Uttara kannada: ಜಿಲ್ಲೆಯ ಜನರಿಗೆ ವಿಪತ್ತು ನಿರ್ವಹಣಾ ಪ್ರಾಧಿಕಾರ ದಿಂದ ಎಚ್ಚರಿಕೆ! ಏನದು?
Uttara kannda: ಜಿಲ್ಲೆಯ ಜನರಿಗೆ ವಿಪತ್ತು ನಿರ್ವಹಣಾ ಪ್ರಾಧಿಕಾರ ದಿಂದ ಎಚ್ಚರಿಕೆ! ಏನದು?
ಕಾರವಾರ :- ಉತ್ತರ ಕನ್ನಡ ಜಿಲ್ಲೆಯಾಧ್ಯಾಂತ ಇನ್ನೂ ಮೂರು ದಿನಗಳ ಕಾಲ ಅಬ್ಬರದ ಮಳೆ (rain) ಸುರಿಯುವ ಎಚ್ಚರಿಕೆಯನ್ನು ಹವಾಮಾನ ಇಲಾಖೆ ನೀಡಿದೆ. ಈ ಹಿನ್ನಲೆಯಲ್ಲಿ ಮೇ.27 ರ ವರೆಗೆ ರೆಡ್ ಅಲರ್ಟ (Red Alert )ಇರಲಿದೆ.
ಜಿಲ್ಲಾ ವಿಫತ್ತು ನಿರ್ವಹಣಾ ಪ್ರಾಧಿಕಾರದಿಂದ ಎಚ್ಚರಿಕೆ!
ಉತ್ತರ ಕನ್ನಡ ಜಿಲ್ಲೆಯಲ್ಲಿ 439 ಭೂ ಪ್ರದೇಶಗಳು ಅತೀ ಸೂಕ್ಷ್ಮವಿದ್ದು ಯಾವ ಭಾಗದಲ್ಲಿಯಾದರೂ ಮಳೆಯಿಂದ ಗುಡ್ಡ ಕುಸಿಯುವ ಆತಂಕವಿದೆ. ಈ ಹಿನ್ನಲೆಯಲ್ಲಿ ರಾಷ್ಟ್ರೀಯ ಹೆದ್ದಾರಿ 66 ಹಾಗೂ ಘಟ್ಟ ಭಾಗದಲ್ಲಿ ಪ್ರಯಾಣಿಸುವ ಪ್ರಯಾಣಿಕರು ಎಚ್ಚರಿಕೆಯಿಂದ ಇರುವಂತೆ ತಿಳಿಸಿದ್ದು ,ಗುಡ್ಡ ಭಾಗದಲ್ಲಿ ಇರುವ ಜನರಿಗೆ ವಿಶೇಷ ಎಚ್ಚರಿಕೆಯಿಂದರಲು ಸೂಚಿಸಿದೆ.
ಇನ್ನು ಅಂಕೋಲದ ಶಿರೂರು ಭಾಗದ ಹೆದ್ದಾರಿ ಭಾಗದ ಗುಡ್ಡ ಪ್ರದೇಶದಲ್ಲಿ ಮಣ್ಣು ಸಡಿಲವಾಗಿದ್ದು ಚಿಕ್ಕ ಪ್ರಮಾದಲ್ಲಿ ಕುಸಿಯುತಿದ್ದು ಆ ಭಾಗದಲ್ಲಿ ಸಂಚರಿಸುವವರು ಎಚ್ಚರದಿಂದಿರಬೇಕು ಎಂದಿದೆ. ಇನ್ನು ಗುಡುಗು-ಸಿಡಿಲಿನೊಂದಿಗೆ ಗಾಳಿಯ ವೇಗವೂ ಹೆಚ್ಚಿದ್ದು ಆದಷ್ಟು ಮನೆಯಲ್ಲೇ ಇರಲು ಸೂಚಿಸಿದ್ದು ,ಮೀನುಗಾರರಿಗೆ ಸಮುದ್ರಕ್ಕಿಳಿಯದಂತೆ ಎಚ್ಚರಿಕೆ ನೀಡಲಾಗಿದೆ.
ವಿದ್ಯುತ್ ವ್ಯತ್ಯಯ.
ಅಧಿಕ ಮಳೆ ಇರುವುದರಿಂದ ಹಾಗೂ ದುರ್ಭಲ ಮರಗಳನ್ನು ಕತ್ತರಿಸಬೇಕಾದ ಹಿನ್ನಲೆಯಲ್ಲಿ ಜಿಲ್ಲೆಯಾಧ್ಯಾಂತ ಆಗಾಗ ವಿದ್ಯುತ್ ವ್ಯತ್ಯಯ ಆಗಲಿದೆ ಎಂದು ತಿಳಿಸಲಾಗಿದೆ.
ಕಳೆದ 24 ಗಂಟೆಯಲ್ಲಿ ಸುರಿದ ಮಳೆ ವಿವರ:-