Uttara kannada| ಇಂದು ಜಿಲ್ಲೆಯಲ್ಲಿ ಏನೆಲ್ಲಾ ಸುದ್ದಿ |ವಿವರ ಇಲ್ಲಿದೆ.
Uttara kannada| ಇಂದು ಜಿಲ್ಲೆಯಲ್ಲಿ ಏನೆಲ್ಲಾ ಸುದ್ದಿ |ವಿವರ ಇಲ್ಲಿದೆ.

ಸಿದ್ದಾಪುರ: ಅರಣ್ಯ ಪ್ರದೇಶದಲ್ಲಿ ಇಸ್ಪೀಟ್ ಜೂಜಾಟ; ನಾಲ್ವರ ಬಂಧನ
ಸಿದ್ದಾಪುರ ತಾಲೂಕಿನ ನೆಟ್ಟೂರು ಗ್ರಾಮದ ಅರಣ್ಯ ಪ್ರದೇಶದ ಸಾರ್ವಜನಿಕ ಸ್ಥಳದಲ್ಲಿ ಇಸ್ಪೀಟ್ ಜೂಜಾಟದಲ್ಲಿ ತೊಡಗಿದ್ದ ನಾಲ್ವರನ್ನು ಸಿದ್ದಾಪುರ (siddapur) ಪೊಲೀಸರು ಬಂಧಿಸಿದ್ದಾರೆ. ಪಿಐ ಜೆ. ಬಿ. ಸೀತಾರಾಮ ನೇತೃತ್ವದಲ್ಲಿ ನಡೆದ ದಾಳಿಯಲ್ಲಿ ತಿಮ್ಮಾ ಭೋವಿ, ಗಣಪತಿ ಚೌಡ, ತಿಮ್ಮಾ ಬೋವಿ ಮತ್ತು ನೂರಅಹ್ಮದ್ ಮದರಸಾಬ್ ಎಂಬುವರನ್ನು ವಶಕ್ಕೆ ಪಡೆಯಲಾಗಿದೆ. ಜೂಜಾಟಕ್ಕೆ ಬಳಸಿದ್ದ ₹2,340 ನಗದು, 52 ಇಸ್ಪೀಟ್ ಎಲೆಗಳು ಸೇರಿದಂತೆ ಇತರೆ ವಸ್ತುಗಳನ್ನು ವಶಪಡಿಸಿಕೊಳ್ಳಲಾಗಿದೆ. ದಾಳಿಯ ಸಮಯದಲ್ಲಿ 5ನೇ ಆರೋಪಿ ಸಂದೀಪ ಪ್ರಭಾಕರ ಶೇಟ್ ಪರಾರಿಯಾಗಿದ್ದಾನೆ. ಬಂಧಿತರ ವಿರುದ್ಧ ಗುರುವಾರ ಪ್ರಕರಣ ದಾಖಲಿಸಲಾಗಿದೆ.
ಹೊನ್ನಾವರ: ಅಕ್ರಮ ಮದ್ಯ ಮಾರಾಟ ಯತ್ನ; 7, 475 ರೂ. ಮೌಲ್ಯದ ಮದ್ಯ ವಶ.

ಹೊನ್ನಾವರ(honnavar) ತಾಲೂಕಿನ ಸಂಶಿ ಅಂಬೇಡ್ಕರ್ ನಗರದಲ್ಲಿ ಸಾರ್ವಜನಿಕ ಸ್ಥಳದಲ್ಲಿ ಅಕ್ರಮವಾಗಿ ಮದ್ಯ ಮಾರಾಟ ಮಾಡಲು ಯತ್ನಿಸುತ್ತಿದ್ದ ನಾಗರತ್ನ ಆನಂದ ಹಳ್ಳೇರ (28) ಎಂಬ ಮಹಿಳೆಯ ವಿರುದ್ಧ ಹೊನ್ನಾವರ ಪೊಲೀಸ್ ಠಾಣೆಯಲ್ಲಿ ಗುರುವಾರ ಪ್ರಕರಣ ದಾಖಲಾಗಿದೆ. ₹7,475 ಮೌಲ್ಯದ 32.950 ಲೀಟರ್ ಬಿಯರ್ ಬಾಟಲಿಗಳು ಮತ್ತು ಟಿನ್‌ಗಳನ್ನು ವಶಪಡಿಸಿಕೊಳ್ಳಲಾಗಿದೆ. ದಾಳಿ ವೇಳೆ ಆರೋಪಿ ಪರಾರಿಯಾಗಿದ್ದಾಳೆ. ಕರ್ನಾಟಕ ಅಬಕಾರಿ ಕಾಯ್ದೆಯ ಕಲಂ 32 ಮತ್ತು 34 ರ ಅಡಿಯಲ್ಲಿ ಪ್ರಕರಣ ದಾಖಲಾಗಿದೆ.
Honnavar|ಅನಧಿಕೃತ ವಿದೇಶಿ ಉದ್ಯೋಗ ನೇಮಕಾತಿ ಸಂಸ್ಥೆಯ ಮೇಲೆ ದಾಳಿ ದಾಖಲೆ ವಶ
ಭಟ್ಕಳ: ನಕಲಿ ವೈದ್ಯಕೀಯ ಪ್ರಮಾಣ ಪತ್ರ ನೀಡಿ ವಂಚನೆ; ಪ್ರಕರಣ ದಾಖಲು.

ಭಟ್ಕಳದಲ್ಲಿ (bhatkal)ನಕಲಿ ವೈದ್ಯಕೀಯ ಪ್ರಮಾಣ ಪತ್ರ ನೀಡಿ, ತಾನು ಎಂಬಿಬಿಎಸ್ ಡಾಕ್ಟರ್ ಎಂದು ಹೇಳಿಕೊಂಡು ಆಸ್ಪತ್ರೆಯಲ್ಲಿ ಕೆಲಸಕ್ಕೆ ಸೇರಿ ವಂಚನೆ ಮಾಡಿದ ಆರೋಪದ ಮೇಲೆ ಉಡುಪಿ ಜಿಲ್ಲೆಯ ಗಂಗೊಳ್ಳಿಯ ನಿವಾಸಿ ಅಬುಮುಹಮ್ಮದ್ ಉಸ್ಮಾಮಾ ಎಂಬಾತನ ವಿರುದ್ಧ ಭಟ್ಕಳ ಶಹರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಆರೋಪಿಯು 2024ರ ಅಕ್ಟೋಬರ್ 7ರಂದು ಕರ್ನಾಟಕ ಮೆಡಿಕಲ್ ಕೌನ್ಸಿಲ್ ನಕಲಿ ಪ್ರಮಾಣ ಪತ್ರ ಸೃಷ್ಟಿಸಿ, ಭಟ್ಕಳದ ವೆಲ್‌ಫೇರ್ ಆಸ್ಪತ್ರೆಗೆ ನೀಡಿ ಕೆಲಸಕ್ಕೆ ಸೇರಿದ್ದ. ಸೆಪ್ಟೆಂಬರ್ 2ರಂದು ಜಿಲ್ಲಾ ಆರೋಗ್ಯ ಅಧಿಕಾರಿಗಳ ಪರಿಶೀಲನೆ ವೇಳೆ ಆತ ನಕಲಿ ಡಾಕ್ಟರ್ ಎಂದು ತಿಳಿದು ಬಂದಿದೆ. ಆಸ್ಪತ್ರೆಯ ಆಡಳಿತಾಧಿಕಾರಿ ಸೈಯದ್ ಅಬ್ದುಲ್ ಆಲಾ ಅವರ ದೂರಿನ ಅನ್ವಯ, ಆರೋಪಿ ಉಸ್ಮಾಮನ ವಿರುದ್ಧ ಗುರುವಾರ ಪ್ರಕರಣ ದಾಖಲಿಸಲಾಗಿದೆ.
ಯಲ್ಲಾಪುರ: ನಿಯಂತ್ರಣ ತಪ್ಪಿ ಗಟಾರಕ್ಕೆ ಕಾರು ಪಲ್ಟಿ; ಪ್ರಯಾಣಿಕರು ಪಾರು

ಗುರುವಾರ, ರಾಷ್ಟ್ರೀಯ ಹೆದ್ದಾರಿ 63ರ ಆರತಿಬೈಲ್ ಘಟ್ಟದ ಇಳಿಜಾರಿನ ಆರಂಭದಲ್ಲಿ ಹುಬ್ಬಳ್ಳಿ ಕಡೆಯಿಂದ ಅಂಕೋಲಾ ಕಡೆಗೆ ಹೋಗುತ್ತಿದ್ದ ಕಾರು ಚಾಲಕನ ನಿಯಂತ್ರಣ ತಪ್ಪಿ ರಸ್ತೆ ಪಕ್ಕದ ಗಟಾರದಲ್ಲಿ ಪಲ್ಟಿಯಾಗಿದೆ. ಈ ಘಟನೆಯಲ್ಲಿ ಕಾರು ಜಖಂಗೊಂಡಿದ್ದು, ಅದೃಷ್ಟವಶಾತ್ ಕಾರಿನಲ್ಲಿದ್ದ ಪ್ರಯಾಣಿಕರಿಗೆ ಯಾವುದೇ ಪ್ರಾಣಾಪಾಯ ಸಂಭವಿಸಿಲ್ಲ. ಎಲ್ಲರೂ ಸುರಕ್ಷತವಾಗಿ ಪಾರಾಗಿದ್ದಾರೆ. ಘಟನಾ ಸ್ಥಳಕ್ಕೆ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.
Yallapur|ಪತ್ನಿಯ ಶೀಲ ಶಂಕಿಸಿ ಪೆಟ್ರೋಲ್ ಸುರಿದು ಪತ್ನಿ ಹತ್ಯೆ
ಹೊನ್ನಾವರ (honnavar). ಬಸ್ ಅಪಘಾತ ಐವರಿಗೆ ಗಾಯ
ಹೊನ್ನಾವರ:- ಸಾಗರ-ಹೊನ್ನಾವರ ರಸ್ತೆಯ ಮಾವಿನ ಗುಂಡಿ ಬಳಿ ಬಸ್ ಅಪಘಾತವಾಗಿದ್ದು ಐದು ಜನರಿಗೆ ಚಿಕ್ಕಪುಟ್ಟ ಗಾಯಗಳಾಗಿವೆ. ಉಳಿದಂತೆ ಯಾವುದೇ ಜೀವ ಹಾನಿಯಾಗಿಲ್ಲ.ಈ ಕುರಿತು ಹೊನ್ನಾವರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಬೇಲೆಕೇರಿಯಲ್ಲಿ ಸಮುದ್ರ ಅಲೆತಡೆಗೋಡೆ ನಿರ್ಮಿಸಲು ರೂಪಾಲಿ ಎಸ್.ನಾಯ್ಕ ಆಗ್ರಹ.
ಕಾರವಾರಃ-ಅಂಕೋಲಾ ತಾಲ್ಲೂಕಿನ ಬೇಲೆಕೇರಿಯಲ್ಲಿ ಮೀನುಗಾರಿಕಾ ಬೋಟುಗಳ ಸುರಕ್ಷಿತ ಸಂಚಾರಕ್ಕಾಗಿ ಅಲೆತಡೆಗೋಡೆ ನಿರ್ಮಿಸಲು ನಾನು ಶಾಸಕಳಾಗಿರುವಾಗ ಸರ್ಕಾರದ ಮಟ್ಟದಲ್ಲಿ ಪ್ರಯತ್ನ ನಡೆಸಿದ್ದು, ಈಗಿನ ಸರ್ಕಾರ ಅದಕ್ಕೆ ಸ್ಪಂದಿಸಿ ಅಲೆತಡೆಗೋಡೆ ನಿರ್ಮಿಸಬೇಕೆಂದು ಬಿಜೆಪಿ ರಾಜ್ಯ ಉಪಾಧ್ಯಕ್ಷೆ, ಕಾರವಾರ ಅಂಕೋಲಾ ವಿಧಾನಸಭಾ ಕ್ಷೇತ್ರದ ಮಾಜಿ ಶಾಸಕಿ ರೂಪಾಲಿ ಎಸ್.ನಾಯ್ಕ ಸರ್ಕಾರವನ್ನು ಆಗ್ರಹಿಸಿದ್ದಾರೆ.
ಅಲೆತಡೆಗೋಡೆ ನಿರ್ಮಿಸುವಂತೆ ನಾನು 2021ರಲ್ಲಿ ಅಂದಿನ ಮೀನುಗಾರಿಕಾ ಸಚಿವ ಎಸ್.ಅಂಗಾರ ಅವರಲ್ಲಿ ವಿನಂತಿ ಮಾಡಿದ್ದರಿಂದ ಸಚಿವರು , ಸರ್ಕಾರದ ಅಪರ ಮುಖ್ಯ ಕಾರ್ಯದರ್ಶಿ ಅವರಿಗೆ ಈ ಬಗ್ಗೆ ಕ್ರಮ ಕೈಗೊಳ್ಳುವಂತೆ ಸೂಚಿಸಿದ್ದರು.
ಸಚಿವರಾದ ಎಸ್. ಅಂಗಾರ ಅವರ ಸೂಚನೆ ಹಿನ್ನೆಲೆಯಲ್ಲಿ ಸರ್ಕಾರದ ಅಪರ ಮುಖ್ಯಕಾರ್ಯದರ್ಶಿ, ಮೂಲ ಸೌಲಭ್ಯ ಅಭಿವೃದ್ಧಿ, ಬಂದರು ಹಾಗೂ ಒಳನಾಡು ಜಲಸಾರಿಗೆ ಇಲಾಖೆ ಇವರು 29.06.2021ರಂದು ಕಾರವಾರ ಬಂದರು ನಿರ್ದೇಶಕರಿಗೆ ಪತ್ರ ಬರೆದು ಬೇಲೆಕೇರಿಯಲ್ಲಿ ತಡೆಗೋಡೆ ನಿರ್ಮಾಣಕ್ಕೆ ಪೂರ್ವಭಾವಿ ಅಧ್ಯಯನಕ್ಕೆ 24 ಲಕ್ಷ ರೂಪಾಯಿ ಹಾಗೂ ತಡೆಗೋಡೆ ನಿರ್ಮಾಣಕ್ಕೆ 20 ಕೋಟಿ ರೂ. ಅನುದಾನ ಬಿಡುಗಡೆಗೆ ಸೂಕ್ತ ಕ್ರಮ ಕೈಗೊಳ್ಳುವಂತೆ ಸೂಚಿಸಿದ್ದರು.
Karwar |ಈ ಕೆಲಸ ಸಿ.ಎಂ ಮಾಡದಿದ್ರೆ ರಾಜಕೀಯ ನಿವೃತ್ತಿ,ಯಾವ ಪಕ್ಷ ಸೇರೋಲ್ಲ ಎಂದ ಕಾರವಾರ ಸತೀಶ್ ಸೈಲ್
ಬಂದರು ಮತ್ತು ಒಳನಾಡು ಜಲಸಾರಿಗೆ ಇಲಾಖೆ ನಂತರ ಮೀನುಗಾರಿಕೆ ಇಲಾಖೆ ನಿರ್ದೇಶಕರಿಗೆ ಪತ್ರ ಬರೆದು ಈ ಬಗ್ಗೆ ಸೂಕ್ತ ಕ್ರಮ ಕೈಗೊಳ್ಳುವಂತೆ ಪ್ರಸ್ತಾವನೆ ಸಲ್ಲಿಸಿದ್ದರು.
ಇದಾದ ಮೇಲೆ ಮೀನುಗಾರಿಕೆ ಇಲಾಖೆ ನಿರ್ದೇಶಕರು ಆದೇಶ ಮಾಡಿ, ಬೇಲೆಕೇರಿ ಬಂದರಿನ ಸ್ಮಶಾನಭೂಮಿ ಹತ್ತಿರದಿಂದ ಅಲೆತಡೆಗೋಡೆ ವಿನ್ಯಾಸ ಮತ್ತು ತಡೆಗೋಡೆ ನಿರ್ಮಾಣದಿಂದ ಸಮುದ್ರ ಪರಿಸರದ ಮೇಲೆ ಉಂಟಾಗುವ ಪರಿಣಾಮಗಳ ಅಧ್ಯಯನಕ್ಕೆ 24 ಲಕ್ಷ ರೂ. ಅನುಮೋದನೆ ನೀಡಿದ್ದರು.
ನಂತರ 2023ರಲ್ಲಿ ಸಿಡಬ್ಲ್ಯುಪಿಆರ್ ಎಸ್ ಪುಣೆ ಕಂಪನಿ ಮಾದರಿ ಅಧ್ಯಯನ ನಡೆಸಿ ಇಲ್ಲಿ ಅಲೆತಡೆಗೋಡೆ ನಿರ್ಮಿಸುವುದು ಅವಶ್ಯವಿದೆ ಎಂದು ತಿಳಿಸಿತ್ತಲ್ಲದೆ, 40 ಕೋಟಿ ರೂ.ಗಳಿಗೆ ಅಂದಾಜು ಪತ್ರಿಕೆಯನ್ನೂ ತಯಾರಿಸಲಾಗಿತ್ತು.
Kumta | ವೈದ್ಯಕೀಯ ಪರೀಕ್ಷೆ ವೇಳೆ ಪರಾರಿಯಾಗಿ ಹುಡುಗಿ ಜೊತೆ ನಿಶ್ಚಿತಾರ್ಥ ಮಾಡಿಕೊಳ್ಳಲು ಹೋಗಿದ್ದ ಆರೋಪಿ ಸೆರೆ!
ಇದಾದ ಮೇಲೆ ಸರ್ಕಾರ ಬದಲಾವಣೆಯಾಗಿದ್ದರಿಂದ ಯಾವುದೆ ಅಲೆತಡೆಗೋಡೆ ನಿರ್ಮಾಣದ ವಿಷಯದಲ್ಲಿ ಯಾವುದೆ ಪ್ರಗತಿಯಾಗಿಲ್ಲ. ಸರ್ಕಾರ, ಉಸ್ತುವಾರಿ ಸಚಿವರು, ಸ್ಥಳೀಯ ಶಾಸಕರು ಬೇಲೆಕೇರಿಯಲ್ಲಿ ಅಲೆತಡೆಗೋಡೆ ನಿರ್ಮಿಸಿ ಮೀನುಗಾರರ ಹಿತರಕ್ಷಣೆಗೆ ಮುಂದಾಗಬೇಕೆಂದು ರೂಪಾಲಿ ಎಸ್.ನಾಯ್ಕ ಆಗ್ರಹಿಸಿದ್ದಾರೆ.
ಬೇಲೆಕೇರಿ ಬಂದರಿನಲ್ಲಿ ಮೀನುಗಾರಿಕಾ ಬೋಟುಗಳು ಮೀನುಗಾರಿಕೆಗೆ ಹೋಗುವಾಗ ಹಾಗೂ ಬರುವಾಗ ಅಲೆಗಳ ಹೊಡೆತದಿಂದ ತುಂಬಾ ತೊಂದರೆ ಉಂಟಾಗುತ್ತಿದೆ. ಈಗಾಗಲೆ ಬೇಲೆಕೇರಿಯಲ್ಲಿ ಎರಡು ಬಾರಿ ಅವಘಡಗಳು ಉಂಟಾಗಿವೆ. ಅಲೆ ತಡೆಗೋಡೆ ನಿರ್ಮಿಸಿದಲ್ಲ ಈ ಸಮಸ್ಯೆ ಬಗೆಹರಿಯಲಿದೆ ಹಾಗೂ ಮಳೆಗಾಲದಲ್ಲಿ ಬೋಟ್, ದೋಣಿಗಳನ್ನು ನಿಲ್ಲಿಸಲು ಅನುಕೂಲ ಉಂಟಾಗಲಿದೆ. ಅಲೆತಡೆಗೋಡೆ ಸಮೀಕ್ಷೆಗೆ 24 ಲಕ್ಷ ರೂಪಾಯಿ ಹಾಗೂ ಅಲೆತಡೆಗೋಡೆ ನಿರ್ಮಾಣಕ್ಕೆ 20 ಕೋಟಿ ರೂಪಾಯಿ ಬಿಡುಗಡೆ ಮಾಡುವಂತೆ ಅಂದಿನ ಮೀನುಗಾರಿಕಾ ಸಚಿವರನ್ನು ಅಂದು ಶಾಸಕಳಾಗಿದ್ದ ನಾನು ವಿನಂತಿಸಿದ್ದೆ. ಆ ಪ್ರಕಾರ 40 ಕೋಟಿ ರೂ. ವೆಚ್ಚದಲ್ಲಿ ಅಂದಾಜು ಪತ್ರಿಕೆಯೂ ಸಿದ್ಧವಾಗಿತ್ತು. ರಾಜ್ಯ ಸರ್ಕಾರ ಕೂಡಲೇ ಅಲೆತಡೆಗೋಡೆ ನಿರ್ಮಿಸಿ, ಬೇಲೆಕೇರಿಯ ಮೀನುಗಾರರ ನೆರವಿಗೆ ಬರುವಂತೆ ವಿನಂತಿಸುತ್ತೇನೆ ಎಂದು ಪತ್ರದಲ್ಲಿ ಉಲ್ಲೇಖಿಸಲಾಗಿದೆ.