For the best experience, open
https://m.kannadavani.news
on your mobile browser.
Advertisement

Uttara kannada ಹೊಸ ವರ್ಷ ಸಂಭ್ರಮಕ್ಕೆ ನಿಯಮ ಜಾರಿ

Uttara kannda :- ಹೊಸವರ್ಷಾಚರಣೆ (New year) ಗೆ ಜಿಲ್ಲಾಡಳಿತದಿಂದ ಮುಂಜಾಗ್ರತಾ ಕ್ರಮದ  ನಿಯಮಗಳನ್ನು ಜಾರಿ ಮಾಡಲಾಗಿದ್ದು ಈ ಕುರಿತು ಪತ್ರಿಕಾ ಪ್ರಕಟಣೆ ನೀಡಿದೆ.
08:04 PM Dec 30, 2024 IST | ಶುಭಸಾಗರ್
uttara kannada ಹೊಸ ವರ್ಷ ಸಂಭ್ರಮಕ್ಕೆ ನಿಯಮ ಜಾರಿ

Uttara kannda :- ಹೊಸವರ್ಷಾಚರಣೆ (New year) ಗೆ uttara kannda ಜಿಲ್ಲಾಡಳಿತದಿಂದ ಮುಂಜಾಗ್ರತಾ ಕ್ರಮದ  ನಿಯಮಗಳನ್ನು ಜಾರಿ ಮಾಡಲಾಗಿದ್ದು ಈ ಕುರಿತು ಪತ್ರಿಕಾ ಪ್ರಕಟಣೆ ನೀಡಿದೆ.

Advertisement

ಜಿಲ್ಲಾಡಳಿತ ಹೊರಡಿಸಿದ ಮುಂಜಾಗ್ರತಾ ನಿಯಮಗಳೇನು?

1) ಹೊಸ ವಾರ್ಷಾಚರಣೆಯನ್ನು ಸಂಭ್ರಮಿಸುವ ಭರದಲ್ಲಿ ಸಾರ್ವಜನಿಕ ಸ್ಥಳಗಳಲ್ಲಿ ಮೋಟಾರ್ ಸೈಕಲ್‌ ವೀಲಿಂಗ್ ನಡೆಸುವುದನ್ನು ಕಡ್ಡಾಯವಾಗಿ ನಡೆಸತಕ್ಕದ್ದಲ್ಲ.

2) ಸಾರ್ವಜನಿಕರು ವಾಹನಗಳ ನಿಲುಗಡೆಗೆ ಈಗಾಗಲೇ ನಿಗಧಿಪಡಿಸಿದ ಪಾರ್ಕಿಂಗ ಸ್ಥಳದಲ್ಲಿಯೇ ಶಿಸ್ತುಭದ್ದವಾಗಿ ನಿಲ್ಲಿಸತಕ್ಕದ್ದು.

3)ಮಧ್ಯಪಾನ ಸೇವಿಸಿ ಮೈಮರೆತು ಸಮುದ್ರ ನೀರಿಗೆ, ಜಲಪಾತ ಹಾಗೂ ನದಿಗಳ ನೀರಿನಲ್ಲಿ ಈಜತಕ್ಕದ್ದಲ್ಲ.

Gokarna kudle beach Drinking alcohol on the beach is the craze of tourists
ಮದ್ಯ ಸೇವನೆಗೆ ನಿರ್ಬಂಧ

4)ಹೊಸ ವರ್ಷದ ಸಂಭ್ರಮಾಚರಣೆಯ ಭರದಲ್ಲಿ ಮಹಿಳೆಯರಿಗೆ ಯಾವುದೇ ರೀತಿಯ ತೊಂದರೆಯನ್ನು ನೀಡಿದ್ದು ಕಂಡುಬಂದಲ್ಲಿ ಅಂಥಹವರ ವಿರುದ್ಧ ಕಾನೂನಿನಂತೆ ಕ್ರಮ ಕೈಗೊಳ್ಳಲಾಗುವುದು.

5) ಸಾಯಂಕಾಲ 06:00 ಗಂಟೆಯ ನಂತರ ಯಾವುದೇ ಕಾರಣಕ್ಕೂ ಬೀಚ್‌ಗಳಲ್ಲಿ ಬೋಟಿಂಗ್ ನಡೆಸಡತಕ್ಕದ್ದಲ್ಲ.

6) ಎಲ್ಲಾ ಬಾರ್/ರೆಸ್ಟೋರೆಂಟ್/ಹೋಮ್‌ ಸ್ಟೇ ಗಳನ್ನು ಅಬಕಾರಿ ಕಾಯ್ದೆಯಲ್ಲಿ ನಿಗಧಿಪಡಿಸಿದ ಸಮಯದ ಒಳಗೆ ಮುಚ್ಚತಕ್ಕದ್ದು,

7) ಬೀಚ್‌ಗಳಲ್ಲಿ ಯಾವುದೇ ರೀತಿಯ ಕಾನೂನು ಸುವ್ಯವಸ್ಥೆಗೆ ಧಕ್ಕೆಯಾಗುವಂತಹ ಘಟನೆಗಳು ನಡೆದಲ್ಲಿ ಅಂತಹವರ ಮೇಲೆ ಕಾನೂನಿನಂತೆ ಕ್ರಮ ಕೈಗೊಳ್ಳಲಾಗುವುದು.

Uttara kannada ಹೊಸ ವರ್ಷ ಸಂಭ್ರಮಕ್ಕೆ ನಿಯಮ ಜಾರಿ
Uttara kannada ಹೊಸ ವರ್ಷ ಸಂಭ್ರಮಕ್ಕೆ ನಿಯಮ ಜಾರಿ

ಇದನ್ನೂ ಓದಿ:-Uttara Kannda ರಾಷ್ಟ್ರೀಯ ಹೆದ್ದಾರಿಯಲ್ಲಿ ಲಾರಿಗೆ ಬೆಂಕಿ – ಲಕ್ಷಾಂತರ ಮೌಲ್ಯದ ಸಕ್ಕರೆ ಬೆಂಕಿಗಾಹುತಿ

8) ಧ್ವನಿವರ್ಧಕಗಳನ್ನು ಬಳಸುವುದರಿಂದ ಶಾಂತಿ ಸುವ್ಯವಸ್ಥೆಗೆ ಧಕ್ಕೆಯಾಗುವ ಹಿನ್ನೆಲೆಯಲ್ಲಿ ಧ್ವನಿವರ್ಧಕಗಳನ್ನು ಕಡ್ಡಾಯವಾಗಿ ಬಳಸತಕ್ಕದ್ದಲ್ಲ.

9.)ಉತ್ತರ ಕನ್ನಡ ಜಿಲ್ಲಾ ವ್ಯಾಪ್ತಿಯಲ್ಲಿ ಹೊಸ ವರ್ಷಾಚರಣೆಯ ಪ್ರಯುಕ್ತ ವ್ಯಾಪಕ ಪೊಲೀಸ್ ಬಂದೋಬಸ್ತ್ ಏರ್ಪಡಿಸಲಾಗಿದ್ದು, ಸಾರ್ವಜನಿಕರು ಹಾಗೂ ಪ್ರವಾಸಿಗರು ಯಾವುದೇ ರೀತಿಯ ಅನುಚಿತ ವರ್ತನೆಯನ್ನು ತೋರಿಸದೇ ಪೊಲೀಸ ಇಲಾಖೆಯೊಂದಿಗೆ ಸಹಕರಿಸಿ ಹೊಸ ವರ್ಷಾಚರಣೆಯಲ್ಲಿ ಕಾನೂನು ಸುವ್ಯವಸ್ಥೆಗೆ ಧಕ್ಕೆಯಾಗದಂತೆ ಸಹಕರಿಸತಕ್ಕದ್ದು.

ಈ ನಿಯಮಗಳನ್ನು ಪಾಲಿಸುವ ಮೂಲಕ ಹೊಸವರ್ಷಾಚರಣೆ ಆಚರಿಸುವಂತೆ ಕೋರಿದೆ.ಇನ್ನು ಸದ್ಯ ಮುರುಡೇಶ್ವರ ಹೊರತುಪಡಿಸಿ ಉಳಿದ ಎಲ್ಲಾ ಕಡಲತೀರ, ಪ್ರವಾಸಿ ಸ್ಥಳಗಳಿಗೆ ಅವಕಾಶ ಮಾಡಿಕೊಡಲಾಗಿದೆ.

Advertisement
Tags :
Advertisement
Advertisement

.

tlbr_img1 ಹೋಮ್ tlbr_img2 ಟ್ರೆಂಡಿಂಗ್ tlbr_img3 ವಿಡಿಯೋ