅನುಮಾನಗೊಂಡ ಪೊಲೀಸರು ವಾಹನ ತಡೆಹಿಡಿದು ಚಾಲಕ ಮತ್ತು ಕ್ಲೀನರ್ ವಿಚಾರಣೆ ನಡೆಸಿದ್ದರು ಈ ವೇಳೆ ವಾಹನದಲ್ಲಿ 1,930 ಕೆ.ಜಿ. ಗೋಮಾಂಸ ಪತ್ತೆಯಾಗಿದೆ.
ಇದನ್ನೂ ಓದಿ:-Ankola: ಗೊಬ್ಬರ ಗುಂಡಿಗೆ ಬಿದ್ದು ಮಗು ಸಾ**
ಆರೋಪಿಗಳ ವಿರುದ್ಧ ಕರ್ನಾಟಕ ವಧೆ ತಡೆ ಮತ್ತು ಗೋ ಸಂರಕ್ಷಣಾ ಕಾಯ್ದೆಯಡಿಯಲ್ಲಿ ಜೋಯಿಡಾ ತಾಲೂಕಿನ ರಾಮನಗರ ಠಾಣೆಯಲ್ಲಿ ಪ್ರಕರಣ ದಾಖಲು ಮಾಡಿಕೊಳ್ಳಲಾಗಿದೆ.
