Uttarakannada| ಜಿಲ್ಲಾಧಿಕಾರಿ ಎಂದು ನಂಬಿ ಹಣ ಕೊಟ್ಟವರಿಗೆ ಪಂಗನಾಮ!
Uttarakannada| ಜಿಲ್ಲಾಧಿಕಾರಿ ಎಂದು ನಂಬಿ ಹಣ ಕೊಟ್ಟವರಿಗೆ ಪಂಗನಾಮ!
ಕಾರವಾರ :- ಉತ್ತರ ಕನ್ನಡ ಜಿಲ್ಲಾಧಿಕಾರಿ ಲಕ್ಷ್ಮೀ ಪ್ರಿಯಾ ರವರು ತಮ್ಮ ಫೇಸ್ ಬುಕ್ ಮೂಲಕ ಹಲವು ಜನರಿಗೆ ಹಣ ಕೇಳಿದ್ದಾರೆ! , ಕಾಲ್ ಮಾಡಿ ಸಹ ಹಣ ಹಾಕಿಸಿಕೊಂಡಿದ್ದಾರೆ. ಹೀಗೆ ಹಣ ಕೊಟ್ಟವರು ಜಿಲ್ಲಾಧಿಕಾರಿ ಕಚೇರಿಗೆ ಹೋಗಿ ಹಣ ನೀಡಿದ ಮಾಹಿತಿ ತಿಳಿಸಲು ಹೋಗಿ ಕೊನೆಗೆ ತಾವು ಸೈಬರ್ ವಂಚನೆಗೆ ಒಳಗಾಗಿದ್ದು ತಿಳಿದು ಶಾಕ್ ಆಗಿದ್ದಾರೆ.
ಈ ಹಿಂದೆ ಜಿಲ್ಲಾಧಿಕಾರಿ ರವರ ಫೇಸ್ ಬುಕ್ ನಕಲಿ ಖಾತೆಯನ್ನು ತೆರೆಯಲಾಗಿತ್ತು. ಈ ಖಾತೆಗೆ ಜಿಲ್ಲೆಯ ಉದ್ಯಮಿಗಳಿಂದ ಹಿಡಿದು ಹಲವರು ಸೇರಿಕೊಂಡಿದ್ದರು.
ಕೊನೆಗೆ ಜಿಲ್ಲಾಧಿಕಾರಿ ಗಮನಕ್ಕೆ ಬಂದ ನಂತರ ದೂರು ನೀಡಿ ಆ ಖಾತೆಯನ್ನು ಲಾಕ್ ಮಾಡಿಸಿದ್ದರು.ಇನ್ನು ಇದರ ಬೆನ್ನಹಿಂದೆ ಬಿದ್ದ ಸೈಬರ್ ಕ್ರೈಮ್ ತಂಡ ಆತ ಮಹರಾಷ್ಟ್ರ ಮೂಲದವನು ಎಂದು ಪತ್ತೆ ಹಚ್ಚಿದ್ದರು. ಆತನ ವಿಳಾಸಕ್ಕೆ ತೆರಳಿದಾಗ ಆತ ಅಲ್ಲಿ ಇರದೇ ಸುಳ್ಳು ಮಾಹಿತಿಯ ದಾಖಲೆ ನೀಡಿರುವುದು ಬೆಳಕಿಗೆ ಬಂದಿದೆ.
Karwar news: ಈ ಗಣೇಶನಿಗೆ ಮುಸ್ಲೀಮರೇ ಪೂಜೆ-ಕಾರವಾರದಲ್ಲೊಂದು ಕೋಮು ಸೌಹಾರ್ಧ ಸಾರುವ ಗಣಪ
ಆದರೇ ಇದೀಗ ಮತ್ತೆ ಜಿಲ್ಲಾಧಿಕಾರಿ ಹೆಸರಿನಲ್ಲಿ ದೂರವಾಣಿ ಕರೆ ಸಹ ಬರುತಿದ್ದು , ದಾಂಡೇಲಿ ಮೂಲದ ವ್ಯಕ್ತಿಯೊಬ್ಬರು ಎರಡುಸಾವಿರ ಹಣ ಹಾಕಿ ಕಳೆದುಕೊಂಡರೇ ,ಜಿಲ್ಲೆಯ ಇಬ್ಬರು ವ್ಯಾಪಾರಿಗಳು 80 ಸಾವಿರ ನೀಡಿರುವುದಾಗಿ ತಿಳಿದುಬಂದಿದೆ. ಆದರೇ ಈ ಬಗ್ಗೆ ಸಿ.ಎನ್ ಠಾಣೆ (ಸೈಬರ್ ಠಾಣೆ)ಯಲ್ಲಿ ದೂರು ದಾಖಲಿಸಿಲ್ಲ ಎಂಬ ಮಾಹಿತಿ ತಿಳಿದುಬಂದಿದೆ. ಇನ್ನು ಹಣ ವಂಚನೆಯಾದ ಯಾರೊಬ್ಬರೂ ದೂರು ದಾಖಲಿಸದೇ ಇರುವುದು ಪ್ರಶ್ನೆ ಮೂಡುವಂತಾಗಿದೆ.
ಇನ್ನು ಜಿಲ್ಲಾಧಿಕಾರಿ ಕಚೇರಿಯಿಂದಲು ಸಹ ಈರೀತಿ ಯಾರೂ ಹಣ ನೀಡಿ ವಂಚನೆಗೆ ಒಳಗಾಗಬೇಡಿ ಸೈಬರ್ ಠಾಣೆಗೆ ದೂರು ನೀಡುವಂತೆ ತಿಳಿಸಿದ್ದಾರೆ.