ಪ್ರಮುಖ ಸುದ್ದಿಮುಖಪುಟLocal storyರಾಜ್ಯರಾಷ್ಟ್ರೀಯಅಂತರರಾಷ್ಟ್ರೀಯCrime newsಮನೋರಂಜನೆ
Advertisement

Uttara kannada| ಇಂದು ಎಲ್ಲಿ ಏನಾಯ್ತು ? ಜಿಲ್ಲೆಯ ಒಳನೋಟ ಇಲ್ಲಿದೆ 

Uttara Kannada District News (October 19, 2025) – Shocking incidents today: couple electrocuted in Honnavar, car-police jeep collision in Yallapur injures two, missing person near Bhatkal mosque, and road accident on Karwar-Kaiga route injures 19. Read full district updates here.
11:39 PM Oct 19, 2025 IST | ಶುಭಸಾಗರ್
Uttara Kannada District News (October 19, 2025) – Shocking incidents today: couple electrocuted in Honnavar, car-police jeep collision in Yallapur injures two, missing person near Bhatkal mosque, and road accident on Karwar-Kaiga route injures 19. Read full district updates here.

Uttara kannada| ಇಂದು ಎಲ್ಲಿ ಏನಾಯ್ತು ? ಜಿಲ್ಲೆಯ ಒಳನೋಟ ಇಲ್ಲಿದೆ

Uttara kannada (october 19) :- ಉತ್ತರ ಕನ್ನಡ ಜಿಲ್ಲೆಯ ಎಲ್ಲಾ ತಾಲೂಕಿನ ಸಮಗ್ರ ಸುದ್ದಿಗಳು ಒಂದು ಲಿಂಕ್ ನಲ್ಲಿ ನೀವು ನೋಡಬಹುದು.

Advertisement

ನಮ್ಮ ವಾಟ್ಸ್ ಅಪ್ ಗ್ರೂಪ್ ಗೆ ಸೇರುವ ಮೂಲಕ ಉತ್ತರ ಕನ್ನಡ,ಶಿವಮೊಗ್ಗ,ಉಡುಪಿ ಸೇರಿದಂತೆ ಪ್ರಮುಖ ಜಿಲ್ಲೆಯ ವಿದ್ಯಮಾನಗಳನ್ನು ನೀವು ಉಚಿತವಾಗಿ ಓದಬಹುದು

ವಾಟ್ಟ್ ಅಪ್ ಗ್ರೂಪ್ ಗೆ ಸೇರಲು ಕೆಳಗಿನ ಚಿತ್ರದ ಮೇಲೆ ಕ್ಲಿಕ್ ಮಾಡಿ:-

Advertisement

Honnavar |ವಿದ್ಯುತ್ ತಂತಿ ಹರಿದು ದಂಪತಿಗಳು ಸಾವು.

ವಿದ್ಯುತ್ ತಂತಿ ಸ್ಪರ್ಷಿಸಿ  ದಂಪತಿಗಳ ಸಾವು.

ಕಾರವಾರ  :- ಮನೆಯ ಮುಂದೆ ತುಂಡಾಗಿ ಬಿದ್ದದ್ದ  ವಿದ್ಯುತ್ ತಂತಿ ಸ್ಪರ್ಶಿಸಿ ದಂಪತಿ ಸ್ಥಳದಲ್ಲೇ ಸಾವು ಕಂಡ ಘಟನೆ ಉತ್ತರ ಕನ್ನಡ ಜಿಲ್ಲೆಯ ಹೊನ್ನಾವರದ (honnavar)ಕಾಸರಕೋಡ ಗ್ರಾಮದ ವಿನಾಯಕ ಕೇರಿಯಲ್ಲಿ ನಡೆದಿದೆ.ಸಂತೋಷ ಗೌಡ ಹಾಗೂ ಪತ್ನಿ ಸೀತಾ ಗೌಡ ಸ್ಥಳದಲ್ಲೆ ಸಾವು ಕಂಡವರಾಗಿದ್ದಾರೆ.ಮನೆಯ ಮುಂಭಾಗ ತುಂಡಾಗಿ ವಿದ್ಯುತ್ ತಂತಿ ಬಿದ್ದಿದ್ದು ,

ಸಂಜೆ ವೇಳೆ ತುಂಡಾದ ತಂತಿ ಸಂತೋಷ ಗೌಡನಿಗೆ ತಗುಲಿದೆ,ಪತಿಗೆ ವಿದ್ಯುತ್ ಸ್ಪರ್ಶಿಸಿದನ್ನ ಕಂಡು ಪತ್ನಿಯೂ ಆತನನ್ನ ರಕ್ಷಿಸಲು ಮುಂದಾಗಿದ್ದಳು.ಇಬ್ಬರಿಗೂ ವಿದ್ಯುತ್ ಸ್ಪರ್ಶಿಸಿ ಸ್ಥಳದಲ್ಲಿ ಸಾವನಪ್ಪಿದ್ದಾರೆ.ಮೃತ ದೇಹವನ್ನು  ಹೊನ್ನಾವರ ತಾಲೂಕು ಆಸ್ಪತ್ರೆಗೆ ರವಾನೆ ಮಾಡಲಾಗಿದ್ದು ,ಹೆಸ್ಕಾಂ ಅಧಿಕಾರಿಗಳ ನಿರ್ಲಕ್ಷ್ಯದಿಂದ ಸಾವಾಗಿದೆಂದು ಸ್ಥಳಿಯರ ಆರೋಪಮಾಡಿದ್ದು

ಹೊನ್ನಾವರ ತಾಲೂಕು ಆಸ್ಪತ್ರೆ ಮುಂದೆ ಗ್ರಾಮಸ್ತರು ಪ್ರತಿಭಟನೆ ನಡೆಸಿದ್ದಾರೆ. ಘಟನೆ ಸಂಬಂಧ ಹೊನ್ನಾವರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Honnavar|ಅನಧಿಕೃತ ವಿದೇಶಿ ಉದ್ಯೋಗ ನೇಮಕಾತಿ ಸಂಸ್ಥೆಯ ಮೇಲೆ ದಾಳಿ ದಾಖಲೆ ವಶ

Yallapur : ಎಪಿಎಂಸಿ ಎದುರು ಕಾರು-ಪೊಲೀಸ್‌ ಜೀಪ್‌ ಡಿಕ್ಕಿ ಇಬ್ಬರಿಗೆ ಗಾಯ.

ಯಲ್ಲಾಪುರದ ಎಪಿಎಂಸಿ ಎದುರು ರಾಜ್ಯ ಹೆದ್ದಾರಿ 93ರಲ್ಲಿ ಕಾರು ಮತ್ತು ಪೊಲೀಸ್ ಇಲಾಖೆಯ ಜೀಪ್ ನಡುವೆ ಡಿಕ್ಕಿ ಸಂಭವಿಸಿ, ಪೊಲೀಸ್ ಜೀಪ್ ಚಾಲಕ ಜಿ. ಮಹಾಂತೇಶ ಹಾಗೂ ಕಾರು ಚಾಲಕ ಶಿವರಾಮ ಶಂಭುಮನೆ (67) ಅವರಿಗೆ ಸಣ್ಣಪುಟ್ಟ ಗಾಯಗಳಾಗಿವೆ. ಕಾರು ಚಾಲಕ ಅಜಾಗರೂಕತೆಯಿಂದ ವಾಹನ ಚಲಾಯಿಸಿದ್ದರಿಂದ ಈ ಘಟನೆ ನಡೆದಿದೆ. ಈ ಸಂಬಂಧ ಯಲ್ಲಾಪುರ ಪೊಲೀಸ್‌ ಠಾಣೆಯಲ್ಲಿ ಶನಿವಾರ ಪ್ರಕರಣ ದಾಖಲಿಸಲಾಗಿದೆ.

Yallapur|ಪತ್ನಿಯ ಶೀಲ ಶಂಕಿಸಿ ಪೆಟ್ರೋಲ್ ಸುರಿದು ಪತ್ನಿ ಹತ್ಯೆ

ಭಟ್ಕಳ: ಮದುವೆಗೆ ಚಿನ್ನ ಖರೀದಿಗೆ ಬಂದಿದ್ದ ಯುವಕ ಮಸೀದಿ ಬಳಿ ಕಾಣೆ

ಮದುವೆಗೆ ಚಿನ್ನ ಖರೀದಿಸಲು ಕುಮಟಾದಿಂದ ಭಟ್ಕಳಕ್ಕೆ (bhatkal) ಬಂದಿದ್ದ 33ರ ಹರೆಯದ ಜಾಕೀರ್ ಬೇಗ್, ಶುಕ್ರವಾರ ಮಧ್ಯಾಹ್ನ ನಮಾಜ್‌ಗಾಗಿ ನೂರ್‌ಪಳ್ಳಿ ಮಸೀದಿಗೆ ತೆರಳಿದ ನಂತರ ನಾಪತ್ತೆಯಾಗಿದ್ದಾನೆ. ಈ ಸಂಬಂಧ ಶನಿವಾರ ಭಟ್ಕಳ ನಗರ. ಪೊಲೀಸ್‌ ಠಾಣೆಯಲ್ಲಿ ಮನುಷ್ಯ ಕಾಣೆ ಪ್ರಕರಣ ದಾಖಲಾಗಿದೆ. ಅಕ್ಟೋಬರ್ 17ರಂದು ವಿದೇಶದಿಂದ ಮರಳಿದ್ದ ಜಾಕೀರ್, ಸಹೋದರ ಗಫೂರ್ ಬೇಗ್ ನೀಡಿದ ದೂರಿನ ಮೇರೆಗೆ ಪೊಲೀಸರು ತನಿಖೆ ಆರಂಭಿಸಿದ್ದಾರೆ.

Bhatkal| ವೈದ್ಯನಿಂದ ವಿವಾಹವಾಗುವುದಾಗಿ ನಂಬಿಸಿ ಅ***ದೂರು ದಾಖಲು

ಕಾರವಾರ-ಕೈಗಾ ರಸ್ತೆಯಲ್ಲಿ  ಅಪಘಾತ: ವೃದ್ಧೆ ದುರ್ಮರಣ, ನಿವೃತ್ತ ನೌಕರನಿಗೆ ಗಾಯ

ಕಾರವಾರ: ರಾಜ್ಯ ಹೆದ್ದಾರಿ-06 ರಲ್ಲಿ ಬಾಂಡಿಶಿಟ್ಟಾ ಬಳಿಯ ಕರಿದೇವ ದೇವಸ್ಥಾನದ ಹತ್ತಿರ ಇಂದು ಸಂಜೆ ನಡೆದ ರಸ್ತೆ ಅಪಘಾತದಲ್ಲಿ ಸ್ಕೂಟಿ ಹಿಂಬದಿ ಸವಾರಳಾಗಿದ್ದ ವೃದ್ಧೆಯೊಬ್ಬರು ಸ್ಥಳದಲ್ಲಿಯೇ ಮೃತಪಟ್ಟಿದ್ದು, ಸ್ಕೂಟಿ ಸವಾರನಿಗೆ ಗಾಯಗಳಾದ ಘಟನೆ ನಡೆದಿದೆ.

ಕಾರವಾರ ಅಪಘಾತ ಚಿತ್ರ.

ಕೆ.ಎಸ್.ಆರ್.ಟಿ.ಸಿ ಬಸ್   ಕಾರವಾರ ಕಡೆಯಿಂದ ಕೈಗಾ ಕಡೆಗೆ  ಚಲಾಯಿಸಲಾಗುತ್ತಿದ್ದಾಗ ಬಸ್ ಚಾಲಕ ರಸ್ತೆಯ ತೀರಾ ಬಲಕ್ಕೆ ಚಲಾಯಿಸಿದ್ದರಿಂದ, ಎದುರಿನಿಂದ ಬಂಗಾರಪ್ಪನಗರ ಶಿರವಾಡ ಕಡೆಯಿಂದ ಕಾರವಾರ ಕಡೆಗೆ ಬರುತ್ತಿದ್ದ ಸ್ಕೂಟಿಯ ಬಲಬದಿಯ ಹ್ಯಾಂಡಲ್‌ಗೆ ಬಸ್ಸಿನ ಬಲಬದಿಯ ತಗಡಿನಿಂದ ತಾಗಿ ಅಪಘಾತ ಸಂಭವಿಸಿದೆ.

Karwar |ಈ ಕೆಲಸ ಸಿ.ಎಂ ಮಾಡದಿದ್ರೆ ರಾಜಕೀಯ ನಿವೃತ್ತಿ,ಯಾವ ಪಕ್ಷ ಸೇರೋಲ್ಲ ಎಂದ ಕಾರವಾರ  ಸತೀಶ್ ಸೈಲ್ 

ಅಪಘಾತದ ಪರಿಣಾಮವಾಗಿ, ಸ್ಕೂಟಿ ಸವಾರರಾದ ಬಂಗಾರಪ್ಪನಗರ ಶಿರವಾಡ ನಿವಾಸಿ, ನಿವೃತ್ತ ನೌಕರ ರತ್ನಾಕರ ತಳೇಕರ (70 ವರ್ಷ) ಅವರಿಗೆ ಬಲಗಾಲಿನ ಮಂಡಿಯ ಮೇಲೆ ಗಾಯಗಳಾಗಿವೆ. ಸ್ಕೂಟಿ ಹಿಂಬದಿ ಸವಾರಳಾಗಿದ್ದ ದೇವಳಮಕ್ಕಿ ನಿವಾಸಿ ಸುಶೀಲಾ ಕಮಲಾಕರ ನಾಯ್ಕ (65 ವರ್ಷ) ಅವರು ರಸ್ತೆಯ ಮೇಲೆ ಬಿದ್ದರು. ಬಸ್ ಅನ್ನು ಸ್ವಲ್ಪ ಮುಂದಕ್ಕೆ ಎಳೆದುಕೊಂಡು ಹೋಗಿ ನಿಲ್ಲಿಸಿದಾಗ, ಬಸ್ಸಿನ ಕೆಳಗೆ ಸಿಲುಕಿಕೊಂಡಿದ್ದ ಸುಶೀಲಾ ನಾಯ್ಕ ಅವರಿಗೆ ಬಲಗಾಲಿಗೆ ಮತ್ತು ಕುತ್ತಿಗೆಗೆ ಗಂಭೀರ ಗಾಯಗಳಾಗಿದ್ದರಿಂದ ಅವರು ಮೃತಪಟ್ಟಿದ್ದಾರೆ.

​ಈ ಬಗ್ಗೆ ಗಾಯಗೊಂಡಿರುವ ಸ್ಕೂಟಿ ಸವಾರ ರತ್ನಾಕರ ತಳೇಕರ ಅವರು ಕಾರವಾರ ಸಂಚಾರ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ. ಪೊಲೀಸರು  ಬಸ್ ಚಾಲಕ  ಅವರ ವಿರುದ್ಧ ಪ್ರಕರಣ ದಾಖಲಿಸಿಕೊಂಡು ಮುಂದಿನ ಕ್ರಮ ಕೈಗೊಂಡಿದ್ದಾರೆ.

Advertisement
Tags :
Bhatkal missing personDistrict news Uttara KannadaHonnavar electrocutionKarnataka Breaking NewsKarwar accidentLatest Uttara Kannada updatesNorthern Karnataka newsRoad accidents KarnatakaUttara Kannada newsYallapur news
Advertisement
Next Article
Advertisement