Uttara Kannada: ಪಶ್ಚಿಮ ಘಟ್ಟ ಭಾಗದಲ್ಲಿ ಭೂ ಕುಸಿತ-ಬಂಡೆಕಲ್ಲುಗಳು ಜಾರಿ ತೋಟಕ್ಕೆ ಹಾನಿ
Uttara Kannada: ಪಶ್ಚಿಮ ಘಟ್ಟ ಭಾಗದಲ್ಲಿ ಭೂ ಕುಸಿತ-ಬಂಡೆಕಲ್ಲುಗಳು ಜಾರಿ ತೋಟಕ್ಕೆ ಹಾನಿ

ಕಾರವಾರ :-ಉತ್ತರ ಕನ್ನಡ ಜಿಲ್ಲೆಯ ಪಶ್ಚಿಮ ಘಟ್ಟ ಭಾಗದಲ್ಲಿ ಮತ್ತೆ ಭೂ ಕುಸಿತದ ( landslide) ಆತಂಕ ಸೃಷ್ಟಿಯಾಗಿದೆ. ಅಂಕೋಲ ,ಯಲ್ಲಾಪುರ ಗಡಿ ಭಾಗದ ಸುಂಕಸಾಳ (Sunkasala)ಗ್ರಾಮಪಂಚಾಯ್ತಿ ವ್ಯಾಪ್ತಿಯ ಕೊಡ್ಲಗದ್ದೆ (kodlagadde) ಗ್ರಾಮದಲ್ಲಿ ಬೃಹದಾಕಾರದ ಕಲ್ಲುಬಂಡೆ ಕುಸಿದು ತೋಟದ ಭಾಗಕ್ಕೆ ಅಪ್ಪಳಿಸಿದೆ.
ಸುಮಾರು 40 ರಿಂದ 45 ಅಡಿ ಉದ್ದದ 25 ಅಡಿ ಅಗಲದ ಕಲ್ಲುಬಂಡೆ ಸೇರಿದಂತೆ ನಾಲ್ಕಾರು ಕಲ್ಲುಬಂಡೆಗಳು ಕುಸಿದು ಬಿದ್ದಿದೆ. ಬಂಡೆ ಕುಸಿಯುವ ಸಂದರ್ಭದಲ್ಲಿ ಸುತ್ತಮುತ್ತಲ ಮೂರು ಕಿಲೋಮೀಟರ್ ದೂರದ ವರೆಗೆ ದೊಡ್ಡ ಶಬ್ದ ಕೇಳಿಬಂದಿದ್ದು ಗ್ರಾಮದ ಜನರಲ್ಲಿ ಆತಂಕ ಮೂಡಿಸಿದೆ.


ಇನ್ನು ಗುಡ್ಡ ಕುಸಿದು ಕಲ್ಲುಬಂಡೆಗಳು ಬಿದ್ದ ಕುರಿತು ಕುಮಟಾದ ಎಸಿ ಸ್ಥಳಪರಿಶೀಲನೆ ನಡೆಸಿದ್ದಾರೆ.
ಆತಂಕ ತಂದ ಕುಸಿತ !

ಇನ್ನು ಇದೇ ಭಾಗದ ಕಳೆಚೆ ಗ್ರಾಮದಲ್ಲಿ ಗುಡ್ಡ ಕುಸಿದು ನೂರಾರು ಎಕರೆ ಕೃಷಿ ಭೂಮಿ ವಸತಿ ಮನೆಗಳು ನಾಶವಾಗಿದ್ದವು, ಇದರ ಜೊತೆಗೆ ಸಾವು ನೋವು ಸಹ ಸಂಭವಿಸಿದೆ. ಜಿಲ್ಲೆಯಲ್ಲಿ 439 ಪ್ರದೇಶಗಳು ಭೂ ಕುಸಿತ ಸೂಷ್ಮ ಪ್ರದೇಶ ಎಂದು ಜಿಯಾಲಾಜಿಕಲ್ ಸರ್ವೆ ಆಪ್ ಇಂಡಿಯಾ ದವರು ವರದಿ ನೀಡಿದ್ದು ಜಿಲ್ಲೆಯ ಐದು ಸೂಕ್ಷ್ಮ ಪ್ರದೇಶಗಳಲ್ಲಿ ಯಾವಾಗ ಬೇಕಾದರೂ ಭೂ ಕುಸಿತವಾಗಬಹುದು ಎಂದು ಜಿಲ್ಲಾಡಿತಕ್ಕೆ ವರದಿ ನೀಡಿದೆ.
ಇದನ್ನೂ ಓದಿ:-Shirur| ಸಿಕ್ಕ ಮೂಳೆಗೆ ಹೆಚ್ಚಿನ ಕೆಮಿಕಲ್ ವೈದ್ಯ ಸಿಬ್ಬಂದಿ ಎಡವಟ್ಟು ಸಿಗುತ್ತಿಲ್ಲ DNA Report !
ಹೀಗಿದ್ದರೂ ಜಿಲ್ಲಾಡಳಿತ ರಾಜ್ಯ ಸರ್ಕಾರಕ್ಕೆ ಕಳುಹಿಸಿದ ಭೂಕುಸಿ ಪ್ರದೇಶದ ಪೂರಕ ರಕ್ಷಣಾ ಕಾರ್ಯಕ್ಕೆ ಹಣ ವದಗಿಸಿಲ್ಲ.
ಇನ್ನು ಮಳೆಗಾಲದಲ್ಲಿ ಅಲ್ಲದೇ ಇದೀಗ ಬಿರು ಬೇಸಿಗೆಯಲ್ಲೂ ಅಲ್ಲಲ್ಲಿ ಭೂ ಕುಸಿತವಾಗುತ್ತಿರುವುದು ಮತ್ತೆ ಆತಂಕಕ್ಕೆ ಕಾರಣವಾಗಿದೆ.