Uttara kannada| 251.6 ಹೆಕ್ಟೇರ್ ಭತ್ತ,ಜೋಳ ಬೆಳ ನಷ್ಟ !
Uttara kannada| 251.6 ಹೆಕ್ಟೇರ್ ಭತ್ತ,ಜೋಳ ಬೆಳ ನಷ್ಟ !
ಕಾರವಾರ (october 15) ರಾಜ್ಯದಲ್ಲಿ ಈ ವರ್ಷ ಸುರಿದ ಅಬ್ಬರದ ಮಳೆಯಿಂದ, ಉತ್ತರ ಕನ್ನಡ (uttara kannada) ಜಿಲ್ಲೆಯಲ್ಲಿ ಭತ್ತ, ಮೆಕ್ಕೆಜೋಳ ಬೆಳೆ ನಾಶವಾಗಿದ್ದು. ಸಾಲ ಸೂಲ ಮಾಡಿ ಬೆಳೆ ಬಾರದೆ ಅನ್ನದಾತ ಪರಿಹಾರವೂ ಬಾರದೇ ಆತಂಕದಲ್ಲಿ ಕಾಲ ಕಳೆಯುವಂತಾಗಿದೆ.
ಉತ್ತರ ಕನ್ನಡ ಜಿಲ್ಲೆಯ ಎಲ್ಲೆಲ್ಲಿ ಬೆಳೆ ನಾಶ!
ಒಂದೆಡೆ ಅತೀ ಮಳೆಯಿಂದ (rain)ಸೊರಗಿ ನಿಂತ ಜೋಳದ ಬೆಳೆಗಳು,ಮತ್ತೊಂದೆಡೆ ನೋವು ತೋಡಿಕೊಳ್ಳುತ್ತಿರುವ ರೈತ ,ಹೌದು ಉತ್ತರ ಕನ್ನಡ ಜಿಲ್ಲೆಯಲ್ಲಿ (uttara kannada) ಸುರಿದ ಅಬ್ಬರದ ಮಳೆ ಜಿಲ್ಲೆಯ ಕೆಲವು ಕಡೆ ಗುಡ್ಡ ಕುಸಿತ, ಪ್ರವಾಹ ಹಾಗೂ ಕಡಲ ಕೊರೆತ ಅವಘಡ ಸಂಭವಿಸುವುದರ ಜೊತಗೆ ಮಲೆನಾಡು ಮತ್ತು ಬಯಲು ಸೀಮೆ ಭಾಗದಲ್ಲಿ ಕೃಷಿಯನ್ನೆ ನಂಬಿ ಜೀವನ ಮಾಡುತ್ತಿದ್ದ ಅನ್ನದಾತರಿಗೆ ಸಂಕಷ್ಟ ಎದುರಾಗಿದೆ.
Sirsi| ಬಾಯಿ ಚಪಲ,ಕಾಡುಹಂದಿ ,ಆಮೆ ಮಾಂಸ ತಿಂದು ಸಿಕ್ಕಿಬಿದ್ದ ಆರೋಪಿ| ಉಳಿದವರು ಪರಾರಿ
ಜಿಲ್ಲೆಯ ಜೋಯಿಡಾ,ಮುಂಡಗೋಡು,ಶಿರಸಿ, ಬನವಾಸಿ, ಮುಂಡಗೋಡ ಹಾಗೂ ಸಿದ್ಧಾಪುರ ಭಾಗದಲ್ಲಿ ಅಡಿಕೆ, ಭತ್ತ ಮತ್ತು ಮೆಕ್ಕೆಜೋಳವನ್ನ ಅತೀ ಹೆಚ್ಚು ಬೆಳೆಯಲಾಗುತ್ತದೆ. ಆದ್ರೆ ಮೆಕ್ಕೆಜೋಳ ಮೇ ತಿಂಗಳಲ್ಲಿ ಬಿತ್ತನೆ ಮಾಡಿದ ಸಂದರ್ಭದಲ್ಲಿ ಅತಿ ಹೆಚ್ಚು ಮಳೆ ಸುರಿದ ಹಿನ್ನೆಲೆ, ಎರಡನೇ ಬಾರಿಗೆ ಬಿತ್ತನೆ ಮಾಡಿದ್ರೂ ಅತೀ ಮಳೆಯಿಂದ ತೆನೆ ಕಟ್ಟದೇ ನೂರಾರಯ ಹೆಕ್ಟೇರ್ ಜೋಳಗಳು ನಾಶವಾಗಿದೆ. ಇನ್ನೂ ಅಡಿಕೆ ತೋಟದಲ್ಲಿ ಅತಿ ಹೆಚ್ಚು ನೀರು ನಿಂತ ಪರಿಣಾಮ ಕೊಳೆ ರೋಗ ಆವರಿಸಿದೆ. ಅಷ್ಟೆ ಅಲ್ಲದೆ ಭತ್ತ ಬೆಳೆ ಕೂಡ ನಿರಿಕ್ಷಿಸಿದ ಮಟ್ಟಿಗೆ ಈ ವರ್ಷ ಇಳುವರಿ ಸಿಗದೆ ಪರದಾಡುವಂತಾಗಿದರೇ ಜೋಯಿಡಾ ಭಾಗದ ನದಿ ತೀರ ಭಾಹದಲ್ಲಿ ಪ್ರವಾಹಕ್ಕೆ ಭತ್ತದ ಬೆಳೆ ನಾಶವಾಗಿದೆ.
ಈಭಾರಿ ರೈತರಿಗೆ ಇಳುವರಿಯೇ ಸಿಕ್ಕಿಲ್ಲ, ಅಡಿಕೆಗೆ ಕೊಳೆರೋಗ ಬಂದಿದೆ,ಜೋಳ ,ಭತ್ತ ನಾಶವಾಗಿದೆ.ಹೀಗಾಗಿ ರೈತರಿಗೆ ಹೆಚ್ಚಿನ ಪರಿಹಾರ ನೀಡಬೇಕು ಎಂಬುದು ಜಿಲ್ಲಾ ಕಿಸಾನ್ ಕಾಂಗ್ರೆಸ್ ಅಧ್ಯಕ್ಷ ನಟರಾಜ್ ಹೊಸೂರು ರವರ ಆಗ್ರಹ.
ಇನ್ನು ಮೂರು ಬಾರಿ ಜೋಳ ಬಿತ್ತನೆ ಮಾಡಿದ್ದೇವೆ, ಅತೀ ಮಳೆಯಿಂದ ಎಲ್ಲವೂ ನಾಶವಾಗಿದೆ ,ಸಾಲ ಮಾಡಿದ ಬಡ್ಡಿ ಕಟ್ಟದಷ್ಟು ಈಬಾರಿ ಕಷ್ಟವಾಗಿದೆ,ತಕ್ಷಣ ಬೆಳೆ ನಷ್ಟ ಪರಿಹಾರ ಬಿಡುಗಡೆ ಮಾಡಬೇಕು ಎಂಬುದು ಬನವಾಸಿಯ ಬೀರಪ್ಪ ಎಂಬ ರೈತನ ಆಗ್ರಹ.
Karnataka|ಸೆಲ್ಫಿ ತೆಗೆಯಲು ಹೋಗಿ ಸಮುದ್ರಪಾಲಾದ ಶಿವಮೊಗ್ಗದ ಪ್ರವಾಸಿಗ
ಪ್ರತಿವರ್ಷ ಸೆಪ್ಟಂಬರ್ ತಿಂಗಳಲ್ಲಿ ಮೆಕ್ಕೆಜೋಳ ರಾಶಿ ಮಾಡಿ ಅಕ್ಟೋಬರ್ ತಿಂಗಳಲ್ಲಿ ಎರಡನೆ ಬೆಳೆಯ ಬಿತ್ತನೆ ಕಾರ್ಯ ಆರಂಭ ಮಾಡಲಾಗುತಿತ್ತು. ಆದ್ರೆ ಈ ವರ್ಷ ಈಗಾಗಲೇ ಎರಡು ಬಾರಿ ಬಿತ್ತನೆ ಮಾಡಿದ್ರು. ಸೂಕ್ತ ಬೆಳೆ ಬಾರದೆ ಸಾಲದ ಸೂಳಿಯಲ್ಲಿ ಸಿಲುಕಿರುವ ರೈತರು ಈಗ ಮತ್ತೆ ಮೂರನೇ ಬಾರಿಗೆ ಬಿತ್ತನೆ ಮಾಡಲು ಆರ್ಥಿಕ ಮತ್ತು ಮಾನಸಿಕ ಶಕ್ತಿ ಇಲ್ಲದಂತಾದ ಪರಿಣಾಮ ಶಿರಸಿ ತಾಲೂಕಿನ ಬಹುತೇಕ ಮೆಕ್ಕೆಜೋಳ ಗದ್ದೆಗಳು ಪಾಳು ಬಿದ್ದಿದೆ.
ಉತ್ತರ ಕನ್ನಡ ಜಿಲ್ಲೆಯಲ್ಲಿ ನಷ್ಟವಾದ ಬೆಳೆಯೆಷ್ಟು?
ಉತ್ತರ ಕನ್ನಡ ಜಿಲ್ಲೆಯಲ್ಲಿ (uttara kannada) ಮೆಕ್ಕೆಜೋಳ 246.3 ಹೆಕ್ಟೇರ್ ,5.3 ಹೆಕ್ಟೇರ್ ಭತ್ತ ಒಟ್ಟು 251.6ಹೆಕ್ಟೇರ್ ಕೃಷಿ ಬೆಳೆಗಳು ನಾಶವಾಗಿದೆ.ಈವರೆಗೂ ಸರ್ಕಾರದಿಂದ ಬೆಳ ಪರಿಹಾರ ಹಣ ಶೀಘ್ರದಲ್ಲಿ ನೀಡಲಾಗುತ್ತದೆ ಎನ್ನುತ್ತಾರೆ ಜಿಲ್ಲಾ ಕೃಷಿ ಇಲಾಖೆ ಜಂಟಿ ನಿರ್ದೇಶಕ ಶಿವಪ್ರಸಾದ್ ಗಾಂವಕರ್ .
ಉತ್ತರ ಕನ್ನಡ(uttara kannada) ಜಿಲ್ಲೆಯಲ್ಲಿ ಈ ವರ್ಷ ಸುರಿದ ಮಳೆ ಕರಾವಳಿಯಲ್ಲಿ ಭಾರಿ ಅವಾಂತರ ಸೃಷ್ಟಿ ಮಾಡಿದ್ರೆ ಅತ್ತ ಮಲೆನಾಡು ಮತ್ತು ಬಯಲು ಸಿಮೆ ಭಾಗದಲ್ಲಿ ಅನ್ನದಾತರನ್ನ ಸಾಲದ ಸುಳಿಯಲ್ಲಿ ಸಿಲುಕಿಸಿ ಆತಂಕದಲ್ಲಿ ದಿನ ದೂಡುವಂತೆ ಮಾಡಿದೆ. ಸರ್ಕಾರ ಆದಷ್ಟು ಬೇಗ ಸೂಕ್ತ ಪರಿಹಾರ ಕೊಟ್ರೆ ಅನ್ನದಾತರು ತಕ್ಕ ಮಟ್ಟಿಗಾದ್ರೂ ,ಆತಂಕ ದೂರ ಆಗಲಿದೆ.