Uttara kannada| ಇಳಿಕೆ ಕಂಡ ಮೀನುಗಾರಿಕೆ |ಎರಡು ವರ್ಷದಲ್ಲಿ ಗಣನೀಯ ಇಳೆ| ವಿವರ ನೋಡಿ
Uttara kannada| ಇಳಿಕೆ ಕಂಡ ಮೀನುಗಾರಿಕೆ |ಎರಡು ವರ್ಷದಲ್ಲಿ ಗಣನೀಯ ಇಳೆ| ವಿವರ ನೋಡಿ
Karwar :- ಕಳೆದ ಎರಡು ವರ್ಷದಿಂದ ಹವಾಮಾನ ವೈಪರಿತ್ಯ ರೈತರಿಗಲ್ಲದೇ ಉತ್ತರ ಕನ್ನಡ (uttara kannada)ಜಿಲ್ಲೆಯ ಮೀನುಗಾರರಿಗೂ ನಷ್ಟ ತಂದಿಟ್ಟಿದ್ದು ಕಳೆದ ಎರಡು ವರ್ಷದಿಂದ ಮೀನುಗಾರಿಕೆಯಲ್ಲಿ ಗಣನೀಯ ಇಳಿಕೆ ಕಂಡಿದ್ದು ಕೋಟಿಗಟ್ಟಲೇ ಹಣ ಹಾಕಿ ಮೀನುಗಾರಿಕೆಗಿಳಿದವರ ಕೈ ಸುಡುವಂತೆ ಮಾಡಿದೆ.
ರೈತರಿಗೆ ಅತಿ ವೃಷ್ಟಿಯಿಂದ ಬೆಳೆ ನಾಶವಾದಂತೆ ಮೀನುಗಾರರಿಗೆ ಕಳೆದ ಎರಡು ವರ್ಷದಿಂದ ಹವಾಮಾನ ವೈಪರಿತ್ಯ ದೊಡ್ಡ ಹೊಡೆತ ಕೊಟ್ಟಿದೆ. ಮಳೆ ರೈತರ ಬೆಳೆಗಳು ನಷ್ಟವಾಗುವಂತೆ ಮಾಡಿದರೇ ಕರ್ನಾಟಕ ಕರಾವಳಿಯ ಮೀನುಗಾರರಿಗೂ ಇದರ ಬಿಸಿ ತಟ್ಟಿದ್ದು ಮೀನು ಉತ್ಪಾದನೆಯಲ್ಲಿ ಗಣನೀಯ ಇಳಿಕೆ ಕಂಡಿದೆ.
Fish bite death| ಮೀನು ಕಡಿದು ಚಿಕಿತ್ಸೆ ಫಲಕಾರಿಯಾಗದೇ ಯುವಕ ಸಾವು
ಕಳೆದ ಎರಡು ವರ್ಷ ದಿಂದ ಅಬ್ಬರದ ಮಳೆ ಜೊತೆಗೆ ಆಗಾಗ ಸಮುದ್ರ ಭಾಗದಲ್ಲಿ ವಾಯುಭಾರ ಕುಸಿತ ಮೀನುಗಳ ಸಂತಾನೋತ್ಪತ್ತಿ ಗೆ ಹೊಡೆತ ಕೊಟ್ಟರೇ , ಮೀನುಗಾರಿಕೆಗೂ ಹೊಡೆತ ಕೊಟ್ಟಿದೆ. ಕಳೆದ ಐದು ವರ್ಷದ ಮೀನುಗಳ ಉತ್ಪಾದನೆಯ ಇಳಿಕೆಯತ್ತ ಸಾಗಿದೆ. 2021 -22 ರಲ್ಲಿ ಹವಾಮಾನ ವೈಪರಿತ್ಯ ದಿಂದ 1.17 ಲಕ್ಷ ಮೆಟ್ರಿಕ್ ಟನ್ ಉತ್ತರ ಕನ್ನಡ ಜಿಲ್ಲೆಯಲ್ಲಿ ಮೀನು ಉತ್ಪಾದನೆಯಾದರೇ 2022-23 ರಲ್ಲಿ 1.31 ಲಕ್ಷ ಮೆಟ್ರಿಕ್ ಟನ್ ಉತ್ಪಾನೆಯಾಗಿದ್ದು ಸ್ಪಲ್ಪ ಚೇತರಿಕೆ ಕಾಣುತ್ತಿರುವಾಗಲೇ 2023-24 ರಲ್ಲಿನ ಹವಾಮಾನ ಬದಲಾವಣೆ 1.15 ಲಕ್ಷ ಮೆಟ್ರಿಕ್ ಟನ್ ಗೆ ಇಳಿಕೆ ಕಂಡಿತು .ಆದ್ರೆ ಈಬಾರಿ 2024-25 ರಲ್ಲಿ ಪದೇ ಪದೇ ಹವಾಮಾನ ಬದಲಾವಣೆ ,ಮೀನುಗಾರಿಕೆ ನಿರ್ಬಂಧದ ನಡುವೆ ಆಗಷ್ಟ್ 1 ರಿಂದ ಪ್ರಾರಂಭವಾಗುತಿದ್ದ ಮೀನುಗಾರಿಕೆ ನವಂಬರ್ ಆದರೂ ಸಮರ್ಪಕವಾಗಿ ಪ್ರಾರಂಭವಾಗದ ಹಿನ್ನಲೆಯಲ್ಲಿ ಈ ಭಾರಿ 1.08 ಲಕ್ಷ ಮೆಟ್ರಿಕ್ ಟನ್ ಮಾತ್ರ ಮೀನುಗಳ ಉತ್ಪಾನೆಯಾಗಿದ್ದು ,ಇನ್ನು ಐದು ತಿಂಗಳುಗಳಲ್ಲಿ ಚೇತರಿಕೆಯ ನಿರೀಕ್ಷೆ ಹೊಂದಲಾಗಿದೆ ಎನ್ನುತ್ತಾರೆ ಕಾರವಾರದ ಮೀನುಗಾರಿಕಾ ಇಲಾಖೆ ನಿರ್ದೇಶಕ ಕಾರ್ತೀಕ್.
Karwar| ಟನಲ್ ಬಳಿಯ ಸೇತುವೆ ಬಳಿ ಕುಸಿದ ರಸ್ತೆ| ಒಂದು ಕಿಲೋಮೀಟರ್ ವರೆಗೂ ಇಲ್ಲ ಬೀದಿ ದೀಪ !
ಉತ್ತರ ಕನ್ನಡ ಜಿಲ್ಲೆಯಲ್ಲಿ 18 ಸಾವಿರ ಜನರು ಮೀನುಗಾರಿಕೆಯಲ್ಲಿ ತೊಡಗಿದ್ದಾರೆ. ಇವುಗಳಲ್ಲಿ ಸಾಂಪ್ರದಾಯಿಕ,ಏಂಡಿ ಮೀನುಗಾರಿಕೆ, ಪರ್ಷಿಯನ್ ಬೋಟ್ ಮೀನುಗಾರಿಕೆ ನಡೆಸುತ್ತಾರೆ. ಹವಾಮಾನ ವೈಪರಿತ್ಯದ ಎಫೆಕ್ಟ್ ಸಾಂಪ್ರದಾಯಿಕ ಮೀನುಗಾರಿಕೆಯನ್ನು ಸಂಪೂರ್ಣ ನೆಲ ಕಚ್ಚಿದೆ. ಇದರ ಜೊತೆ ಆಳ ಸಮುದ್ರದಲ್ಲಿ ಪರ್ಷಿಯನ್ ಬೋಟ್ ಮೀನುಗಾರಿಕೆ ನಡೆಸುವವರಿಗೂ ಹೊಡೆತ ಕೊಟ್ಟಿದ್ದು ಕಳೆದ ಎರಡು ತಿಂಗಳಿಂದ ಸಮುದ್ರದಲ್ಲಿ ಆದ ಹವಾಮಾನ ವೈಪರಿತ್ಯದಿಂದ ಮೀನುಗಾರಿಕೆ ನಡೆಸಿಲ್ಲ.

Ankola| ಉಪನ್ಯಾಸಕನ ಲೈಂಕಿಕ ಕಿರುಕುಳ-ವಿದ್ಯಾರ್ಥಿಗಳು,ಪೋಷಕರಿಂದ ಕಾಲೇಜಿಗೆ ಮುತ್ತಿಗೆ.
ಇನ್ನು ಆಳ ಸಮುದ್ರದಲ್ಲಿ ಮೀನುಗಳು ಉತ್ತಮವಾಗಿ ಸಿಗುತಿದ್ದರೂ ಅಲೆಗಳ ಅಬ್ಬರ ಹೆಚ್ಚಿರುವ ಕಾರಣಕ್ಕೆ ಬಂದರಿನಲ್ಲಿ ಉಳಿಯುವಂತೆ ಮಾಡಿದೆ. ಇನ್ನು ಮೀನುಗಾರಿಕೆಗಾಗಿ ನೆರೆಯ ಗೋವಾ, ಒರಿಸ್ಸಾ,ಜಾರ್ಖಂಡ್ ಸೇರಿದಂತೆ ಹಲವು ರಾಜ್ಯದಿಂದ ಮೀನುಗಾರಿಕೆಗೆ ಕೆಲಸಕ್ಕಾಗಿ ಕಾರ್ಮಿಕರು ಸಹ ಜಿಲ್ಲೆಗೆ ಬಂದಿದ್ದು ಕೆಲಸವಿಲ್ಲದೇ ಕಾಲಿ ಸಮಯ ಕಳೆಯುವಂತೆ ಮಾಡಿದೆ. ಹೀಗಾಗಿ ಲಕ್ಷಾಂತರ ಬಂಡವಾಳ ಹಾಕಿ ಸಮುದ್ರಕ್ಕಿಳಿದಿದ್ದ ಮೀನುಗಾರರಿಗೆ ಈಭಾರಿಯು ಸಹ ಕೈ ಸುಟ್ಟುಕೊಳ್ಳುವಂತಾಗಿದೆ ಎಂಬುದು ಕಾರವಾರದ ಬೈತಕೋಲ್ ನಲ್ಲಿ ಬೋಟ್ ಹೊಂದಿರುವ ಪ್ರಶಾಂತ್ ಹರಿಕಾಂತ್ರ ರವರ ಮಾತು.
Kumta | ಪೊಲೀಸ್ ಚಕ್ ಪೋಸ್ಟ್ ಮೇಲೆ ಹರಿದ ಲಾರಿ , ಬಚಾವ್ ಆದ ಪೊಲೀಸರು.
ಈ ಭಾರಿ ಹವಾಮಾನ ವೈಪರುತ್ಯ ಮೀನುಗಾರಿಕಾ ಉದ್ಯಮದ ಮೇಲೆ ದೊಡ್ಡ ಹೊಡೆತ ನೀಡಿದೆ. ಮೀನುಗಾರಿಕಾ ಇಲಾಖೆ ಮಾಹಿತಿ ಪ್ರಕಾರ ಡಿಸೆಂಬರ್ ನಿಂದ ಮೀನುಗಾರಿಕೆ ಚೇತರಿಸಿಕೊಳ್ಳುವ ನಂಬಿಕೆ ವ್ಯಕ್ತಪಡಿಸುತ್ತಾರೆ.ಆದರೇ ಮೀನುಗಾರರು ಮತ್ತೆ ಹವಾಮಾನ ಬದಲಾವಣೆ ಆದರೇ ಸಮುದ್ರಕ್ಕೆ ಇಳಿಯುವುದು ಹೇಗೆ ಎಂಬ ಭಯ ಕಾಡುತ್ತಿದೆ. ಇನ್ನು ಉಳಿದ ಅಲ್ಪ ಅವಧಿಯಲ್ಲಿ ಮೀನುಗಾರಿಕೆ ನಡೆಸುವುದು ಕಷ್ಟ ಎನ್ನುವುದು ಮೀನುಗಾರರ ಮಾತಾಗಿದೆ. ಹೀಗಾಗಿ ಈ ಭಾರಿ ಅಧಿಕ ಮಳೆ,ಹವಾಮಾನ ಬದಲಾವಣೆ ಮೀನುಗಾರಿಕಾ ಕ್ಷೇತ್ರವನ್ನು ತಲ್ಲಣಿಸುವಂತೆ ಮಾಡಿದ್ದು ಜಿಲ್ಲೆಯ ಆರ್ಥಿಕ ಸ್ಥಿತಿಯ ಮೇಲೆ ಹೊಡೆತ ಕೊಡುತ್ತಿದೆ. ಮುಂದಿನ ನಾಲ್ಕು ತಿಂಗಳಲ್ಲಿ ಉತ್ತಮ ಮತ್ಸ್ಯ ಭೇಟೆ ನಿರೀಕ್ಷೆ ಮಾಡಲಾಗುತಿದ್ದು ಸಮುದ್ರ ತನ್ನ ಪ್ರಕೋಪ ಕಡಿಮೆ ಮಾಡುವನೇ ಎಂಬ ನಿರೀಕ್ಷೆ ಮೀನುಗಾರರದ್ದಾಗಿದೆ.