Sirsi: ಅಕ್ರಮ ಜಾನುವಾರು ಸಾಗಾಟ:ಇಬ್ಬರ ಬಂಧನ
ಅಕ್ರಮ ಜಾನುವಾರು ಸಾಗಾಟ:ಇಬ್ಬರ ಬಂಧನ
Sirsi:-ಯಾವುದೇ ದಾಖಲೆಗಳನ್ನು ಹೊಂದಿಲ್ಲದೆ ಅಕ್ರಮವಾಗಿ ಜಾನುವಾರು ಸಾಗಾಟ ಮಾಡುತ್ತಿದ್ದ ಇಬ್ಬರನ್ನು ಶಿರಸಿ (sirsi)ನಗರ ಪೊಲೀಸರು ಬಂಧಿಸಿದ ಘಟನೆ ಭಾನುವಾರ ನಡೆದಿದೆ.

ಬಂಧಿತರು ಹಾವೇರಿ ಮೂಲದ ಬೀರಪ್ಪ ಹಾಗೂ ಕೊಟ್ರೇಶ ಹೊಳಲು ಎಂದಾಗಿದ್ದು ಇಬ್ಬರು ಸೇರಿಕೊಂಡು ಕೆಎ 27,ಸಿ-6923 ಮಹಿಂದ್ರಾ ಬುಲೆರೊ ಪಿಕಪ್ ವಾಹನದಲ್ಲಿ ಒಂದು ಎಮ್ಮೆ,ಒಂದು ಕೋಣದ ಕರು, ಮತ್ತು ಒಂದು ಹೋರಿ ಕರು ಒಟ್ಟು ಮೂರು ಜಾನುವಾರುಗಳನ್ನು ವಧೆ ಮಾಡುವ ಉದ್ದೇಶದಿಂದ ಅಕ್ರಮವಾಗಿ ಸಾಗಾಟ ಮಾಡಿಕೊಂಡು ಹಾವೇರಿ ಕಡೆಗೆ ತೆರಳುತ್ತಿರುವಾಗ ಶಿರಸಿಯ ನಿಲೇಕೆಣಿ ಹತ್ತಿರ ಶಿರಸಿ ನಗರ ಠಾಣೆ ಪಿಎಸ್ಐ ನಾಗಪ್ಪ, ಬಿ ರವರ ನೇತೃತ್ವದ ಎಎಸ್ಐ. ನಾರಾಯಣರಾಥೋಡ,ಸಿಬ್ಬಂದಿಗಳಾದ ಹನುಮಂತ ಕಬಾಡಿ,ಅರುಣ ಲಮಾಣಿ,ಸದ್ದಾಂ ಹುಸೇನ್ ರವರನ್ನೊಳಗೊಂಡ ತಂಡದವರು ಕಾರ್ಯಾಚರಣೆ ನಡೆಸಿ ಆರೋಪಿತರನ್ನು ವಶಕ್ಕೆ ಪಡೆದಿದ್ದಾರೆ.
ಇದನ್ನೂ ಓದಿ:-Sirsi :ಶಿರಸಿ ಸ್ಥಳೀಯ ಪತ್ರಿಕೆಯ ವರದಿಗಾರನ ಬೂಟು ಬಿಚ್ಚಿಸಿದ ಎಸ್.ಪಿ ಎಂ ನಾರಾಯಣ್ ! ನೀತಿ ಪಾಠ? ಏನದು?
ಇವರಿಂದ ಕೃತ್ಯಕ್ಕೆ ಬಳಸಿದ ಅಂದಾಜು 4 ಲಕ್ಷ ರೂ ಮೌಲ್ಯದ ಬುಲೆರೊ ಮಹಿಂದ್ರಾ ವಾಹನ ಜಪ್ತಿಪಡಿಸಿಕೊಂಡಿರುತ್ತಾರೆ, ಹಾಗೂ ಒಟ್ಟು ಅಂದಾಜು 31,000/- ರೂ ಮೌಲ್ಯ ಹೊಂದಿದ್ದ ಮೂರು ಜಾನುವಾರುಗಳನ್ನು ರಕ್ಷಿಸಿದ್ದಾರೆ.