Sirsi:ಶಿರಸಿಯಲ್ಲಿ ಸರಣಿ ಕಳ್ಳತನ ನಗನಾಣ್ಯ ಲೂಟಿ
ಶಿರಸಿಯಲ್ಲಿ ಸರಣಿ ಕಳ್ಳತನ ನಗನಾಣ್ಯ ಲೂಟಿ
ಕಾರವಾರ:- ಉತ್ತರ ಕನ್ನಡ ಜಿಲ್ಲೆಯ ಶಿರಸಿ ನಗರದ ವಿವಿಧೆಡೆ ಸೋಮವಾರ ಸರಣಿ ಕಳ್ಳತನ ನಡೆದಿದ್ದು, ಎರಡು ಕಡೆ ಪ್ರತ್ಯೇಕವಾಗಿ ಕನ್ನ ಹಾಕಿದ ಕಳ್ಳರು ಲಕ್ಷಾಂತರ ರೂ ಬಂಗಾರ, ನಗದು ಕದ್ದೊಯ್ದಿದ್ದಾರೆ.
ಶಿರಸಿಯ ರಾಜೀವ ನಗರದ ಶಮಿವುಲ್ಲಾ ಅಬ್ದುಲ್ ಸತ್ತಾರ್ ಮಿಸ್ಗಾರ್ ಮನೆಯಲ್ಲಿ ಕಳ್ಳತನವಾಗಿದ್ದು, 50 ಸಾವಿರ ರೂ ನಗರದು ಮತ್ತು 15 ಗ್ರಾಂ ಬಂಗಾರ ದೋಚಲಾಗಿದೆ. ಅದೇ ರೀತಿಅಯ್ಯಪ್ಪ ನಗರ ಎರಡನೇ ಕ್ರಾಸಿನ ಮಂಜುನಾಥ್ ವಾಸುದೇವ ಶೆಟ್ ಮನೆಯಲ್ಲಿ 10,000 ರೂ ನಗದು ಹಾಗೂ ನಾಲ್ಕು ಜೊತೆ ಕಿವಿಯೋಲೆ( 40g), 8kg ಬೆಳ್ಳಿ ಮತ್ತು ಒಂದು ಸೋನಾಟಾ ವಾಚ್ ಕಳ್ಳತನ ಮಾಡಲಾಗಿದೆ.
ಇದನ್ನೂ ಓದಿ:-Sirsi: ಅನಂತಕುಮಾರ್ ಹೆಗಡೆಗೆ ಹತ್ತಕ್ಕೂ ಹೆಚ್ಚು ಜೀವ ಬೆದರಿಕೆ? ಪ್ರಗತಿ ಕಾಣದ ತನಿಖೆ ಸುತ್ತಾ!
ಇದಲ್ಲದೇ ವಾಸುದೇವ ಶೇಟ್ ಮನೆಯ ಪಕ್ಕದಲ್ಲಿ ಬಾಡಿಗೆಗೆ ವಾಸವಿದ್ದವರ ಮನೆಯಲ್ಲೂ ಸಣ್ಣ ಪ್ರಮಾಣದಲ್ಲಿ ಕಳ್ಳತನವಾಗಿದ್ದು, ಆದರೆ ಎರಡು ಪ್ರಮುಖ ಕಳ್ಳತನ ಕುರಿತು ಮಾತ್ರ ಪ್ರಕರಣ ದಾಖಲಾಗಿದೆ. ಮಾರುಕಟ್ಟೆ ಠಾಣೆ ಪಿಎಸ್ಐ ರತ್ನ ಕುರಿ ದೂರು ದಾಖಲಿಸಿಕೊಂಡು ತನಿಖೆ ಕೈಗೊಂಡಿದ್ದಾರೆ.
ಇನ್ನು ತನಿಖೆಯ ಭಾಗವಾಗಿ ಎರಡು ಕಡೆ ಶ್ವಾನ ದಳ ಹಾಗೂ ಬೆರಳಚ್ಚು ತಜ್ಞರ ತಂಡ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಪಿಎಸ್ಐ ರಾಜಕುಮಾರ್ ಉಕ್ಕಲಿ ಸಹ ತಮ್ಮ ತನಿಖಾ ತಂಡದೊಂದಿಗೆ ಸ್ಥಳಕ್ಕೆ ಭೇಟಿ ನೀಡಿದ್ದು, ತನಿಖೆ ಮುಂದುವರೆದಿದೆ.