ಪ್ರಮುಖ ಸುದ್ದಿಮುಖಪುಟLocal storyರಾಜ್ಯರಾಷ್ಟ್ರೀಯಅಂತರರಾಷ್ಟ್ರೀಯCrime newsಮನೋರಂಜನೆ
Advertisement

Uttara kannada: ವಿವಿಧ ಉದ್ಯೋಗ ತರಬೇತಿಗಳಿಗೆ ಅರ್ಜಿ ಆಹ್ವಾನ ಆಸಕ್ತರಿಗೆ ಇಲ್ಲಿದೆ ಅವಕಾಶ 

Uttara Kannada: Apply now for marriage allowance & fee reimbursement schemes, HAL apprentice jobs, free house wiring, photography & videography training, and NWKRTC commercial shop allotments. Last dates and contact details inside.
05:50 AM Sep 10, 2025 IST | ಶುಭಸಾಗರ್
Uttara Kannada: Apply now for marriage allowance & fee reimbursement schemes, HAL apprentice jobs, free house wiring, photography & videography training, and NWKRTC commercial shop allotments. Last dates and contact details inside.

Uttara kannada: ವಿವಿಧ ಉದ್ಯೋಗ ತರಬೇತಿಗಳಿಗೆ ಅರ್ಜಿ ಆಹ್ವಾನ ಆಸಕ್ತರಿಗೆ ಇಲ್ಲಿದೆ ಅವಕಾಶ 

Advertisement

ವಿವಾಹ ಪ್ರೋತ್ಸಾಹಧನ ಹಾಗೂ ಶುಲ್ಕ ಮರುಪಾವತಿ ಯೋಜನೆಗೆ ಅರ್ಜಿ ಆಹ್ವಾನ

ಕಾರವಾರ:- ಪ್ರಸುತ್ತ ಸಾಲಿನ ವಿವಾಹ ಪ್ರೋತ್ಸಾಹಧನ ಹಾಗೂ ಶುಲ್ಕ ಮರುಪಾವತಿ ಯೋಜನೆಗೆ ಅರ್ಜಿಗಳನ್ನು ನೀಡುವಫಲಾನುಭವಿಗಳು ಆಯಾ ತಾಲೂಕಿನ ತಾಲೂಕು ಪಂಚಾಯತನಲ್ಲಿ ಕಾರ್ಯ ನಿರ್ವಹಿಸುತ್ತಿರುವ ವಿವಿದೊದ್ಧೇಶ ಪುನರ್ವಸತಿ ಕಾರ್ಯಕರ್ತರಿಗೆ ಸಂಪರ್ಕಿಸಿ ನೀಡಬಹುದಾಗಿದ್ದು, ಅರ್ಜಿಗಳನ್ನು ಸಲ್ಲಿಸಲು ಅಕ್ಟೋಬರ್ 15 ಕೊನೆಯ ದಿನವಾಗಿದೆ.

ಹೆಚ್ಚಿನ ಮಾಹಿತಿಗಾಗಿ ವಿಕಲಚೇತನರ ಹಾಗೂ ಹಿರಿಯ ನಾಗರಿಕರ ಸಬಲೀಕರಣ ಇಲಾಖೆಯ ಇಲಾಖೆ ಕಾರವಾರ ದೂರವಾಣಿ ಸಂ: 08382-200758, ತಾಲೂಕು ವಿವಿದ್ದೋದ್ದೇಶ ಪುನರ್ವಸತಿ ಕಾರ್ಯಕರ್ತರಾದ ಕಾರವಾರ ಶಶಿರೇಖಾ .ವಿ. ಮಾಳಸೇಕರ ಮೊ. ಸಂ: 9739054681, ಅಂಕೋಲಾ ಕವಿತಾ ಶ್ರೀಕಾಂತ ನಾಯ್ಕ, 8217882332, ಕುಮಟಾ ಸುಧಾ ಜೈರಾಮ ಭಟ್ 7019198365, ಹೊನ್ನಾವರ ಶೈಲಾ .ವಿ. ನಾಯ್ಕ 8217079665, ಭಟ್ಕಳ ಮೋಹನ ಅಪ್ಪು ದೇವಾಡಿಗ 9448902002, ಶಿರಸಿ ಸ್ನೇಹಾ ಅಂಬಿಗ 9148723385, ಸಿದ್ದಾಪುರ ಶ್ರೀಧರ .ಟಿ. ಹರ್ಗಿ 9972512435, ಯಲ್ಲಾಪುರ ಸಲೀಂ ಖುದ್ದುಸ್ ಶೇಖ್ 8095295796, ಮುಂಡಗೋಡ ಶೋಭಾ ಕಾಂತು ಭಟ್ಕಳ 9686508135, ಹಳಿಯಾಳ ಸುನೀತಾ ಕೃಷ್ಣಾ ಶಹಾಪೂರಕರ 8867645974, ಜೋಯಿಡಾ ರಾಜೇಸಾಬ್ .ಡಿ. ತಹಶೀಲ್ದಾರ 9449589571 ಸಂಪರ್ಕಿಸುವಂತೆ ಜಿಲ್ಲಾ ವಿಕಲಚೇತನರ ಹಾಗೂ ಹಿರಿಯ ನಾಗರಿಕರ ಸಬಲೀಕರಣಾಧಿಕಾರಿ ರಾಘವೇಂದ್ರ .ಜಿ. ಭಟ್ ಪ್ರಕಣೆಯಲ್ಲಿ ತಿಳಿಸಿದ್ದಾರೆ.Karwar:ಶಾಸಕ ಸೈಲ್ ಬಂಧಿಸಿದ ಇಡಿ ಅಧಿಕಾರಿಗಳು.

Advertisement

ಅಪ್ರೆಂಟಿಸ್ ತರಬೇತಿಗೆ ಅರ್ಜಿ ಆಹ್ವಾನ

 ಹಿಂದುಸ್ಥಾನ ಏರೊನಾಟಿಕ್ಸ್ ಲಿಮಿಟೆಡ್‌ನ ಟ್ರೇನಿಂಗ್ ಸಂಸ್ಥೆ, (HAL) ಬೆಂಗಳೂರು ಇವರು, ಫಿಟ್ಟರ್, ಟರ್ನರ್, ಮಶಿನಿಷ್ಟö, ಇಲೆಕ್ಟೀಶಿಯನ್, ವೆಲ್ಡರ್, ಕಂಪ್ಯೂಟರ ಆಪರೇಟರ್ ಮತ್ತು ಪ್ರೋಗ್ರಾಮಿಂಗ್ ಅಸಿಸ್ಟಂಟ್, ಕಾರ್ಪೆಂಟರ್, ಫೌಂಡ್ರಿಮ್ಯಾನ್, ಶೀಟ್‌ಮೆಟಲ್ ವರ್ಕರ್, ಟೂಲ್ & ಡೈ ಮೇಕರ್ CNC  ಪ್ರೊಗ್ರಾಮರ್ ಕಂ ಆಪರೇಟರ್, ಮೆಕ್ಯಾನಿಕ್ ರೆಫ್ರಿಜರೇಶನ್ & ಏರ್ ಕಂಡಿಶನಿಂಗ್ ಟ್ರೇಡ್‌ಗಳಲ್ಲಿ ಕರ್ನಾಟಕ ರಾಜ್ಯದ ಮಾನ್ಯತೆ ಪಡೆದ ಅರ್ಹ ಅಭ್ಯರ್ಥಿಗಳಿಂದ ಅರ್ಜಿ ಆಹ್ವಾನಿಸಲಾಗಿದೆ.

ಆಸಕ್ತ ಅಭ್ಯರ್ಥಿಗಳು ಮೊದಲು https://apprenticeshipindia.gov.in ಪೋರ್ಟಲ್‌ನಲ್ಲಿ ನೋಂದಣಿ ಮಾಡಿ, ಅಪ್ರೆಂಟಿಸ್ ನೋಂದಣಿ ಸಂಖ್ಯೆಯೊಂದಿಗೆ ಉದ್ಯೋಗ ವಿನಿಮಯ ಕಛೇರಿಯನ್ನು ಖುದ್ದಾಗಿ ಭೇಟಿ ನೀಡಿ, ನಿಗದಿತ ನಮೂನೆಯ ಅರ್ಜಿಯನ್ನು ಪಡೆದು, ಭರ್ತಿ ಮಾಡಿ, ಸ್ವಧೃಢೀಕೃತ ಎಸ್.ಎಸ್.ಎಲ್.ಸಿ. ಅಂಕಪಟ್ಟಿ ಮತ್ತು ರಾಷ್ಟಿçÃಯ ವೃತ್ತಿ ತರಬೇತಿ ಕೌನ್ಸಿಲ್‌ನಿಂದ ಅಂಗೀಕೃತವಾದ ಸಂಸ್ಥೆಯಿಂದ ಪಡೆದ ಐ.ಟಿ.ಐ. ಎನ್.ಸಿ.ವಿ.ಟಿ. ಪ್ರಮಾಣ ಪತ್ರ ಮತ್ತು ಅಂಕಪಟ್ಟಿಗಳು, ಇತರೆ ಜಾತಿ ಪ್ರಮಾಣಪತ್ರ, ಪಿ.ಎಚ್, ಸಶಸ್ತ ಸಿಬ್ಬಂದಿ ಪ್ರಮಾಣ ಪತ್ರದ ಪ್ರತಿ, ಆಧಾರಕಾರ್ಡ ಪ್ರತಿ, ಪಾನಕಾರ್ಡ ಪ್ರತಿ, ಆನ್‌ಲೈನ್ ಅಪ್ರೆಂಟಿಸ್ ನೋಂದಣಿ ಪ್ರತಿ ಹಾಗೂ ಇತ್ತೀಚಿನ ಎರಡು ಪಾಸ್‌ಪೊರ್ಟ ಸೈಜ್ ಫೊಟೊಗಳೊಂದಿಗೆ ಸೆ.26 ರೊಳಗಾಗಿ ಉದ್ಯೊಗ ವಿನಿಮಯ ಕಚೇರಿಗೆ ಸಲ್ಲಿಸಬಹುದಾಗಿದೆ.

Ankola:ಬ್ರಿಟೀಷರ ಕಾಲದಿಂದ ಪೂಜೆ ಗೈಯುತ್ತಿರುವ ಗೋಡೆ ಗಣಪನ ಶಕ್ತಿ ಏನು ಗೊತ್ತಾ ?

ಹೆಚ್ಚಿನ ಮಾಹಿತಿಗಾಗಿ ಕಛೇರಿ ದೂರವಾಣಿ ಸಂಖ್ಯೆ: 08382-226386 ಸಂಪರ್ಕಿಸುವಂತೆ ಕಾರವಾರ ಯೋಜನಾ ಉದ್ಯೋಗ ವಿನಿಮಯ ಕಚೇರಿ ಉದ್ಯೋಗಾಧಿಕಾರಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಇಲೆಕ್ಟಿಕ್ ಹೌಸ್ ವೈರಿಂಗ್ ಉಚಿತ ತರಬೇತಿಗೆ ಅರ್ಜಿ ಆಹ್ವಾನ

 ಹಳಿಯಾಳದ (haliyal) ಕೆನರಾ ಬ್ಯಾಂಕ್(bank) ದೇಶಪಾಂಡೆ ಆರ್‌ಸೆಟ್ ತರಬೇತಿ ಸಂಸ್ಥೆಯಲ್ಲಿ 18 ರಿಂದ 45 ವಯಸ್ಸಿನ ಗ್ರಾಮೀಣ ಭಾಗದ ನಿರುದ್ಯೋಗ ಯುವಕ ಯುವತಿಯರಿಗಾಗಿ ನವೆಂಬರ್ ತಿಂಗಳಿನಲ್ಲಿ ಇಲೆಕ್ಟಿçಕ್ ಹೌಸ್ ವೈರಿಂಗ್ ಉಚಿತ ತರಬೇತಿಗಾಗಿ ಅರ್ಜಿ ಆಹ್ವಾನಿಸಲಾಗಿದೆ.

ಆಸಕ್ತ ಅಭ್ಯರ್ಥಿಗಳು ತಮ್ಮ ಹೆಸರು, ವಿಳಾಸವನ್ನು ಬಿಳಿ ಹಾಳೆಯ ಮೇಲೆ ಬರೆದು 9483485489 ಗೆ ವಾಟ್ಸಪ್ ಮಾಡುವ ಮೂಲಕ ಅಥವಾ ವೆಬ್‌ಸೈಟ್: https://forms.gle/CqDK1qiRflyagvCW7  ಮೂಲಕ ಅರ್ಜಿ ಸಲ್ಲಿಸಬಹುದು. ತರಬೇತಿ ಅವಧಿಯಲ್ಲಿ ಊಟ ವಸತಿ ಸಂಪೂರ್ಣ ಉಚಿತವಾಗಿರುತ್ತದೆ. ಮೊದಲು ಬಂದವರಿಗೆ ಹಾಗೂ ಗ್ರಾಮೀಣ ಭಾಗದವರಿಗೆ ಮೊದಲ ಆದ್ಯತೆ ನೀಡಲಾಗುವುದು.

ತರಬೇತಿಯಲ್ಲಿ ಕೌಶಲ್ಯ, ಸಾಫ್ಟ್ ಸ್ಟೀಲ್ಸ್, ಯೋಗ ತರಬೇತಿ ಹಾಗೂ ಬ್ಯಾಂಕಿನಿAದ ಸಾಲ ಪಡೆದು ಸ್ವ-ಉದ್ಯೋಗ ಪ್ರಾರಂಭಿಸಲು ಬೇಕಾಗುವ ಜ್ಞಾನ, ಸರಕಾರಿ ಯೋಜನೆಗಳು ಮತ್ತು ಯೋಜನಾ ವರದಿ ತಯಾರಿಕೆ ಇನ್ನಿತರ ಮಾಹಿತಿಗಳನ್ನು ಉಚಿತವಾಗಿ ನೀಡಲಾಗುವುದು.

ಹೆಚ್ಚಿನ ಮಾಹಿತಿಗಾಗಿ ದೂರವಾಣಿ ಸಂಖ್ಯೆ 8970145354, 9482188780 ನ್ನು ಸಂಪರ್ಕಿಸಬಹುದು ಎಂದು ಹಳಿಯಾಳ ಕೆನರಾ ಬ್ಯಾಂಕ್ ದೇಶಪಾಂಡೆ ಆರ್‌ಸೆಟ್ ಸಂಸ್ಥೆಯ ನಿರ್ದೇಶಕರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಫೋಟೋಗ್ರಫಿ ಮತ್ತು ವಿಡಿಯೋಗ್ರಫಿ ಉಚಿತ ತರಬೇತಿಗೆ ಅರ್ಜಿ ಆಹ್ವಾನ.

 ಕೆನರಾ ಬ್ಯಾಂಕ್ ಮತ್ತು ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ಶಿಕ್ಷಣ ಟ್ರಸ್ಟ್ ಸಹಯೋಗದಲ್ಲಿ ನಡೆಸುತ್ತಿರುವ ರುಡ್‌ಸೆಟ್ ಸಂಸ್ಥೆಯ ವತಿಯಿಂದ ಫೋಟೋಗ್ರಫಿ ಮತ್ತು ವಿಡಿಯೋಗ್ರಫಿ ಕುರಿತ 31 ದಿನಗಳ ಉಚಿತ ತರಬೇತಿಯನ್ನು ಅಕ್ಟೋಬರ್ 29 ರಿಂದ ಹಮ್ಮಿಕೊಳ್ಳಲಾಗಿದ್ದು, ಗ್ರಾಮೀಣ ಆಸಕ್ತ ನಿರುದ್ಯೋಗಿ ಯುವಕ-ಯುವತಿಯರಿಂದ ಅರ್ಜಿ ಆಹ್ವಾನಿಸಲಾಗಿದೆ.

ಆಸಕ್ತರು ತಮ್ಮ ಹೆಸರನ್ನು ನೋಂದಾಯಿಸಲು ಅಕ್ಟೋಬರ್ 18 ಕೊನೆಯ ದಿನವಾಗಿದೆ. 18 ರಿಂದ 45 ವರ್ಷ ವಯೋಮಾನದವರಾಗಿದ್ದು, ಕನ್ನಡ ಭಾಷೆ ಓದಲು ಮತ್ತು ಬರೆಯಲು ಬಲ್ಲವರಾಗಿರಬೇಕು. ಬಿಪಿಎಲ್ ಕಾರ್ಡ್ ಅಥವಾ ಜಾಬ್ ಕಾರ್ಡ್ ಹಾಗೂ ಆಧಾರ್ ಕಾರ್ಡ್ನ್ನು ಕಡ್ಡಾಯವಾಗಿ ಹೊಂದಿರಬೇಕು. ತರಬೇತಿಯು ಕಡ್ಡಾಯವಾಗಿ ವಸತಿಯುತವಾಗಿದ್ದು, ತರಬೇತಿಯ ಅವಧಿಯಲ್ಲಿ ಉಚಿತವಾಗಿ ಊಟ ಮತ್ತು ವಸತಿ ನೀಡಲಾಗುವುದು ಹಾಗೂ ತರಬೇತಿ ಪೂರ್ಣಗೊಂಡ ನಂತರ ಕೇಂದ್ರ ಸರ್ಕಾರದ ಗ್ರಾಮೀಣಾಭಿವೃದ್ಧಿ ಸಚಿವಾಲಯದಿಂದ ಪ್ರಮಾಣಪತ್ರವನ್ನು ವಿತರಿಸಲಾಗುವುದು.

 ಆಸಕ್ತರು ಅರ್ಜಿ ಸಲ್ಲಿಸಲು ಹಾಗೂ ಹೆಚ್ಚಿನ ಮಾಹಿತಿಗಾಗಿ ರುಡ್‌ಸೆಟ್ ಸಂಸ್ಥೆ, ಅರಿಶಿನಕುಂಟೆ, ನೆಲಮಂಗಲ ತಾಲ್ಲೂಕು, ಬೆಂಗಳೂರು ಗ್ರಾಮಾಂತರ ಜಿಲ್ಲೆ, ಮೊಬೈಲ್ ಸಂಖ್ಯೆ: 9740982585, 9241482541 ನ್ನು ಸಂಪರ್ಕಿಸಬಹುದಾಗಿದೆ ಎಂದು ರುಡ್‌ಸೆಟ್ ಸಂಸ್ಥೆಯ ಬೆಂಗಳೂರು ಶಾಖೆಯ ನಿರ್ದೇಶಕ ರವಿಕುಮಾರ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಬಸ್ ನಿಲ್ದಾಣದ ವಾಣಿಜ್ಯ ಮಳಿಗೆ ನೇರ ಹಂಚಿಕೆ

KSRTC bus fare hike new rates from Uttara Kannada to various destinations

ವಾಯವ್ಯ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆ ವ್ಯಾಪ್ತಿಯ ಹುಬ್ಬಳ್ಳಿ-ಗ್ರಾ, ಧಾರವಾಡ, ಹು-ಧಾ ನಗರ ಸಾರಿಗೆ, ಬೆಳಗಾವಿ, ಬಾಗಲಕೋಟೆ, ಹಾವೇರಿ, ಗದಗ, ಚಿಕ್ಕೋಡಿ ಮತ್ತು ಶಿರಸಿ ವಿಭಾಗಗಳ ಬಸ್ ನಿಲ್ದಾಣಗಳ ಆವರಣಗಳಲ್ಲಿನ ಕೆಲವು ವಾಣಿಜ್ಯ ಮಳಿಗೆಗಳು ಬಹುದಿನಗಳಿಂದ ಖಾಲಿ ಉಳಿದಿದ್ದು, ಸಾರ್ವಜನಿಕ ಪ್ರಯಾಣಿಕರಿಗೆ ಅಗತ್ಯ ಮೂಲಭೂತ ಸೌಕರ್ಯ ಒದಗಿಸುವ ದೃಷ್ಟಿಯಿಂದ ಈ ಮಳಿಗೆಗಳನ್ನು ಟೆಂಡರ್/ಸಂದಾನಗಳಿಲ್ಲದೇ ನೆರವಾಗಿ ಹಂಚಿಕೆ ಮಾಡಲು ಅವಕಾಶ ಕಲ್ಪಿಸಲಾಗಿದೆ. ಇದೊಂದು ವ್ಯಾಪಾರ-ವಹಿವಾಟು ಮಾಡಲು ಆಸಕ್ತಿ ಇರುವವರಿಗೆ ಸುವರ್ಣ ಅವಕಾಶವಾಗಿರುತ್ತದೆ. ಈ ಮಳಿಗೆಗಳಲ್ಲಿ ವ್ಯಾಪಾರ-ವಹಿವಾಟು ನಡೆಸಲು ಇಚ್ಛಿಸುವ ಆಸಕ್ತದಾರರು ಅವುಗಳ ನಿಗದಿತ ಮಿತವ್ಯಯ ಶುಲ್ಕಕ್ಕಿಂತ ಹೆಚ್ಚಿನ ಬೇಡಿಕೆಯನ್ನು ಲಿಖಿತವಾಗಿ ಸಲ್ಲಿಸುವ ಮೂಲಕ ನಿಯಮಾವಳಿಯನ್ವಯ ಪಡೆದುಕೊಳ್ಳಬಹುದಾಗಿದೆ.

ಹೆಚ್ಚಿನ ಮಾಹಿತಿಗಾಗಿ www.nwkrtc.karnataka.gov.in  ನಲ್ಲಿ ಪರಿಶೀಲಿಸಬಹುದಾಗಿದೆ. ಹುಬ್ಬಳ್ಳಿ (ಗ್ರಾ)-7760991652, ಧಾರವಾಡ-7760996271, ಹು-ಧಾ ನಗರ ಸಾರಿಗೆ-9606030542, ಬೆಳಗಾವಿ-7760991602,ಬಾಗಲಕೋಟೆ-7760991752, ಹಾವೇರಿ -7760991902, ಗದಗ-7760991802, ಚಿಕ್ಕೋಡಿ-7760991852, ಶಿರಸಿ-7760991702 ವಿಭಾಗಗಳಿಗೆ ಸಂಪರ್ಕಿಸಬಹುದಾಗಿದೆ. ವಾ.ಕ.ರ.ಸಾ ಸಂಸ್ಥೆ ಪ್ರಕಟಣೆ ತಿಳಿಸಿದೆ.

ಕಾರವಾರದ ಗಿಲಾನಿ ಸೂಪರ್ ಮಾರ್ಕೆಟ್ ನಲ್ಲಿ ಭರ್ಜರಿ ಆಫರ್ ,ಗ್ರೂಸರಿ ಕರೀದಿ ದಾರರಿಗೆ ಸಿಗಲಿದೆ ಬಂಪರ್ ಬಹುಮಾನ
Advertisement
Tags :
apprenticeship KarnatakaCanara Bank trainingfee reimbursement Karnatakafree training programsgovernment schemesHAL apprentice recruitmentmarriage allowance schemeNWKRTC shop allotmentphotography training KarnatakaRUDSETI trainingUttara Kannada jobs
Advertisement
Next Article
Advertisement