Yallapur: ಮಗನ ಸಾವಿಗೆ ನ್ಯಾಯ ಬೇಕು- ಕಾಮಿಡಿ ಕಿಲಾಡಿಗಳು ಖ್ಯಾತಿಯ ನಟ ಚಂದ್ರಶೇಕರ್ ಸಿದ್ದಿ ತಾಯಿ ಲಕ್ಷ್ಮೀ
Yallapur: ಮಗನ ಸಾವಿಗೆ ನ್ಯಾಯ ಬೇಕು- ಕಾಮಿಡಿ ಕಿಲಾಡಿಗಳು ಖ್ಯಾತಿಯ ನಟ ಚಂದ್ರಶೇಕರ್ ಸಿದ್ದಿ ತಾಯಿ ಲಕ್ಷ್ಮೀ
ಕಾರವಾರ :- ಉತ್ತರ ಕನ್ನಡ ಜಿಲ್ಲೆಯ (uttara Kannada) ಯಲ್ಲಾಪುರ(yallapura) ತಾಲೂಕಿನ ಕಟ್ಟಿಗೆ ಗ್ರಾಮದ ಅರಣ್ಯದಲ್ಲಿ ಆತ್ಮಹತ್ಯೆ ಮಾಡಿಕೊಂಡ ಕಾಮಿಡಿ ಕಿಲಾಡಿಗಳು ಸೀಜನ್ -3 ಯ ಕಲಾವಿದ ಚಂದ್ರಶೇಖರ್ ಸಿದ್ದಿ ಸಾವಿನಲ್ಲಿ ಸಂಶಯವಿದೆ.ಆತನ ಸಾವು ಅಸಹಜ ನನಗೆ ಅನುಮಾನಗಳಿದ್ದು ,ಅದು ಬಗೆಹರಿಯಬೇಕು ಎಂದು ಚಂದ್ರಶೇಖರ್ ಸಿದ್ದಿ ತಾಯಿ ಲಕ್ಷ್ಮೀ ಸಿದ್ದಿ ನೋವು ತೋಡಿಕೊಂಡಿದ್ದಾರೆ.

ಮಗನ ಅಂತ್ಯಕ್ರಿಯೆಯ ವಿಧಿ ವಿಧಾನ ನೆರವೇರಿಸಿ kannadavani.news ಜೊತೆ ಮಾತನಾಡಿದ ಅವರು ಮಗನಿಗೆ ಯಾವುದೇ ಸಮಸ್ಯೆ ಇರಲಿಲ್ಲ, ಪತ್ನಿ ಜಗಳ ಮಾಡಿಕೊಂಡು ದೂರವಾಗಿದ್ದನ್ನು ಮನಸ್ಸಿಗೆ ತೆಗೆದುಕೊಂಡಿದ್ದ . ಇದರಿಂದ ಮಾನಸುಕವಾಗಿ ಕುಗ್ಗಿ ಹೋಗಿದ್ದನು. ಏನಾದ್ರು ಸಮಸ್ಯೆ ಇದ್ರೆ ಹೇಳು ಎಂದು ಹೇಳಿದಾಗಲೆಲ್ಲಾ ಏನೂ ಇಲ್ಲ ಎಂದು ಹೇಳುತಿದ್ದ,ಕೆಲವು ತಿಂಗಳ ಹಿಂದೆ ಸೀತಾರಾಮ ಕಲ್ಯಾಣ ಧಾರವಾಹಿಯಲ್ಲಿ ಪಾತ್ರ ಮಾಡಿ ಬಂದಿದ್ದ. ಒಳ್ಳೆ ಅವಕಾಶ ಸಿಗುತಿತ್ತು.ಪತ್ನಿ ವಿಷಯದಲ್ಲಿ ಕೆಲವು ಸಮಯ ವೇದನೆ ಅನುಭವಿಸುತಿದ್ದ , ಹೀಗಾಗಿ ಆತನನ್ನು ಕಾರವಾರದ ಕ್ರಿಮ್ಸ್ ವೈದ್ಯಕೀಯ ಆಸ್ಪತ್ರೆಯಲ್ಲಿ ತೋರಿಸಿದ್ದೆವು. ವೈದ್ಯರು ಏನೂ ಸಮಸ್ಯೆ ಇಲ್ಲ ಎಂದಿದ್ದರು.
ಇದನ್ನೂ ಓದಿ:-Comedy actor :ಕಾಮಿಡಿ ಕಿಲಾಡಿಗಳು ಖ್ಯಾತಿಯ ಚಂದ್ರಶೇಖರ್ ಸಿದ್ದಿ ನೇಣು ಬಿಗಿದುಕೊಂಡು ಆತ್ಮಹತ್ಯೆ
ಆದರೇ ಏಕಾ ಏಕಿ ಹೀಗೆ ಮಾಡಿಕೊಂಡಿದ್ದಾನೆ. ಅವನ ಸಾವಿನ ಬಗ್ಗೆ ಅನುಮಾನ ಇದೆ.ಹೀಗಾಗಿ ಯಲ್ಲಾಪುರದಲ್ಲಿ ಪೊಲೀಸರಿಗೆ ದೂರು ನೀಡಿದ್ದೇನೆ. ಪತ್ನಿ ವಿಷಯದಲ್ಲಿ ಆತ ಹೆಚ್ಚು ನೊಂದಿದ್ದ ,ಏಕಾ ಏಕಿ ಏಕೆ ಆತ್ಮಹತ್ಯೆ ಮಾಡಿಕೊಂಡ ಎಂಬಬಗ್ಗೆ ತಿಳಿಯಬೇಕು.
ಮೂರು ವರ್ಷದ ಪುಟ್ಟ ಮಗನಿದ್ದಾನೆ , ನನಗೆ ಇಬ್ಬರು ಹೆಣ್ಣುಮಕ್ಕಳು,ಇನ್ನೊಬ್ಬಳ ಮದುವೆ ಮಾಡಬೇಕು.ಗಂಡ ಸಹ 2020 ರಲ್ಲಿ ಆತ್ಮಹತ್ಯೆ ಮಾಡಿಕೊಂಡಿದ್ದರು.ಈಗ ಮಗನೂ ಆತ್ಮಹತ್ಯೆ ಮಾಡಿಕೊಂಡಿದ್ದಾನೆ ಎಂದು ನೋವು ತೋಡಿಕೊಂಡರು.
ಗಂಡ ನನ್ನ ಹೊಡೆಯುತಿದ್ದ ಹೀಗಾಗಿ ಬಿಟ್ಟು ಹೋಗಿದ್ದೆ ಕಾಮಿಡಿ ಕಿಲಾಡಿಗಳು ಕಲಾವಿದ ಮೃತ ಚಂದ್ರಶೇಖರ್ ಪತ್ನಿ ಕಮಲಾಕ್ಷಿ.

ಕಾರವಾರ :- ಕಾಮಿಡಿ ಕಿಲಾಡಿಗಳು ಖ್ಯಾತಿಯ ನಟ ಚಂದ್ರಶೇಖರ್ ಸಿದ್ದಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ.
ಚಂದ್ರಶೇಖರ್ ಸಿದ್ದಿ ಮದ್ಯಪಾನ ಮಾಡಿ ತನ್ನನ್ನು ಹೊಡೆಯುತಿದ್ದ, ನನ್ನ ಬಗ್ಗೆ ಸಂಶಯ ವ್ಯಕ್ತಪಡಿಸುತಿದ್ದ ,ಬೇರೆ ಯಾವುದೇ ತೊಂದರೆ ಇರಲಿಲ್ಲ ಎಂದು kannadavani.news ಗೆ ಕಮಲಾಕ್ಷಿ ನೋವು ತೋಡಿಕೊಂಡಿದ್ದಾರೆ.
ಇದನ್ನೂ ಓದಿ:-Yallapur:ಜಲಪಾತ ವೀಕ್ಷಣೆಗೆ ಹೋದವರು ಜಸ್ಟ್ ಮಿಸ್ ! ಮೂರು ಜನರ ರಕ್ಷಣೆ! ವಿಡಿಯೋ ನೋಡಿ
ಮೃತ ಚಂದ್ರಶೇಖರ್ ಸಿದ್ದಿ ತಾಯಿ ಲಕ್ಷ್ಮೀ ರವರು ಯಲ್ಲಾಪುರ ಠಾಣೆಯಲ್ಲಿ ಸಾವಿನ ಕುರಿತು ಸಂಶಯ ಇರುವ ಬಗ್ಗೆ ದೂರು ನೀಡಿದ್ದರು.ಇದಲ್ಲದೇ ಪತ್ನಿಯೊಂದಿಗಿನ ಮುನಿಸು ಆತ್ಮಹತ್ಯೆಗೆ ಕಾರಣ ಎಂದು ದೂರಿದ್ದರು.
ಆದರೇ ಚಂದ್ರಶೇಖರ್ ಪತ್ನಿ ಈ ಕುರಿತು ಲಕ್ಷ್ಮೀ ಸಿದ್ದಿಯವರ ಆರೋಪವನ್ನು ತಳ್ಳಿಹಾಕಿದ್ದಾರೆ. ಅವರು ನನಗೆ ಸಂಶಯದಿಂದ ನೋಡುತಿದ್ದರು, ಕುಡಿದು ಹೊಡೆಯುತಿದ್ದರಿಂದ ನಾನು ದೂರವಾಗಿದ್ದೆ. ಹೀಗಾಗಿ ನಾನು ಆರು ತಿಂಗಳ ಹಿಂದೆ ಪೊಲೀಸರಿಗೆ ದೂರು ನೀಡಿದ್ದೆ. ನಂತರ ಅವರೇ ಬಂದು ನನ್ನನ್ನು ಕರೆದೊಯ್ದರು.
ನಾವು ಚನ್ನಾಗಿಯೇ ಇದ್ದೆವು. ಭಟ್ಟರ ಮನೆಯಲ್ಲಿ ಕೂಲಿ ಕೆಲಸ ಮಾಡುತಿದ್ದೆವು. ಅವರೇ ಉಳಿದುಕೊಳ್ಳಲು ಜಾಗ ನೀಡಿದ್ದರು. ನನಗೂ ಸಿನಿಮಾದಲ್ಲಿ ನಟಿಸಿ ನಾಟಕ ಕಲಿ ,ನಿನಾಸಂ ನಲ್ಲಿ ತರಬೇತಿ ಶಿಬಿರ ವಿದೆ ಎಂದು ಹೇಳಿದ್ದರು. ಮೊನ್ನೆ ಯಾಕೋ ಮನಸ್ಸು ಸರಿಯಿಲ್ಲ,ನೆಗಟೀವ್ ಥಾಟ್ಸ್ ಬರುತ್ತಿದೆ ಎಂದು ಹೇಳಿಕೊಂಡಿದ್ದರು. ಮಗನನ್ನು ಅಂಗನವಾಡಿಯಿಂದ ಕರೆತರಲು ಹೋದವರು ಅರಣ್ಯದಲ್ಲಿ ನೇಣು ಬಿಗಿದುಕೊಂಡಿದ್ದಾರೆ ಎಂದು ಅವರು ತಿಳಿಸಿದರು.
