Uttara kannda :ಅಂಕೋಲದಲ್ಲಿ ಮಾರ್ಚ 5 ರ ವರೆಗೆ ನಿಷೇದಾಜ್ಞೆ ಜಾರಿ
Uttara kannda :ಅಂಕೋಲದಲ್ಲಿ ಮಾರ್ಚ 5 ರ ವರೆಗೆ ನಿಷೇದಾಜ್ಞೆ ಜಾರಿ.

ಕಾರವಾರ :- ಉತ್ತರ ಕನ್ನಡ ಜಿಲ್ಲೆಯ ಅಂಕೋಲಾ (Ankola) ದಲ್ಲಿ ಜೆ.ಎಸ್.ಡಬ್ಲೂ ಕಂಪನಿಯ ಖಾಸಗಿ ಬಂದರು ನಿರ್ಮಾಣಕ್ಕಾಗಿ ಸರ್ವೆ ಕಾರ್ಯ ನಡೆಸಲು ಸ್ಥಳೀಯರಿಂದ ವಿರೋಧ ಹಿನ್ನೆಲೆಯಲ್ಲಿ ಅಂಕೋಲ
ತಾಲೂಕಿನ ಭಾವಿಕೇರಿ(Bavikeri) ಗ್ರಾಮ ಪಂಚಾಯತ ವ್ಯಾಪ್ತಿಯ ಗ್ರಾಮಗಳು ಹಾಗೂ ಪುರಸಭೆ ಅಂಕೋಲಾ ವ್ಯಾಪ್ತಿಗೊಳಪಟ್ಟಿ ಕೇಣಿ ಗ್ರಾಮಗಳಲ್ಲಿ ಕಲಂ 163 ನಿಷೇಧಾಜ್ಞೆ ಯನ್ನು ಜಿಲ್ಲಾಧಿಕಾರಿ ಲಕ್ಷ್ಮಿ ಪ್ರಿಯಾ ರವರು ಈ ಹಿಂದಿನ ಆದೇಶವನ್ನು ಮುಂದುವರೆಸಿ ಆದೇಶಿಸಿದ್ದಾರೆ.
ಇದರಂತೆ ಫೆಬ್ರವರಿ 28 ರ ಸಂಜೆ 6 ಗಂಟೆಯಿಂದ ಮಾರ್ಚ್ 5 ರ ಸಂಜೆ 6 ಗಂಟೆಯವರೆಗೆ ಅಂಕೋಲ ಭಾಗದ ಭಾವಿಕೇರಿ ,ಕೇಣಿ ಭಾಗದಲ್ಲಿ ನಿಷೇಧಾಜ್ಞೆ ಮುಂದುವರೆಯಲಿದೆ.
ಇದನ್ನೂ ಓದಿ:-Ankola ಮೈಕ್ರೋ ಫೈನಾನ್ಸ್ ಸಾಲ ವಸೂಲಿಗೆ ಹೋದ ಸಿಬ್ಬಂದಿ ಆತ್ಮಹ*ತ್ಯೆಗೆ ಯತ್ನ!
ಈ ಅವಧಿಯಲ್ಲಿ ಹಿಂದಿನ ಆದೇಶದಲ್ಲಿ ವಿಧಿಸಲಾದ ನಿಬಂಧನೆಗಳು ಊರ್ಜಿತದಲ್ಲಿರುತ್ತದೆ ಎಂದು ಜಿಲ್ಲಾಧಿಕಾರಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಫೆ.23 ರಂದು Geotechnical Investigation Work ಕಾಮಗಾರಿ ಸಂಬಂಧ ಸರ್ವೆ ಕಾರ್ಯಕ್ಕೆ ಸ್ಥಳೀಯ ಮೀನುಗಾರರು ವಿರೋಧ ವ್ಯಕ್ತಪಡಿಸಿ ಪ್ರತಿಭಟನೆಗಿಳಿದಿದ್ದರು. ಈ ವೇಳೆ JSW ಕಂಪನಿಯಿಂದ ಸರ್ವೆ ಕಾರ್ಯ ನಿಲ್ಲಿಸಲಾಗಿತ್ತು. ನಂತರ ಮೀನುಗಾರ ಮುಖಂಡರ ಹಾಗೂ ಜನಪ್ರತಿನಿಧಿಗಳು,ಅಧಿಕಾರಿಗಳೊಂದಿಗೆ ಅಂಕೋಲ ತಹಶಿಲ್ದಾರ್ ಕಚೇರಿಯಲ್ಲಿ ನಡೆದ ಸಭೆಯೂ ವಿಫಲವಾಗಿತ್ತು.
ಹೀಗಾಗಿ ನಿಷೇಧಾಜ್ಞೆಯನ್ನು ಮುಂದುವರೆಸಿ ಬಿಗಿ ಪೊಲೀಸ್ ಬಂದವಸ್ತ್ ನಲ್ಲಿ ಸರ್ವೆ ಕಾರ್ಯ ಕೈಗೊಳ್ಳಲು ಜಿಲ್ಲಾಡಳಿತ ಸಜ್ಜಾಗಿದ್ದು ಇದೀಗ ನಿಷೇಧಾಜ್ಞೆ ನಡುವೆ ಸರ್ವೆ ಕಾರ್ಯ ನಡೆಸಲಿದ್ದಾರೆ.