ಪ್ರಮುಖ ಸುದ್ದಿಮುಖಪುಟLocal storyರಾಜ್ಯರಾಷ್ಟ್ರೀಯಅಂತರರಾಷ್ಟ್ರೀಯCrime newsಮನೋರಂಜನೆ
Advertisement

Uttara kannda :ಹೊಟ್ಟೆ ನೋವು ಎಂದು ಆಸ್ಪತ್ರೆಗೆ ಬಂದ ವಿದ್ಯಾರ್ಥಿನಿ ಹೆಣ್ಣು ಮಗುವಿಗೆ ಜನ್ಮ!

ಕಾರವಾರ:-ಹೊಟ್ಟೆ ನೋವು ಎಂದು ಆಸ್ಪತ್ರೆಗೆ ದಾಖಲಾದ ಅಪ್ರಾಪ್ತೆ ವಿದ್ಯಾರ್ಥಿನಿಯೊಬ್ಬಳು ಹೆಣ್ಣು ಮಗುವಿಗೆ ಜನ್ಮ ನೀಡಿದ ಘಟನೆ ಉತ್ತರ ಕನ್ನಡ ಜಿಲ್ಲೆಯ ಮುಂಡಗೋಡಿನಲ್ಲಿ (Mundgod) ನಡೆದಿದೆ.
10:40 PM Mar 05, 2025 IST | ಶುಭಸಾಗರ್

Uttara kannda :ಹೊಟ್ಟೆ ನೋವು ಎಂದು ಆಸ್ಪತ್ರೆಗೆ ಬಂದ ವಿದ್ಯಾರ್ಥಿನಿ ಹೆಣ್ಣು ಮಗುವಿಗೆ ಜನ್ಮ!

Advertisement

ಪ್ರಕೃತಿ ಮೆಡಿಕಲ್ ,ಕಾರವಾರ.

ಕಾರವಾರ:-ಹೊಟ್ಟೆ ನೋವು ಎಂದು ಆಸ್ಪತ್ರೆಗೆ ದಾಖಲಾದ ಅಪ್ರಾಪ್ತೆ ವಿದ್ಯಾರ್ಥಿನಿಯೊಬ್ಬಳು ಹೆಣ್ಣು ಮಗುವಿಗೆ ಜನ್ಮ ನೀಡಿದ ಘಟನೆ ಉತ್ತರ ಕನ್ನಡ ಜಿಲ್ಲೆಯ ಮುಂಡಗೋಡಿನಲ್ಲಿ (Mundgod) ನಡೆದಿದೆ.

ಅಪ್ರಾಪ್ತೆಯನ್ನು ಗರ್ಭವತಿಯನ್ನಾಗಿಸಿದ ಯುವಕನನ್ನು ಪೋಕ್ಸೋ ಕಾಯ್ದೆಯಡಿ ಮುಂಡಗೋಡು ಪೊಲೀಸರು ಬಂಧಿಸಿದ್ದಾರೆ.ಪ್ರಕರಣ ಸಂಬಂಧಿಸಿ ಮುಂಡಗೋಡದ ಗಿರೀಶ್ ದುರ್ಗಪ್ಪ ಭೋವಿ (20) ಬಂಧಿತ ಆರೋಪಿಯಾಗಿದ್ದಾನೆ.

ಯಲ್ಲಾಪುರ ಮೂಲದ ವಿದ್ಯಾರ್ಥಿನಿ ಮುಂಡಗೋಡಿನ ತಮ್ಮ ಸಂಬಂಧಿಕರ ಮನೆಗೆ ಬಂದವೇಳೆ ಗಿರೀಶ್ ಆಕೆಯ

Advertisement

ಮೇಲೆ ನಾಲ್ಕೈದುಬಾರಿ ಅತ್ಯಾಚಾರ ಎಸಗಿದ್ದು ಯಾರಿಗಾದರೂ ವಿಷಯ ಹೇಳಿದಲ್ಲಿ ಜೀವಸಹಿತ ಬಿಡುವುದಿಲ್ಲ ಎಂದು ಜೀವ ಬೆದರಿಕೆ ಹಾಕಿದ್ದನು.

ಇದನ್ನೂ ಓದಿ:-Mundgodu: ಕಚೇರಿಯಲ್ಲೇ ಹೊಡೆದಾಡಿಕೊಂಡ ಉಪತಹಶಿಲ್ದಾರ್ ,ಕಂದಾಯ ಅಧಿಕಾರಿ

ಹೊಟ್ಟೆ ನೋವಿನಿಂದ ಬಳಲುತಿದ್ದ ವಿದ್ಯಾರ್ಥಿನಿಯನ್ನು ಆಸ್ಪತ್ರೆಗೆ ಸೇರಿಸಿದಾಗ ಆಕೆ ಗರ್ಭವತಿಯಾಗಿರುವುದು ಬೆಳಕಿಗೆ ಬಂದಿದ್ದು ಅಪ್ರಾಪೆಗೆ ಹೆರಿಗೆ ಮಾಡಿಸಿದ ವೈದ್ಯರು ಪೊಲೀಸರಿಗೆ ಮಾಹಿತಿ  ನೀಡಿದ್ದರು. ಹೆರಿಗೆ ವೇಳೆ ಹೆಣ್ಣುಮಗುವು ಜನಿಸಿದ್ದು ಮಗು ತೀವ್ರ ಉಸಿರಾಟದ ಸಮಸ್ಯೆ ಎದುರಿಸುತಿದ್ದರಿಂದ ತಾಯಿ ಮಗುವನ್ನು ಕಾರವಾರದ ಸರ್ಕಾರಿ ಆಸ್ಪತ್ರೆಗೆ ಹೆಚ್ಚಿನ ಚಿಕಿತ್ಸೆಗಾಗಿ ಕಳುಹಿಸಿಕೊಡಲಾಗಿದೆ.

 

Advertisement
Tags :
BreakingNewsKarnatakaNewsMotherhoodNewbornStudentBirthsurpriseBirthUnexpectedDeliveryUttara kannda
Advertisement
Next Article
Advertisement