Uttara kannda KSRTC ಬಸ್ ಪ್ರಯಾಣಿಕರೇ ಗಮನಿಸಿ, ಮಂಗಳವಾರ Bus ವ್ಯತ್ಯಯ.
Uttarakannda news :- ಉತ್ತರ ಕನ್ನಡ ಜಿಲ್ಲೆಯಾಧ್ಯಾಂತ ಮಂಗಳವಾರ ಹಲವು ಊರುಗಳಿಗೆ ತೆರಳುವ ವಾಯುವ್ಯ ಸಾರಿಗೆಯ KSRTC ಬಸ್ ಗಳ ವ್ಯತ್ಯಯವಾಗಲಿದೆ.
ಇದನ್ನೂ ಓದಿ:-Shivamogga KSRTC ಎಲ್ಲೆಲ್ಲಿಂದ ಎಲ್ಲಿಗೆ ಎಷ್ಟು ದರ? ವಿವರ ಇಲ್ಲಿದೆ.
ಜನವರಿ 21 ರಂದು ಮಂಗಳವಾರ ಬೆಳಗಾವಿಯಲ್ಲಿ ನಡೆಯಲಿರುವ ಜೈ ಬಾಪು,ಜೈ ಭೀಮ್,ಜೈ ಸಂವಿಧಾನ ಎಂಬ ಕಾರ್ಯಕ್ರಮಕ್ಕಾಗಿ ಜನರಿಗೆ ಬೆಳಗಾವಿಗೆ ಪ್ರಯಾಣಿಸಲು ಜಿಲ್ಲೆಯ ಬಸ್ ಗಳನ್ನು ಬಳಸಿಕೊಳ್ಳಲಾಗುತ್ತಿದೆ.
ಇದನ್ನೂ ಓದಿ:-KSRTC ಬಸ್ ದರ ಹೆಚ್ಚಳ, ಉತ್ತರ ಕನ್ನಡ ಜಿಲ್ಲೆಯಿಂದ ಎಲ್ಲೆಲ್ಲಿಗೆ ಎಷ್ಟಾಗುತ್ತೆ ರೇಟ್
ಉತ್ತರಕನ್ನಡ ಜಿಲ್ಲೆಯ ಎಲ್ಲಾ ಡಿಪೋ ಗಳಿಂದ ಒಟ್ಟು 85 ksrtc ಬಸ್ ಗಳನ್ನು ಬಳಸಿಕೊಳ್ಳಲಾಗುತ್ತದೆ. ಯಾವ ಊರುಗಳಿಗೆ ಹೆಚ್ಚಿನ ಬಸ್ ಗಳಿವೆಯೋ ಆ ಊರುಗಳಿಗೆ ಬಸ್ ಗಳ ವ್ಯತ್ಯಯ ಆಗಲಿದೆ.
ಇದನ್ನೂ ಓದಿ:-Uttara kannda MP ವಿಶ್ವೇಶ್ವರ ಹೆಗಡೆ ಕಾಗೇರಿ ಮನೆಯಲ್ಲಿ ಚಿರತೆ ಪ್ರತ್ಯಕ್ಷ!
ಜಿಲ್ಲೆಯಲ್ಲಿ ಭಟ್ಕಳ, ಕುಮಟಾ, ಶಿರಸಿ,ಕಾರವಾರ ಸೇರಿದಂತೆ ಜಿಲ್ಲೆಯ ಡಿಫೋಗಳಲ್ಲಿ ಒಟ್ಟು 488 ಬಸ್ ಗಳಿದ್ದು ಇವುಗಳಲ್ಲಿ 85 ಬಸ್ ಕಾರ್ಯಕ್ರಮದ ಸಲವಾಗಿ ಬೆಳಗಾವಿಗೆ (belagavi)ಜಿಲ್ಲೆಯಿಂದ ತೆರಳಲಿದೆ.
ಹೆಚ್ಚಿನ ಸಂಖ್ಯೆಯಲ್ಲಿ ಬಸ್ ಗಳು ಬೆಳಗಾವಿಗೆ ಹೋಗುವುದರಿಂದ ಮಂಗಳವಾರ ಬಸ್ ಸಂಚಾರದಲ್ಲಿ ಕೊಂಚ ವ್ಯಾತ್ಯಾಸವಾಗುವ ಸಾದ್ಯತೆಯಿದ್ದು ಸಾರ್ವಜನಿಕರು ಸಹಕರಿಸಬೇಕೆಂದು ವಿಭಾಗೀಯ ನಿಯಂತ್ರಣಾಧಿಕಾರಿ ಶ್ರೀನಿವಾಸ ಕೆ ಎಚ್ ಮನವಿಮಾಡಿದ್ದಾರೆ.