ಪ್ರಮುಖ ಸುದ್ದಿಮುಖಪುಟLocal storyರಾಜ್ಯರಾಷ್ಟ್ರೀಯಅಂತರರಾಷ್ಟ್ರೀಯCrime newsಮನೋರಂಜನೆ
Advertisement

Uttara kannada|ದಾಂಡೇಲಿಗೆ ಮತ್ತೆ ಹಳಿ ಏರಿದ ಪ್ರಯಾಣಿಕರ ರೈಲು|ಹೊಸ ಡೆಮು ವೇಳಾಪಟ್ಟಿ ಪ್ರಕಟ

Uttara Kannada/dandeli news (10 December 2025):-Indian Railways approves new DEMU passenger train between Alnavar and Dandeli.
09:36 PM Dec 10, 2025 IST | ಶುಭಸಾಗರ್
Uttara Kannada/dandeli news (10 December 2025):-Indian Railways approves new DEMU passenger train between Alnavar and Dandeli.

Uttara kannada|ದಾಂಡೇಲಿಗೆ ಮತ್ತೆ ಹಳಿ ಏರಿದ ಪ್ರಯಾಣಿಕರ ರೈಲು|ಹೊಸ ಡೆಮು ವೇಳಾಪಟ್ಟಿ ಪ್ರಕಟ.

Advertisement

ವರದಿ:-ಶುಭಾ ಸಾಗರ್.

Uttara Kannada/dandeli news (10 December 2025):- ಧಾರವಾಡ ಜಿಲ್ಲೆಯ ಅಳ್ನಾವರ ಹಾಗೂ ಉತ್ತರ ಕನ್ನಡ ಜಿಲ್ಲೆಯ ದಾಂಡೇಲಿ ನಡುವೆ ಡೀಸೆಲ್ ಮಲ್ಟಿಪಲ್‌ ಯೂನಿಟ್ (Demu) ರೈಲು ಸೇವೆ ಪ್ರಾರಂಭಿಸಲು ರೈಲ್ವೆ ಸಚಿವಾಲಯ ಅನುಮೋದನೆ ನೀಡಿದೆ.

ಶೀಘ್ರದಲ್ಲಿ ಉದ್ಘಾಟನೆ ಕಾರ್ಯಕ್ರಮ ನಡೆಯಲಿದೆ ಎಂದು ರೈಲ್ವೆ ಬೋರ್ಡ್ ಮಾಹಿತಿ ನೀಡಿದೆ.

Advertisement

ರೈಲು ವೇಳಾಪಟ್ಟಿ ಹೀಗಿದೆ.( train timings schedule).

ಅಳ್ನಾವರದಿಂದ ದಾಂಡೇಲಿಗೆ (Alnawar - Dandeli)

 

 ದಾಂಡೇಲಿಯಿಂದ ಅಳ್ನಾವರಕ್ಕೆ (Dandeli -Alnawar)

ಸಂಚಾರಕ್ಕೆ ಸಿದ್ದತೆ.

4 ಬೋಗಿಗಳ ಎರಡು ಡೆಮು ರೈಲು ದಿನವಿಡೀ ಓಡಾಟ ನಡೆಸಲಿದೆ. ರೈಲಿಗೆ ಎರಡು ಜನ ಲೋಕೋ ಪೈಲಟ್ ಹಾಗೂ ಇಬ್ಬರು ಟಿಟಿಗಳನ್ನು ನೇಮಕ ಮಾಡಬೇಕು ಎಂದು ಬೋರ್ಡ್ ಸೂಚಿಸಿದೆ.

Dandeli:ದಾಂಡೇಲಿ ಜಲಸಾಹಸ ಕ್ರೀಡೆಗಳಿಗೆ ಅನುಮತಿ ನೀಡಿದ ಜಿಲ್ಲಾಡಳಿತ-ಜಿಗುರಿದ ಪ್ರವಾಸೋಧ್ಯಮ

ಈ ರೈಲು ಭಾನುವಾರವನ್ನು ಹೊರತುಪಡಿಸಿ ವಾರದ 6 ದಿನಗಳ ಕಾಲ ಸಂಚರಿಸಲಿದ್ದು, ಪ್ರತಿದಿನ 3 ಬಾರಿ ಓಡಾಟ ನಡೆಸಲಿದೆ. ಇದರಿಂದಾಗಿ ಉತ್ತರ ಕನ್ನಡದ ಪ್ರಮುಖ ಪ್ರವಾಸಿ ತಾಣವಾದ ದಾಂಡೇಲಿಗೆ ಸಂಪರ್ಕ ಇನ್ನಷ್ಟು ಸುಲಭವಾಗಲಿದ್ದು ಪ್ರವಾಸಿಗರಿಗೂ ( tourist) ಅನುಕೂಲ ಆಗಲಿದೆ.

ಐತಿಹಾಸಿಕ ನಿಲ್ದಾಣದ ವಿಶೇಷ ಏನು?

ದಾಂಡೇಲಿ ರೈಲ್ವೆ ನಿಲ್ದಾಣದ ಸಂಗ್ರಹ ಚಿತ್ರ

ದಾಂಡೇಲಿ(ಅಂಬೇವಾಡಿ)- ಅಳ್ನಾವರ-ಧಾರವಾಡ ನಡುವೆ 1918 ರಲ್ಲಿ ರೈಲ್ವೆ ಹಳಿ ನಿರ್ಮಾಣ ಮಾಡಲಾಗಿತ್ತಿ.  ದಾಂಡೇಲಿಯಿಂದ ಮರದ ದಿಮ್ಮಿಗಳನ್ನು ಸಾಗಿಸಲು ಬ್ರಿಟಿಷರು ರೈಲ್ವೆ ಹಳಿ ನಿರ್ಮಿಸಿದ್ದರು. ಆದರೆ, ಆಗ ನ್ಯಾರೋ ಗೇಜ್ ಆಗಿತ್ತು.

ಮುರುಡೇಶ್ವರ ಶಿವನ ವಿಗ್ರಹ ‘ಐಸಿಸ್ ಪತ್ರಿಕೆಯಲ್ಲಿ? ವಿಗ್ರಹದ ಶಿರಭಾಗ ಕತ್ತರಿಸಿ ಐಸಿಸ್ ಧ್ವಜದ ಚಿತ್ರ ಹಾಕಿರುವ ಮತಾಂಧರು!

1995 ರಲ್ಲಿ ನ್ಯಾರೋ ಗೇಜ್ ಹಳಿಯನ್ನು ಬ್ರಾಡ್ ಗೇಜ್ ಗೆ ಬದಲಾಯಿಸಲಾಯಿತು. ಆದರೂ ಗೂಡ್ಸ್ ರೈಲು ಮಾತ್ರ ಸಂಚಾರ ಮಾಡುತಿದ್ದು ,ಪ್ರಯಾಣಿಕರ ರೈಲು ಬಂದಿರಲಿಲ್ಲ.

 2019 ರಲ್ಲಿ ಆಗ ರೈಲ್ವೆ ಸಚಿವರಾಗಿದ್ದ ಸುರೇಶ ಅಂಗಡಿ ಅವರು ಧಾರವಾಡ-ದಾಂಡೇಲಿ ನಡುವೆ ಪ್ರಯಾಣಿಕರ ರೈಲು ಸೇವೆ ಪ್ರಾರಂಭಿಸಿದ್ದರು. ಆದರೆ, ಕೋವಿಡ್ ಕಾರಣ 2020 ರಲ್ಲಿ ಪ್ರಯಾಣಿಕರ ರೈಲು ಮತ್ತೆ ಬಂದ್ ಆಗಿತ್ತು.

ಈ ನಡುವೆ ಮಾರ್ಗ ವಿದ್ಯುದೀಕರಣ ಪೂರ್ಣಗೊಂಡಿದೆ. ಆದರೆ,  ಇಲೆಕ್ಟ್ರಿಕ್ (ಮೆಮು) ಬದಲು ಡೆಮು ರೈಲು ನೀಡಲಾಗಿದೆ‌.

ಸ್ಥಳೀಯರು ರೈಲಿಗಾಗಿ ಸಾಕಷ್ಟು ಹೋರಾಟ ನಡೆಸಿದ್ದರು. ಸಂಸದ ವಿಶ್ವೇಶ್ವರ ‌ಹೆಗಡೆ ಕಾಗೇರಿ ಅವರೂ ಈ ಬಗ್ಗೆ ಮನವಿ ಮಾಡಿದ್ದರು.

ಇತ್ತೀಚೆಗೆ ಆಗಮಿಸಿದ್ದ ರೈಲ್ವೆ ಖಾತೆ ರಾಜ್ಯ ಸಚಿವ ವಿ.ಸೋಮಣ್ಣ ಅವರು ದಾಂಡೇಲಿಗೆ ಪ್ರಯಾಣಿಕರ ರೈಲು ಸೇವೆ ಮಂಜೂರಾಗಿದೆ ಎಂದು ಮಾಹಿತಿ ನೀಡಿದ್ದರು. ಇದರ ಬೆನ್ನಲ್ಲೇ ಸಂಚಾರಕ್ಕೆ ಅವಕಾಶ ಮಾಡಿಕೊಟ್ಟಿದ್ದು ದಾಂಡೇಲಿ ಭಾಗದ ಪ್ರವಾಸೋಧ್ಯಮಕ್ಕೆ ಹೆಚ್ಚಿನ ಒತ್ತು ಸಿಗಲಿದೆ.

Dandeli: ಜೀವ ಪಣಕ್ಕಿಟ್ಟು ನದಿಯಲ್ಲಿ ಕಾರ್ಯಾಚರಣೆ ಎರಡು ದಿನದ ನಂತರ ವಿದ್ಯುತ್ ಪೂರೈಕೆ ಮಾಡಿದ ಹೆಸ್ಕಾಂ ಸಿಬ್ಬಂದಿ

ದಾಂಡೇಲಿ ಯಲ್ಲಿ ಪ್ರವಾಸಿಗರ ವೀಕ್ಷಣೆಗೆ ಏನಿದೆ?

Dandeli Wildlife Sanctuary / Kali Tiger Reserve

Dandeli ವನ್ಯಜೀವಿ ಸಂರಕ್ಷಿತ ಕಾಡು ಇಲ್ಲಿ  ಸುಮಾರು 866.4 km ವಿಸ್ತೀರ್ಣ ಹೊಂದಿದ ಅರಣ್ಯವಿದೆ.

ಇಲ್ಲಿ ಕಾಡು–ಜೀವಿ, ಪಕ್ಷಿಗಳು, ಹಳಚು ಸಸ್ಯಶಕರಬೆಲೆ, ನದಿ ಸಂಯೋಜನೆ, ಮತ್ತು ಪ್ರಕೃತಿ ಸುಂದರತೆ ಇದೆ.

ಪ್ರವಾಸಿಗರಿಗೆ ಜಂಗಲ್ ಸಫಾರಿ, ನೈಸರ್ಗಿಕ ನಡಿಗೆ-ಪಥಗಳು, ನದಿ ತೀರದ ಅನುಭವ, ಪಕ್ಷಿವೀಕ್ಷಣೆ, ಛಾಯಾಗ್ರಹಣ, ಕ್ಯಾಂಪಿಂಗ್, ಬೊಟಿಂಗ್/ಕಯಾಕಿಂಗ್/ರಾಫ್ಟಿಂಗ್  ಇಂತಹ ಅನುಭವಗಳು ಇಲ್ಲಿ ಮಾತ್ರ ಸಿಗಲಿದೆ.

Sathodi Falls ಮತ್ತು Syntheri Rock 

Sathodi Falls — ನೈಸರ್ಗಿಕ ಜಲಪ್ರಪಾತ, ಹಸಿರು ಕಾಡಿನ ಮಧ್ಯೆ ಇದ್ದು ಪ್ರವಾಸಿಗರಿಗೆ ಮೆಚ್ಚಿನ ತಾಣದಲ್ಲಿ ಒಂದು.

Syntheri Rock — ದೊಡ್ಡ ಕಲ್ಲಿನ ಬಂಡೆಗಳು, ನದಿ ತೀರಭಾಗ ಹಾಗೂ ಪ್ರಕೃತಿಯ ಸೌಂದರ್ಯ ಸವಿಯಲು ಮೆಚ್ಚಿನ ತಾಣ.

ಇನ್ನು ಇಲ್ಲಿ ಟ್ರಕ್ಕಿಂಗ್ ,ಜಂಗಲ್ ಸಫರಿ, ಹಾಗೂ ವನ್ಯಜೀವಿಗಳನ್ನು ನೋಡಲು ಉತ್ತಮ ಪ್ರದೇಶವಾಗಿದೆ.

ದಾಂಡೇಲಿ ಪ್ರಕೃತಿ ಸೊಬಗಿನ ಚಿತ್ರಗಳು ಇಲ್ಲಿವೆ.

Advertisement
Tags :
Alnavar Dandeli TrainDandeli newsDandeli tourismDandeli Tourist PlaceDandeli TravelDEMU Train ServiceDharwad RailwayIndian Railways UpdateKarnataka RailwayKarwar newsNorth Karnataka newsRailway MinistryTrain timingsUttara Kannada
Advertisement
Next Article
Advertisement