Uttara kannada ಜಿಲ್ಲೆಯ ಜನರಿಗಿಲ್ಲ "ಗ್ಯಾರಂಟಿ ಬದುಕು"ಮಳೆ ಹಾನಿ ಶಾಸ್ವತ ಪರಿಹಾರಕ್ಕೆ ಹಣದ ಕೊರತೆ!
Uttara kannda ಜಿಲ್ಲೆಯ ಜನರಿಗಿಲ್ಲ "ಗ್ಯಾರಂಟಿ ಬದುಕು"ಮಳೆ ಹಾನಿ ಶಾಸ್ವತ ಪರಿಹಾರಕ್ಕೆ ಹಣದ ಕೊರತೆ!
ಕಾರವಾರ :- ಜೂನ್ ಆರಂಭಕ್ಕೂ ಮುನ್ನವೇ ರಾಜ್ಯದ ಹಲವು ಕಡೆ ಅಬ್ಬರದ ಮಳೆ (rain)ಸುರಿದು, ಅನೇಕ ಅವಾಂತರಗಳನ್ನು ಸೃಷ್ಟಿಸುತ್ತಿರುವ ಬೆನ್ನಲ್ಲೆ, ಉತ್ತರ ಕನ್ನಡ ಜಿಲ್ಲೆಯ ಜನರಲ್ಲಿ ಆತಂಕ ಮನೆ ಮಾಡಿದೆ. ಶಿರೂರು (shirur)ದುರಂತದಲ್ಲಿ ಜಿಲ್ಲೆಗೆ ಬಂದಿದ್ದ ಸಿಎಂ ಸಿದ್ಧರಾಮಯ್ಯ, ಶಾಶ್ವತ ಪರಿಹಾರ ನೀಡುವ ಭರವಸೆ ಇದುವರೆಗೂ ಕಾರ್ಯರೂಪಕ್ಕೆ ಬರದಿರುವುದರಿಂದ ಗುಡ್ಡ ಕುಸಿತದ (landsilde) ಆತಂಕ ಹೆಚ್ಚಿಸಿದೆ.
ಹೌದು ಕಳೆದ ವರ್ಷ ಸುರಿದ ಅಬ್ಬರದ ಮಳೆಯಿಂದ, ಉತ್ತರ ಕನ್ನಡ ಜಿಲ್ಲೆಯಲ್ಲಿ ಭಾರಿ ಸಾವು ನೋವು ಸಂಭವಿಸಿದ್ದವು. ಕಳೆದ ವರ್ಷ ಜಿಲ್ಲೆಯ ಶಿರೂರು ಗುಡ್ಡ ಕುಸಿತದಲ್ಲಿ ಕಣ್ಮರೆ ಯಾಗಿದ್ದ 11 ಜನರ ಪೈಕಿ ಇಬ್ಬರ ಸಣ್ಣ ಸುಳಿವು ಕೂಡ ಇದುವರೆಗೂ ಸಿಕ್ಕಿಲ್ಲ.
ಇದನ್ನೂ ಓದಿ:-Shirur :ಗುಡ್ಡ ಕುಸಿತದಲ್ಲಿ ಮಾಲೀಕನನ್ನು ಕಳೆದುಕೊಂಡು ಅನಾಥವಾಗಿದ್ದ ಶ್ವಾನ ಮ್ಯಾರಥಾನ್ ನಲ್ಲಿ ಓಟ :ಬೆಳ್ಳಿ ಪದಕ
ಇದರ ಬೆನ್ನಲ್ಲೆ ಈ ವರ್ಷ ಮೇ ಎರಡನೇ ವಾರದಿಂದ ರಾಜ್ಯದಲ್ಲಿ ಅಬ್ಬರದ ಮಳೆ ಸುರಿಯುತ್ತಿರುವ ಹಿನ್ನೆಲೆ. ಹವಾಮಾನ ಇಲಾಖೆ ಹೇಳಿದಂತೆ ಕಳೆದ ಬಾರಿಗಿಂತ ,ಹೆಚ್ಚಿನ ಮಳೆ ಬಿಳುವ ಎಲ್ಲ ಲಕ್ಷಣಗಳು ಕಾಣುತ್ತಿವೆ. ಈ ವರ್ಷ ಮತ್ತೆ ಉತ್ತರ ಕನ್ನಡ ಜಿಲ್ಲೆಯಲ್ಲಿ ಭಾರಿ ಅವಾಂತರ ಆಗುವ ಆತಂಕ ಜಿಲ್ಲೆಯ ಜನರನ್ನ ಕಾಡುತ್ತಿದೆ. ಕಳೆದ ವರ್ಷ ಶಿರೂರು ಗೆ ಭೇಟಿ ನೀಡಿದ್ದ ಸಿಎಂ ಸಿದ್ಧರಾಮಯ್ಯ, ತಜ್ಞರ ಸೂಚಿಸಿದಂತೆ ಜಿಲ್ಲೆಯಲ್ಲಿನ 329 ಗುಡ್ಡ ಕುಸಿತದ ಪೈಕಿ, ಸುಮಾರು 100 ಕೋಟಿ ರೂಪಾಯಿ ವೆಚ್ಚದಲ್ಲಿ ಪ್ರಥಮ ಹಂತದ ಶಾಶ್ವತ ಪರಿಹಾರ ಮಾಡುವ ಭರವಸೆ ನೀಡಿದ್ರು. ಆದ್ರೆ ಮಳೆಗಾಲ ಆರಂಭ ಆದ್ರು ರಾಜ್ಯ ಸರ್ಕಾರದಿಂದ ಇದುವರೆಗೂ ಒಂದೇ ಒಂದು ರೂಪಾಯಿ ಹಣ ಕೂಡ ಬಂದಿಲ್ಲ.
ಇದನ್ನೂ ಓದಿ:-Shirur ದುರಂತ | ಕಾರ್ಯಾಚರಣೆ ಸಂಪೂರ್ಣ ಸ್ಥಗಿತ DNA ವರದಿಗೂ ಸಂಕಷ್ಟ!
ಇನ್ನು ಈ ಕುರಿತು ಜಿಲ್ಲಾಧಿಕಾರಿ ಲಕ್ಷ್ಮಿ ಪ್ರಿಯಾ ಕೂಡ ಈಗಾಗಲೇ 100 ಕೋಟಿ ಅನುದಾನಕ್ಕೆ ಈ ಹಿಂದೆಯೇ ಸರ್ಕಾರಕ್ಕೆ ಕಳುಹಿಸಲಾಗಿದೆ. ಆದರೇ ಈ ವರೆಗೂ ಹಣ ಬಿಡುಗಡೆಯಾಗಿಲ್ಲ ,ಈಗಿರುವ ಹಣದಲ್ಲಿ ಮುಂಜಾಗ್ರತಾ ಕ್ರಮದ ಕಾಮಗಾರಿ ನಡೆಸುತ್ತೇವೆ ,ಹಣ ಬಿಡುಗಡೆಯಾಗಬೇಕು ಶೀಘ್ರದಲ್ಲೇ ಆಗಲಿದೆ ಎಂದಿದ್ದಾರೆ. ಇದಲ್ಲದೆ ಶಿರೂರಿನ ಗಂಗಾವಳಿ ನದಿ ನೀರನಲ್ಲಿ ಬಿದ್ದ ಮಣ್ಣನ್ನು ಸಹ ತೆಗೆಯಲು ಐ.ಆರ್.ಬಿ ಕಂಪನಿ ಸಿದ್ದವಾಗಿದ್ದು ಶೀಘ್ರದಲ್ಲೇ ತೆಗೆಯುತ್ತೇವೆ ಎಂದಿದ್ದಾರೆ.
ದುರಂತ ಎಂದರೇ ಗುಡ್ಡ ಕುಸಿತದ ತಡೆಗೆ ರಾಜ್ಯ ಸರ್ಕಾರ ಹಣ ಬಿಡುಗಡೆ ಮಾಡುವುದಾಗಿ ಹೇಳಿ ಮೂರು ಬಾರಿ ಜಿಲ್ಲಾಡಳಿತದಿಂದ ಮಾಹಿತಿಯನ್ನ ತರಿಸಿಕೊಂಡಿದೆ. ಆದ್ರೆ ಇದವರೆಗೂ ಒಂದೇ ಒಂದು ರೂಪಾಯಿ ಹಣ ಬಿಡುಗಡೆ ಮಾಡಿಲ್ಲ. ಇನ್ನೇನು ಮಳೆ ಪ್ರಾರಂಭಕ್ಕೆ ದಿನಗಣನೆ ಪ್ರಾರಂಭವಾಗಿದೆ. ಜೂನ್ ಮೊದಲವಾರದೊಳಗೇ ಮುಂಗಾರ ಕರಾವಳಿಭಾಗಕ್ಕೆ ಅಪ್ಪಳಿಸಲಿದ್ದು ಕಾಮಗಾರಿ ಮಾಡಲು ತೊಡಕಾಗಲಿದೆ.
ಇನ್ನೂ ಈ ವಿಚಾರವಾಗಿ ಕಳೆದ ಎರಡು ತಿಂಗಳ ಹಿಂದೆ ಜಿಲ್ಲಾ ಉಸ್ತುವರಿ ಸಚಿವ ಮಂಕಾಳು ವೈದ್ಯರಿಗೆ ಪ್ರಶ್ನಸಿದಾಗ, ರಾಜ್ಯ ಸರ್ಕಾರದಿಂದ 10 ಕೋಟಿ ಹಣ ಬಿಡುಗಡೆ ಆಗಿದ್ದು ಆದಷ್ಟು ಬೇಗ ಕಾಮಗಾರಿ ಆರಂಭ ಮಾಡಲಾಗುವುದು ಎಂದು ತಿಳಿಸಿದ್ರು. ಈಗ ಮಳೆಗಾಲ ಆರಂಭ ಆಗುತ್ತಿದ್ದಂತೆ ಯೂ ಟರ್ನ್ ಹೊಡೆದಿರುವ ಸಚಿವ ವೈದ್ಯ. ಗುಡ್ಡ ಕುಸಿತ ತಡೆಗೆ ಎನ್.ಎಚ್.ಎ.ಐ ಮತ್ತು ಕೇಂದ್ರ ಸರ್ಕಾರ ಕಾಳಜಿ ವಹಿಸ ಬೇಕಿತ್ತು. ಆದ್ರೆ ಇದುವರೆಗೂ ಏನನ್ನು ಮಾಡಿಲ್ಲ ಎಂದು ಕೇಂದ್ರ ಸರ್ಕಾರದ ಕಡೆ ಬೊಟ್ಟು ಮಾಡುತ್ತಿದ್ದಾರೆ.
ಒಟ್ಟಿನಲ್ಲಿ ರಾಜಕಾರಣಿಗಳ ,ಅಧಿಕಾರಿಗಳ ಮೇಲಾಟ ಇದೀಗ ಜಿಲ್ಲೆಯ ಜನರಿಗೆ ಸಂಕಷ್ಟ ತಂದೊಡ್ಡಿದೆ.