For the best experience, open
https://m.kannadavani.news
on your mobile browser.
Advertisement

Uttara kannda :ರೈಲ್ವೆ ಬಳಕೆದಾರರಿಗೆ Good News ನೀಡಿದ ಸಂಸದ ಕಾಗೇರಿ! ಏನದು? 

ಕಾರವಾರ /ಗೋವಾ:- ಕೊಂಕಣ ರೈಲ್ವೆ Konkan Railway )ಬಳಕೆದಾರರ ಸಭೆ ಯನ್ನು ಸಂಸದ ಎಂಕೆ ಪ್ರೇಮಚಂದ್ರನ್ ಅವರ ಅಧ್ಯಕ್ಷತೆಯಲ್ಲಿ KRUCC ಸದಸ್ಯರೊಂದಿಗೆ ಮತ್ತು ಕೊಂಕಣ ರೈಲ್ವೆಯ CMD ಸಂತೋಷ್ ಝಾ ಅವರೊಂದಿಗೆ ಗೋವಾದಲ್ಲಿ ನಡೆಯಿತು.
11:10 PM Mar 04, 2025 IST | ಶುಭಸಾಗರ್
uttara kannda  ರೈಲ್ವೆ ಬಳಕೆದಾರರಿಗೆ good news ನೀಡಿದ ಸಂಸದ ಕಾಗೇರಿ  ಏನದು  
Uttara kannda :ರೈಲ್ವೆ ಬಳಕೆದಾರರಿಗೆ Good News ನೀಡಿದ ಸಂಸದ ಕಾಗೇರಿ! ಏನದು? 

Uttara kannda :ರೈಲ್ವೆ ಬಳಕೆದಾರರಿಗೆ Good News ನೀಡಿದ ಸಂಸದ ಕಾಗೇರಿ! ಏನದು? 

Advertisement

ಪ್ರಕೃತಿ ಮೆಡಿಕಲ್ ,ಕಾರವಾರ.

ಕಾರವಾರ /ಗೋವಾ:-  ಕೊಂಕಣ ರೈಲ್ವೆ ( Konkan Railway )ಬಳಕೆದಾರರ ಸಭೆ ಯನ್ನು ಸಂಸದ  ಎಂಕೆ ಪ್ರೇಮಚಂದ್ರನ್ ಅವರ ಅಧ್ಯಕ್ಷತೆಯಲ್ಲಿ  KRUCC ಸದಸ್ಯರೊಂದಿಗೆ ಮತ್ತು ಕೊಂಕಣ ರೈಲ್ವೆಯ CMD ಸಂತೋಷ್ ಝಾ ಅವರೊಂದಿಗೆ ಗೋವಾದಲ್ಲಿ ನಡೆಯಿತು.

ಸಭೆಯಲ್ಲಿ ಉತ್ತರ ಕನ್ನಡ ಉಡುಪಿ, ಮಂಗಳೂರು ಜಿಲ್ಲೆಗೆ ಸಂಬಂಧಿಸಿದಂತೆ ಅನೇಕ ಬೇಡಿಕೆಗಳ ಕುರಿತು ಚರ್ಚಿಸಿ ನಿರ್ಣಯ ಕೈಗೊಳ್ಳಲಾಯಿತು.

Uttara kannda :ಕೊಂಕಣ ರೈಲ್ವೆ ಸಮಿತಿ ಸಭೆ.

 ಬೆಂಗಳೂರು - ಮುರುಡೇಶ್ವರ ರೈಲನ್ನು ವಾಸ್ಕೋವರೆಗೆ ವಿಸ್ತರಣೆ,ಕೊಂಕಣ ರೈಲ್ವೆ ಯಿಂದಾಗಿ ಭೂಸ್ವಾಧೀನದಿಂದ ನಿರಾಶ್ರಿತರಾದವರಿಗೆ ಬಾಕಿ ಉಳಿದ ಹಣ ಮತ್ತು ಉದ್ಯೋಗವನ್ನು ನಿರಾಶ್ರಿತ  ಕುಟುಂಬದವರಿಗೆ ನೀಡುವುದು,ಕಾರವಾರ ಬೆಂಗಳೂರು ಪಂಚಗಂಗಾ ಎಕ್ಸ್ಪ್ರೆಸ್ ರೈಲ್ವೆಗೆ ಹೆಚ್ಚುವರಿ ಆಗಿ 4 ಭೋಗಿಗಳನ್ನು ಕಲ್ಪಿಸಲು ಕ್ರಮ ಕೈಗೊಳ್ಳುವುದು,ಕಾರವಾರದಿಂದ ಭಟ್ಕಳ ವರೆಗೆ ರೈಲ್ವೆ ಪ್ಲಾಟ್ಫಾರ್ಮ್ ನಲ್ಲಿ ಮಳೆಗಾಲದಲ್ಲಿ ಪ್ರಯಾಣಿಕರಿಗೆ ತೀವ್ರ ತೊಂದರೆಯಾಗುತ್ತಿದ್ದು ಈ ಕುರಿತು ನಿಲ್ದಾಣದಲ್ಲಿ ಮೇಲ್ಚಾವಣಿ ನಿರ್ಮಿಸುವುದು, ಮುಖ್ಯರಸ್ತೆಯಿಂದ  ರೈಲ್ವೆ ನಿಲ್ದಾಣದ ಕೂಡು ರಸ್ತೆಯನ್ನು ದುರಸ್ತಿಗೊಳಿಸುವಂತೆ ತೀರ್ಮಾನಿಸಲಾಗಿಯಿತು.

ಇದನ್ನೂ ಓದಿ:-Uttara kannda| ಜಿಲ್ಲೆಯ ಹೋಟಲ್ ಗಳಲ್ಲೂ ಪತ್ತೆಯಾಯ್ತು ಪ್ಲಾಸ್ಟಿಕ್ ಇಡ್ಲಿ!

ಇನ್ನು ಈ ಕುರಿತು ಮಾತನಾಡಿದ ಸಂಸದ ವಿಶ್ವೇಶ್ವರ ಹೆಗಡೆ ಕಾಗೇರಿ  ಕುಮುಟಾ ಮತ್ತು ಗೋಕರ್ಣದ ರೈಲ್ವೆ ನಿಲ್ದಾಣದ ಪ್ಲಾಟ್ ಫಾರ್ಮ್ ಅನ್ನು ಮೇಲ್ದರ್ಜೆಗೆ ಏರಿಸಲು ಈಗಾಗಲೇ ಮಂಜೂರಾಗಿದ್ದು ಶೀಘ್ರದಲ್ಲೇ ಕೆಲಸ ಪ್ರಾರಂಭಿಸಲಾಗುವುದು ಎಂದರು.

ರೈಲು ಸಂಖ್ಯೆ 22 475 ಮತ್ತು 22 476 ಕೊಯಿಮುತ್ತೂರು ಹಿಸಾರ್ ಎಕ್ಸ್ಪ್ರೆಸ್ ರೈಲನ್ನು ಕುಮಟಾದಲ್ಲಿ  ನಿಲುಗಡೆ ಮಾಡಲು ಕೇಂದ್ರ ಸಚಿವರಲ್ಲಿ ಮನವಿ ಮಾಡಲಾಗಿತ್ತು ಇದಕ್ಕೆ ಪ್ರತಿಕ್ರಿಸಿದ  ಕೇಂದ್ರ ರೈಲ್ವೆ ಸಚಿವರಾದ ಅಶ್ವಿನಿ ವೈಷ್ಣವ್, ಮತ್ತು ವಿ ಸೋಮಣ್ಣ ರಾಜ್ಯ ಸಚಿವರು ತಕ್ಷಣ ಸ್ಪಂದಿಸಿ ರೈಲು ನಿಲುಗಡೆಗೆ ಆದೇಶ ಹೊರಡಿಸಿರುತ್ತಾರೆ.

ವಿ ಸೋಮಣ್ಣರವರೊಂದಿಗೆ ಚರ್ಚಿಸಿ ಯಾವ ದಿನಾಂಕದಿಂದ ರೇಲ್ವೆ ನಿಲುಗಡೆಯಾಗುವದೆಂದು ನಿರ್ಧರಿಸಲಾಗುವದು ಎಂದರು.

Advertisement
Tags :
Advertisement
Advertisement

.

tlbr_img1 ಹೋಮ್ tlbr_img2 ಟ್ರೆಂಡಿಂಗ್ tlbr_img3 ವಿಡಿಯೋ