ಪ್ರಮುಖ ಸುದ್ದಿಮುಖಪುಟLocal storyರಾಜ್ಯರಾಷ್ಟ್ರೀಯಅಂತರರಾಷ್ಟ್ರೀಯCrime newsಮನೋರಂಜನೆ
Advertisement

Uttara kannada| ಉತ್ತರ ಕನ್ನಡ C.S.R ಫಂಡ್ ಗಳು ಸರ್ಕಾರಿ ಕಚೇರಿ ಅಭಿವೃದ್ಧಿಗೆ ಮಾತ್ರ ಸೀಮಿತ! 

Despite major industries in Uttara Kannada, only ₹51.96 crore CSR funds spent in 5 years—mostly on government offices, not local development.
12:48 PM Oct 24, 2025 IST | ಶುಭಸಾಗರ್
Despite major industries in Uttara Kannada, only ₹51.96 crore CSR funds spent in 5 years—mostly on government offices, not local development.

Uttara kannada| ಉತ್ತರ ಕನ್ನಡ C.S.R ಫಂಡ್ ಗಳು ಸರ್ಕಾರಿ ಕಚೇರಿ ಅಭಿವೃದ್ಧಿಗೆ ಮಾತ್ರ ಸೀಮಿತ! 

Advertisement

ಕಾರವಾರ :- ಉತ್ತರ ಕನ್ನಡ (uttara kannada )ಜಿಲ್ಲೆ ರಾಜ್ಯದಲ್ಲಿ ಹಿಂದುಳಿದ ಜಿಲ್ಲೆಗಳ ಪಟ್ಟಿಯಲ್ಲಿ  ಅಗ್ರ ಸ್ಥಾನದಲ್ಲಿ ಇಲ್ಲದಿದ್ದರೂ ರಾಜ್ಯದಲೇ ಅಭಿವೃದ್ಧಿಯಲ್ಲಿ ಹಿಂದೆ ಉಳಿದ ಜೋಯಿಡಾ , ಈ ವರೆಗೂ ವಿದ್ಯುತ್,ರಸ್ತೆಗಳೇ ಕಾಣದ ಗ್ರಾಮಗಳಿರುವ ಜಿಲ್ಲೆಯಾಗಿದೆ.

ಈ ಜಿಲ್ಲೆಯಲ್ಲಿ ಸರ್ಕಾರದ ಹಲವು ಯೋಜನೆಗಳು ಮೇಲಿಂದ ಮೇಲೆ ಹೇರಲಾಗುತ್ತಿದೆ. ಬೃಹತ್ ವಿದ್ಯುತ್ ಉತ್ಪಾದನಾ ಘಟಕ, ಕೈಗಾ ಅಣುಸ್ಥಾವರ , ಕಾರ್ಖಾನೆಗಳು,ವಾಣಿಜ್ಯ ಬಂದರು ಸೇರಿದಂತೆ ಹಲವು ಯೋಜನೆಗಳು ಇಲ್ಲಿವೆ.

Karnataka|ಸೆಲ್ಫಿ ತೆಗೆಯಲು ಹೋಗಿ ಸಮುದ್ರಪಾಲಾದ ಶಿವಮೊಗ್ಗದ ಪ್ರವಾಸಿಗ

Advertisement

ಉತ್ತರ ಕನ್ನಡ ಜಿಲ್ಲೆಯಲ್ಲಿ ಬೃಹತ್ ಯೋಜನೆಗಳಿದ್ದರೂ ಸಮುದಾಯ ಅಭಿವೃದ್ಧಿ ನಿಧಿ (ಸಿಎಸ್‌ಆರ್) ಅನು ದಾನ ರಾಜ್ಯದ ಶೇ.1ರಷ್ಟು ಕೂಡ ಜಿಲ್ಲೆಗೆ ಸಿಗುತ್ತಿಲ್ಲ. ಸಿಕ್ಕಿರುವ ಅನುದಾನವೂ ಸರಕಾರಿ ಕಚೇರಿಗಳ ಸೌಲಭ್ಯಕ್ಕೆ ಖರ್ಚಾಗುತ್ತಿವೆ.

Uttara kannada| 251.6 ಹೆಕ್ಟೇರ್ ಭತ್ತ,ಜೋಳ ಬೆಳ ನಷ್ಟ !

ರಾಜ್ಯದಲ್ಲಿ ಪ್ರತಿ ವರ್ಷ ವಾಣಿಜ್ಯ ಕಂಪನಿಗಳ ಸಿ.ಆರ್,ಝಡ್  ಅನುದಾನದ ಎರಡರಿಂದ ಎರಡೂವರೆ ಸಾವಿರ ಕೋಟಿ ರೂ.ವರೆಗೆ ವೆಚ್ಚವಾಗುತ್ತಿದೆ. ಅದರಲ್ಲಿ ಜಿಲ್ಲೆಯಲ್ಲಿ ಶೇ.1ರಷ್ಟು ಹಣ ಕೂಡ ಖರ್ಚಾಗುತ್ತಿಲ್ಲ. ಖರ್ಚಾಗುವ ಅಲ್ಪ ಹಣವೂ ಸರಕಾರಿ ಕಚೇರಿಗಳ ಪೀಠೋಪಕರಣ, ಕಚೇರಿ ಅಲಂಕಾರ, ವಾಹನ ಖರೀದಿ ಇಂಥ ಸೌಕರ್ಯಕ್ಕಾಗಿಯೇ ಹೆಚ್ಚು ಬಳಕೆ ಮಾಡಿಕೊಳ್ಳಲಾಗಿದೆ. ಇದರಿಂದ ಜಿಲ್ಲೆಯಲ್ಲಿ ಬೃಹತ್ ಯೋಜನೆಗಳು ಇದ್ದರೂ ಸ್ಥಳೀಯ ಮಟ್ಟದ ಮೂಲಭೂತ ಅಭಿವೃದ್ಧಿಗೆ  ಪ್ರಯೋಜನ ಇಲ್ಲದಂತಾಗಿದೆ.

ಉತ್ಪಾದನಾ ಉದ್ಯಮಗಳು ತಮ್ಮ ಆದಾಯ ದಲ್ಲಿ ಶೇ.2ರಷ್ಟು ಹಣವನ್ನು ಸಿಎಸ್‌ಆರ್ ಚಟುವಟಿಕೆಗೆ ಮೀಸಲಿಡಬೇಕು. ಆ ಹಣವನ್ನು ಘಟಕ ಕಾರ್ಯ ವ್ಯಾಪ್ತಿಯಲ್ಲಿ ಖರ್ಚು ಮಾಡಬೇಕು. ಜಿಲ್ಲೆಯಲ್ಲಿ ದೊಡ್ಡ ಆದಾಯ ಹೊಂದಿರುವ ಕರ್ನಾಟಕ ವಿದ್ಯುತ್ ನಿಗಮ (ಕೆಪಿಸಿ), ಕೈಗಾ ಸ್ಥಾವರ, ಪೇಪರ್ ಮಿಲ್, ಗಾರ್ಮೆಂಟ್ ಇಂಡಸ್ಟ್ರೀಸ್ ಮತ್ತು ಸಕ್ಕರೆ ಕಾರ್ಖಾನೆ ಪ್ರಮುಖವಾಗಿವೆ.

ಇದರ ಜತೆಗೆ ಕದಂಬ ನೌಕಾನೆಲೆ ಮತ್ತು ವಾಣಿಜ್ಯ ಬಂದರು ಸಂಬಂಧ ಅನೇಕ ಕಂಪನಿಗಳು ಜಿಲ್ಲೆಯಲ್ಲಿ ಘಟಕ ಹೊಂದಿದೆ. ಇವುಗಳ ಸಿ.ಎಸ್.ಆರ್ .ಅನುದಾನ ಶಾಲೆ ಕಟ್ಟಡ ಕಟ್ಟುವುದಕ್ಕೆ ಸೀಮಿತವಾದರೇ ಸಾರ್ವಜನಿಕ ಮೂಲ ಸೌಕರ್ಯಗಳ ಅಭಿವೃದ್ಧಿ ಗೆ ಕಾಣಿಕೆ ಅತ್ಯಲ್ಪ.

ಸಿ.ಎಸ್.ಆರ್ ಖರ್ಚು ಎಲ್ಲಿ ಎಷ್ಟು?

ಕೇಂದ್ರ ಕಾರ್ಪೋರೇಟ್ ವ್ಯವಹಾರಗಳ ಸಚಿವಾಲಯದಲ್ಲಿ (MCM) ಕಂಪನಿಗಳು ಸಲ್ಲಿಸಿದ ವರದಿ ಆಧಾರದ ಮೇಲೆ 2023-24 ನೇ ಸಾಲಿನ ಮಾಹಿತಿ ದಾಖಲಾಗಿದೆ. ಅದರ ಪ್ರಕಾರ 2023-24 ವರೆಗೆ ಹಿಂದಿನ ಐದು ವರ್ಷಗಳಲ್ಲಿ ಉತ್ತರ ಕನ್ನಡ ಜಿಲ್ಲೆಗೆ ಖರ್ಚಾಗಿರುವ ಸಿ.ಎಸ್.ಆರ್ ಹಣ 51.96 ಕೋಟಿ ರೂ ಮಾತ್ರ . ಇದೇ ಐದು ವರ್ಷದಲ್ಲಿ ಕರ್ನಾಟಕದಲ್ಲಿ 8889.4 ಕೋಟಿ ಖರ್ಚು ಮಾಡಲಾಗಿದ್ದು , ಹೆಚ್ಚಾಗಿ ಮಹಾನಗರಗಳಿಗೆ ಖರ್ಚು ಮಾಡಲಾಗಿದೆ. ಆದರೇ ಜಿಲ್ಲಾವಾರು ಖರ್ಚಾದ ಹಣ ಅತೀ ಕಡಿಮೆ ಇದ್ದು , ಕಾರ್ಖಾನೆಗಳು, ಯೋಜನಾ ಕಂಪನಿಗಳಿದ್ದರೂ ಅಲ್ಲಿಗೆ ಬಳಸುವ ಹಣ ಬೇರೆಡೆ ಬಳಸಲಾಗುತ್ತಿದೆ.

2023-24 ರಲ್ಲಿ ರಾಜ್ಯಕ್ಕೆ - 2,254.88 ಕೋಟಿ ಹಣ ಖರ್ಚು ಮಾಡಲಾಗಿದ್ದು  ,ಉತ್ತರ ಕನ್ನಡ ಜಿಲ್ಲೆಗೆ 19.39  ಕೋಟಿ ಮಾತ್ರ ನೀಡಲಾಗಿದೆ.

Advertisement
Tags :
CorporateFundsCorporateSocialResponsibilityCSRFundsCSRReportDevelopmentIssuesGovernmentOfficesInfrastructureDevelopmentJoidaKadambaShipyardKaigaPlantKarnatakaCSRKarnatakaEconomyKarnatakaNewsKPCLLocalDevelopmentPublicInfrastructureUttarakannadaUttaraKannadaDevelopment
Advertisement
Next Article
Advertisement