Uttara kannada| ಉತ್ತರ ಕನ್ನಡ ಜಿಲ್ಲೆಯಲ್ಲಿ ಇಂದು ಏನಾಯ್ತು?
Uttara kannada| ಉತ್ತರ ಕನ್ನಡ ಜಿಲ್ಲೆಯಲ್ಲಿ ಇಂದು ಏನಾಯ್ತು?
Karwar:ಅಬಕಾರಿ ಅಧೀಕ್ಷಕ ಸಂತೋಷ್ ಕುಡಾಲ್ಕರ್ ಅಮಾನತು.
ಕಾರವಾರ :- ಕರ್ತವ್ಯ ಲೋಪ ಹಾಗೂ ಸಿಬ್ಬಂದಿಗೆ ಕಿರುಕುಳ ಆರೋಪದಡಿ ಉತ್ತರ ಕನ್ನಡ ಜಿಲ್ಲೆಯ ಮೂಲದ ಬೆಳಗಾವಿ ಅಬಕಾರಿ ಕಚೇರಿಯ ಅಬಕಾರಿ ಅಧೀಕ್ಷಕ ಸಂತೋಷ್ ಕುಡಾಲ್ಕರ್ ಅವರನ್ನು ಅಮಾನತು ಮಾಡಿ ಆದೇಶ ಹೊರಡಿಸಲಾಗಿದೆ.
ಇವರ ಮೇಲೆ ಕರ್ತವ್ಯ ಲೋಪ, ಅಧಿಕಾರ ವ್ಯಾಪ್ತಿ ಮೀರಿ ವರ್ತನೆ, ಮೇಲಾಧಿಕಾರಿಗಳ ಆದೇಶ ಪಾಲಿಸದಿರುವುದು ಮತ್ತು ಸಿಬ್ಬಂದಿಗೆ ಕಿರುಕುಳ ನೀಡಿದ ಆರೋಪದ ಮೇಲೆ ಅಮಾನತುಗೊಳಿಸಲಾಗಿದೆ.
Karwar news: ಈ ಗಣೇಶನಿಗೆ ಮುಸ್ಲೀಮರೇ ಪೂಜೆ-ಕಾರವಾರದಲ್ಲೊಂದು ಕೋಮು ಸೌಹಾರ್ಧ ಸಾರುವ ಗಣಪ
ಈ ಕುರಿತು ಆರ್ಥಿಕ ಇಲಾಖೆಯ (ಅಬಕಾರಿ) ಸರ್ಕಾರಿ ಅಧೀನ ಕಾರ್ಯದರ್ಶಿ ಭೀಮಪ್ಪ ಅಜೂರ್ ಆದೇಶ ಹೊರಡಿಸಿದ್ದಾರೆ. ಕರ್ನಾಟಕ ನಾಗರಿಕ ಸೇವಾ ನಿಯಮಗಳ ಅಡಿಯಲ್ಲಿ ಈ ಕ್ರಮ ಕೈಗೊಳ್ಳಲಾಗಿದೆ.
Bhatkal: ಪುರಸಭೆ ಅಧ್ಯಕ್ಷ ಸ್ಥಾನಕ್ಕೆ ಚುನಾವಣೆ: ಸೆ.8 ರಂದು ಮತದಾನ
ಸುಮಾರು 28 ತಿಂಗಳುಗಳಿಂದ ಖಾಲಿಯಾಗಿದ್ದ ಭಟ್ಕಳ ಪುರಸಭೆ ಅಧ್ಯಕ್ಷ ಸ್ಥಾನಕ್ಕೆ ಸೆಪ್ಟೆಂಬರ್ 8 ರಂದು ಚುನಾವಣೆ ನಡೆಯಲಿದೆ. ಈ ಸ್ಥಾನವು ಮೊದಲು ಪರಿಶಿಷ್ಟ ಜಾತಿ ಮಹಿಳೆಗೆ ಮೀಸಲಾಗಿತ್ತು, ಆದರೆ ಅರ್ಹ ಅಭ್ಯರ್ಥಿ ಇಲ್ಲದ ಕಾರಣ ಭರ್ತಿಯಾಗಿರಲಿಲ್ಲ. ರಾಜ್ಯ ಸರ್ಕಾರ ಮೀಸಲಾತಿ ನಿಯಮವನ್ನು ಪರಿಷ್ಕರಿಸಿ, ಪರಿಶಿಷ್ಟ ಜಾತಿಗೆ ಲಿಂಗಭೇದವಿಲ್ಲದೆ ಮೀಸಲಿರಿಸಿದ ನಂತರ ಚುನಾವಣೆ ಸಾಧ್ಯವಾಗಿದೆ. ಪುರಸಭೆಯ ಏಕೈಕ ಪರಿಶಿಷ್ಟ ಜಾತಿ ಸದಸ್ಯರಾದ ರಾಘವೇಂದ್ರ ಗೌಳಿ ಅವರು ಅಧ್ಯಕ್ಷರಾಗಿ ಆಯ್ಕೆಯಾಗುವ ಸಾಧ್ಯತೆ ಇದೆ. ಪುರಸಭೆಯ ಅವಧಿ ನವೆಂಬರ್ 4 ರಂದು ಮುಕ್ತಾಯಗೊಳ್ಳುವುದರಿಂದ, ನೂತನ ಅಧ್ಯಕ್ಷರ ಅಧಿಕಾರಾವಧಿ ಕೇವಲ ಎರಡು ತಿಂಗಳು ಇರಲಿದೆ.
Honnavar: ತೆಂಗಿನಕಾಯಿ ತೆಗೆಯಲು ಹೋಗಿ ಬಾವಿಗೆ ಬಿದ್ದು ವ್ಯಕ್ತಿ ಸಾವು
ತೋಟದ ಬಾವಿಯಲ್ಲಿ ಬಿದ್ದ ತೆಂಗಿನಕಾಯಿಯನ್ನು ಹೊರತೆಗೆಯಲು ಹೋಗಿದ್ದ 62 ವರ್ಷದ ಸುಭಾಶ್ ಶಾನಭಾಗ ಅವರು ಬಾವಿಗೆ ಬಿದ್ದು ಮೃತಪಟ್ಟಿದ್ದಾರೆ. ಮೇಲಕ್ಕೆ ಬರಲು ಸಾಧ್ಯವಾಗದೆ ಅವರು ಸಾವನ್ನಪ್ಪಿದ್ದಾರೆ. ಅವರ ಮಗ ಶುಭಂ ಶಾನಭಾಗ ಅವರು ವಿಷಯವನ್ನು ಪೊಲೀಸರಿಗೆ ತಿಳಿಸಿದ್ದು, ಹೊನ್ನಾವರ ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸುತ್ತಿದ್ದಾರೆ.
Kumta: ಬಡಾಳ ಘಾಟ್ ಹತ್ತಿರ ಗುಡ್ಡ ಕುಸಿತ.
ಕುಮಟಾ ತಾಲೂಕಿನ ಬಡಾಳ ಘಾಟ್ ಬಳಿ ನಿನ್ನೆ (ಬುಧವಾರ )ಗುಡ್ಡ ಕುಸಿತ ಸಂಭವಿಸಿದೆ. ಇದರಿಂದಾಗಿ ಕೆಲ ಕಾಲ ಸಂಚಾರಕ್ಕೆ ಅಡಚಣೆಯುಂಟಾಗಿತ್ತು. ಗುಡ್ಡದಿಂದ ಜಾರಿಬಿದ್ದ ಮಣ್ಣು ರಸ್ತೆಗೆ ಅಡ್ಡಲಾಗಿ ಬಿದ್ದಿತ್ತು. ತಾಲೂಕು ಆಡಳಿತದ ಅಧಿಕಾರಿಗಳು ಸ್ಥಳಕ್ಕೆ ಧಾವಿಸಿ, ಹಿಟಾಚಿ ಸಹಾಯದಿಂದ ರಸ್ತೆಯ ಮೇಲಿದ್ದ ಮಣ್ಣನ್ನು ತೆರವುಗೊಳಿಸಿ ಸುಗಮ ಸಂಚಾರಕ್ಕೆ ಅನುವು ಮಾಡಿಕೊಟ್ಟರು. ಈ ಸಣ್ಣ ಪ್ರಮಾಣದ ಗುಡ್ಡ ಕುಸಿತವೂ ಜನರಲ್ಲಿ ಆತಂಕ ಸೃಷ್ಟಿಸಿದ್ದು ಮತ್ತೆ ಗುಡ್ಡ ಕುಸಿಯುವ ಆತಂಕ ತಂದೊಡ್ಡಿದೆ.
Bhatkal: ಚಿನ್ನಾಭರಣ ಕಳವು- ಪತ್ನಿ ವಿರುದ್ಧ ಪತಿ ದೂರು
ಭಟ್ಕಳದ ಅಬ್ದುಲ್ ಬಾಸಿತ್ ಎಂಬುವವರು ತಮ್ಮ ಪತ್ನಿ ನಖಾತ್ ವಿರುದ್ಧ ಚಿನ್ನಾಭರಣ ಕಳವು ಮತ್ತು ಜೀವಬೆದರಿಕೆ ಆರೋಪ ಮಾಡಿದ್ದು, ನಗರ ಪೊಲೀಸ್ ಠಾಣೆಯಲ್ಲಿ ಬುಧವಾರ ದೂರು ದಾಖಲಿಸಿದ್ದಾರೆ. ದುಬೈನಲ್ಲಿ ಉದ್ಯೋಗದಲ್ಲಿರುವ ಬಾಸಿತ್, ತನ್ನ ತಾಯಿಯ ಬಳಿ ಭದ್ರತೆಗಾಗಿ ಇರಿಸಿದ್ದ ಸುಮಾರು 150 ಗ್ರಾಂ ತೂಕದ ₹15 ಲಕ್ಷ ಮೌಲ್ಯದ ಚಿನ್ನಾಭರಣಗಳನ್ನು (gold jewellery )ಪತ್ನಿ ನಖಾತ್ ಸುಳ್ಳು ಹೇಳಿ ತೆಗೆದುಕೊಂಡು ಹೋಗಿದ್ದಾರೆ ಎಂದು ಆರೋಪಿಸಿದ್ದಾರೆ.
ಚಿನ್ನಾಭರಣ ವಾಪಸ್ ಕೇಳಿದಾಗ ಪತ್ನಿ ಮತ್ತು ಆಕೆಯ ಸಹೋದರರು ಜೀವಬೆದರಿಕೆ ಹಾಕಿದ್ದಾರೆ ಎಂದು ಅವರು ದೂರಿನಲ್ಲಿ ತಿಳಿಸಿದ್ದಾರೆ. ಪ್ರಕರಣ ದಾಖಲಿಸಿಕೊಂಡ ಪೊಲೀಸರು ತನಿಖೆ ಕೈಗೊಂಡಿದ್ದಾರೆ.