Sirsi ಲೋಕಾಯುಕ್ತ ದಾಳಿ - ಲಂಚ ಪಡೆದ APP ವಶಕ್ಕೆ
Sirsi ಲೋಕಾಯುಕ್ತ ದಾಳಿ - ಲಂಚ ಪಡೆದ APP ವಶಕ್ಕೆ

Sirsi :- ವಶಪಡಿಸಿಕೊಂಡ ವಸ್ತುಗಳನ್ನು ಕೋರ್ಟ ನಿಂದ ಬಿಡಿಸಿಕೊಳ್ಳಲು ದೂರು ದಾರನಿಂದ ಆರು ಸಾವಿರ ಲಂಚ ಕೇಳಿದ ಅಸಿಸ್ಟೆಂಟ್ ಪಬ್ಲಿಕ್ ಪ್ರಾಸಿಕ್ಯೂಟರ್ ನನ್ನು ಲೋಕಾಯುಕ್ತ ಪೊಲೀಸರು ( Lokayuktha police) ವಶಕ್ಕೆ ಪಡೆದ ಘಟನೆ ಉತ್ತರ ಕನ್ನಡ ಜಿಲ್ಲೆಯ ಶಿರಸಿಯಲ್ಲಿ (sirsi) ನಡೆದಿದೆ.
ಪ್ರಕಾಶ್ ಲಮಾಣಿ ಲೋಕಾಯುಕ್ತ ಬಲೆಗೆ ಬಿದ್ದ ಎಪಿಪಿ ಯಾಗಿದ್ದು ಪವನ್ ಕುಮಾರ್ ಎಂಬುವವರು ತಮ್ಮ ಮನೆಯಲ್ಲಿ ಆದ ಕಳ್ಳತನದಲ್ಲಿ ವಶಪಡಿಸಿಕೊಂಡಿದ್ದ ವಸ್ತುಗಳು ಹಾಗೂ ಹಣವನ್ನು ಪಡೆಯುವ ಸಲವಾಗಿ ಎಪಿಪಿ 6 ಸಾವಿರ ಲಂಚ ಕೇಳಿದ್ದರು.
ಇದನ್ನೂ ಓದಿ:-Sirsi ಮಗಳ ಮದುವೆಗೆ ವಿರೋಧ ತಂದೆಯಿಂದಲೇ ಮಗಳು ಅಳಿಯನಿಗೆ ಚಾಕು ಇರಿತ
ಈ ಕುರಿತು ಪವನ್ ಕುಮಾರ್ ಲೋಕಾಯುಕ್ತಕ್ಕೆ ದೂರು ನೀಡಿದ್ದು ಲೋಕಾಯುಕ್ತ ಇನ್ಸಪೆಕ್ಟರ್ ವಿನಾಯಕ ಬಿಲ್ಲವ ಹಾಗೂ ಸಿಬ್ಬಂದಿಗಳಿಂದ ದಾಳಿ ನಡೆಸಿ ಹಣಪಡೆಯುವಾಗ ವಶಕ್ಕೆ ಪಡೆದಿದ್ದಾರೆ.
ಇದನ್ನೂ ಓದಿ:-Sirsi ಹತ್ತು ವರ್ಷದ ಪ್ರೀತಿಗೆ ಕೈಕೊಟ್ಟ ಯುವತಿ- ಮದುವೆಯಾದ ಹುಡಗನನ್ನು ಬಸ್ ನಲ್ಲಿಯೇ ಇರಿದು ಕೊಂದ ಪಾಗಲ್ ಪ್ರೇಮಿ
ಘಟನೆ ಸಂಬಂಧ ಕಾರವಾರ ಲೋಕಾಯುಕ್ತ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು ತನಿಖೆ ನಡೆಯುತ್ತಿದ್ದು ಆರೋಪಿ ವಶಕ್ಕೆ ಪಡೆಯಲಾಗಿದೆ.