For the best experience, open
https://m.kannadavani.news
on your mobile browser.
Advertisement

Uttara kannda :15 ಸಾವಿರ ಲಂಚ ಪಡೆದ PDO ಗೆ ನಾಲ್ಕು ವರ್ಷ ಜೈಲು ಶಿಕ್ಷೆ!

ಕಾರವಾರ :-ಭೂ ಪರಿವರ್ತನೆಯಾಗಿ ಕಟ್ಟಡ ನಿರ್ಮಾಣದ ನಂತರವೂ ಮನೆ ಸಂಖ್ಯೆ ನೀಡಲು 15 ಸಾವಿರ ರೂ ಲಂಚ ಬೇಡಿಕೆ ಇಟ್ಟಿದ್ದ ಶಿರಸಿ(sirsi) ಜಾನ್ಮನೆ ಪಿಡಿಓ ಕೃಷ್ಣಪ್ಪ ಯಲವಲಗಿ ಅವರಿಗೆ 4 ವರ್ಷ ಜೈಲು ಶಿಕ್ಷೆ ವಿಧಿಸಿ ನ್ಯಾಯಾಲಯ ಆದೇಶಿಸಿದೆ. ಜೊತೆಗೆ 5 ಸಾವಿರ ರೂ ದಂಡವನ್ನು ಪಾವತಿಸುವಂತೆ ಸೂಚಿಸಿದೆ
11:45 PM Apr 09, 2025 IST | ಶುಭಸಾಗರ್
uttara kannda  15 ಸಾವಿರ ಲಂಚ ಪಡೆದ pdo ಗೆ ನಾಲ್ಕು ವರ್ಷ ಜೈಲು ಶಿಕ್ಷೆ

Uttara kannda :15 ಸಾವಿರ ಲಂಚ ಪಡೆದ PDO ಗೆ ನಾಲ್ಕು ವರ್ಷ ಜೈಲು ಶಿಕ್ಷೆ!

Advertisement

ಕಾರವಾರ :-ಭೂ ಪರಿವರ್ತನೆಯಾಗಿ ಕಟ್ಟಡ ನಿರ್ಮಾಣದ ನಂತರವೂ ಮನೆ ಸಂಖ್ಯೆ ನೀಡಲು 15 ಸಾವಿರ ರೂ ಲಂಚ ಬೇಡಿಕೆ ಇಟ್ಟಿದ್ದ  ಶಿರಸಿ(sirsi) ಜಾನ್ಮನೆ ಪಿಡಿಓ ಕೃಷ್ಣಪ್ಪ ಯಲವಲಗಿ ಅವರಿಗೆ 4 ವರ್ಷ ಜೈಲು ಶಿಕ್ಷೆ ವಿಧಿಸಿ ನ್ಯಾಯಾಲಯ ಆದೇಶಿಸಿದೆ. ಜೊತೆಗೆ 5 ಸಾವಿರ ರೂ ದಂಡವನ್ನು ಪಾವತಿಸುವಂತೆ ಸೂಚಿಸಿದೆ.

ಪ್ರಕೃತಿ ಮೆಡಿಕಲ್ ,ಕಾರವಾರ.

ಕೃಷ್ಣಪ್ಪ ಯಲವಲಗಿ ಮುಂಡಗೋಡು ತಾಲೂಕಿನವರು. 2010ರಲ್ಲಿ ಅವರು ಶಿರಸಿ ಜಾನ್ಮನೆ ಗ್ರಾ ಪಂ ಪಿಡಿಓ ಆಗಿದ್ದರು. ಬೆಂಗಳೂರಿನಲ್ಲಿ ವಾಸವಾಗಿರುವ ಸುಕ್ರಿಮನೆಯ ಸುಧೀಂದ್ರ ಹೆಗಡೆ ಅವರಿಂದ ಹಣ ಪಡೆಯುವಾಗ ಲೋಕಾಯುಕ್ತ ಪೊಲೀಸರಿಗೆ ಸಿಕ್ಕಿಬಿದ್ದಿದ್ದರು.

ಇದನ್ನೂ ಓದಿ:-Karwar :ಕಾಳಿ ಸೇತುವೆಯ ಮೇಲೆ ಬಿದ್ದ ಹಳೆಸೇತುವೆ ತುಂಡು- ಅಲ್ಪದರಲ್ಲೇ ತಪ್ಪಿದ ಭಾರಿ ಅನಾಹುತ

ಸುಧೀಂದ್ರ ಹೆಗಡೆ ಅವರು 14 ಗುಂಟೆ ಜಾಗ ಖರೀದಿಸಿ ಅದನ್ನು ಎನ್‌ ಮಾಡಿದ್ದರು. ಅದಾದ ನಂತರ ಅಲ್ಲಿ ಮನೆ ಕಟ್ಟಿದ್ದರು. ಆದರೆ, ಮನೆ ಸಂಖ್ಯೆಗೆ ಸಲ್ಲಿಸಿದ ಅರ್ಜಿಯನ್ನು ಪಿಡಿಓ ಅನಗತ್ಯವಾಗ ತಿರಸ್ಕರಿಸಿದ್ದರು.

ಇದನ್ನೂ ಓದಿ:-Sirsi  ರೇಷನ್ ಅಕ್ಕಿಯಲ್ಲಿ ಕಲ್ಲು ,ಮಣ್ಣು.- ಇದನ್ನು ತಿಂದವನನ್ನು ದೇವರೇ ಕಾಪಾಡಬೇಕು!

ಸರ್ಕಾರದ ನಿಗದಿ ಶುಲ್ಕ ಬಿಟ್ಟು 15 ಸಾವಿರ ಕೊಟ್ಟರೆ ಕೆಲಸ ಮಾಡಿಕೊಡುವೆ ಎಂದು ಕೃಷ್ಣಪ್ಪ ಯಲವಲಗಿ ಕೈ ಒಡ್ಡಿದ್ದರು. ಜೊತೆಗೆ `ಮೇಲಧಿಕಾರಿಗಳಿಗೂ ಹಣ ಕೊಡಬೇಕು' ಎಂದಿದ್ದರು. ಈ ಲಂಚದ ಹಣ ಸ್ವೀಕರಿಸುವ ವೇಳೆ ಲೋಕಾಯುಕ್ತರು ದಾಳಿ ನಡೆಸಿ, ಕೃಷ್ಣಪ್ಪ ಅವರನ್ನು ಬಂಧಿಸಿದ್ದರು. ಪ್ರಕರಣ ವಿಚಾರಣೆ ನಡೆಸಿದ ಜಿಲ್ಲಾ ಪ್ರಧಾನ ಮತ್ತು ಸತ್ರ ನ್ಯಾಯಾಧೀಶ ಡಿ ಎಸ್ ವಿಜಯಕುಮಾರ ಅವರು ಶಿಕ್ಷೆ ಪ್ರಕಟಿಸಿದ್ದಾರೆ.

Advertisement
Tags :
Advertisement
Advertisement

.

tlbr_img1 ಹೋಮ್ tlbr_img2 ಟ್ರೆಂಡಿಂಗ್ tlbr_img3 ವಿಡಿಯೋ