Uttara kannda |ಏರಿದ ತಾಪಮಾನ -ಉಕ್ಕಿದ ಕಾಳಿ ನದಿ
Uttara kannda |ಏರಿದ ತಾಪಮಾನ -ಉಕ್ಕಿದ ಕಾಳಿ ನದಿ

ಕಾರವಾರ :- ರಾಜ್ಯದ ಹಲವು ಜಿಲ್ಲೆಗಳಲ್ಲಿ ತಾಪಮಾನ ಏರಿಕೆ ಕಾಣುತ್ತಿದೆ. ಇದರ ಬೆನ್ನಲ್ಲೇ ಕರಾವಳಿ ಭಾಗದಲ್ಲಿ ತಾಪಮಾನ ದಾಖಲೆ ಮಟ್ಟ ಏರಿಕೆ ಕಾಣುತಿದ್ದು ಬಿಸಿ ಗಾಳಿ ಬೀಸತೊಡಗಿದೆ.
ಈಗಾಗಲೇ ಹವಾಮಾನ ( weather) ಇಲಾಖೆ ಕರಾವಳಿ ಭಾಗದ ಉತ್ತರ ಕನ್ನಡ ಜಿಲ್ಲೆಯಲ್ಲಿ ತಾಪಮಾನ ಹೆಚ್ಚಳವಾಗುವ ಮಾಹಿತಿ ನೀಡಿದ್ದು , ಜಿಲ್ಲಾ ವಿಪತ್ತು ನಿರ್ವಹಣಾ ಪ್ರಾಧಿಕಾರ ಸಹ ಇನ್ನೆರೆಡು ದಿನ ತಾಪಮಾನ ಏರಿಕೆ ಜೊತೆ ಬಿಸಿ ಗಾಳಿಯ ಎಚ್ಚರಿಗೆ ನೀಡಿದೆ.
ಇದೀಗ ಸೂರ್ಯನ ಪ್ರಕರತೆಯಿಂದ ಸಮುದ್ರದಲ್ಲಿ ಭರತ ಸಂದರ್ಭದಲ್ಲಿ ಸಮುದ್ರದಿಂದ ದಡಭಾಗಕ್ಕೆ ಬರುವ ನೀರಿನ ಪ್ರಮಾಣ ಹೆಚ್ಚಾಗಿದೆ. ಇದರಿಂದ ಕಾರವಾರ ತಾಲೂಕಿನಲ್ಲಿ ಹರಿಯುವ ಕಾಳಿ ನದಿ(Kali river) ನೀರಿನ ಮಟ್ಟ ಸಹ ಹೆಚ್ಚಾಗಿದ್ದು ಕಾಳಿ ನದಿಯು ಸಮುದ್ರ ಸೇರುವ ಭಾಗದಲ್ಲಿ ನದಿ ನೀರು ಉಕ್ಕಿ ಗ್ರಾಮಗಳಿಗೆ ನುಗ್ಗಿವೆ.

ಕಾರವಾರ ತಾಲೂಕಿನ ಕಿನ್ನರ ಗ್ರಾಮದಲ್ಲಿ ನದಿಯ ನೀರು ಉಕ್ಕಿ ಗ್ರಾಮಕ್ಕೆ ನುಗ್ಗಿದ್ದು ಗ್ರಾಮದ ಕೃಷಿ ಜಮೀನು ,ಬಾವಿಗಳು ಉಪ್ಪು ನೀರು ಮಿಶ್ರಿತವಾಗಿ ಕುಡಿಯುವ ನೀರು ಸಿಗದಂತಾಗಿದೆ.
ಇಂದು ಕಿನ್ನರ ಗ್ರಾಮಕ್ಕೆ ನುಗ್ಗಿದ ನೀರಿನಿಂದ ಕೃಷಿ ಜಮೀನು ಸಂಪೂರ್ಣ ಉಪ್ಪು ನೀರು ಮಿಶ್ರಿತವಾಗಿದೆ. ಪ್ರತಿ ದಿನ ಸಮುದ್ರದ ಬರತದ ಸಂದರ್ಭದಲ್ಲಿ ಕಾಳಿ ನದಿ ನೀರು ಉಕ್ಕುತ್ತದೆ.ಆದರೇ ಈ ಬಾರಿ ಬಿಸಿಲ ತಾಪ ಹೆಚ್ಚಾಗಿರುವುದರಿಂದ ನದಿ ನೀರು ಗ್ರಾಮಗಳಿಗೂ ನುಗ್ಗಿದ್ದು ಸಮಸ್ಯೆ ತಂದೊಡ್ಡಿದೆ.