ಪ್ರಮುಖ ಸುದ್ದಿಮುಖಪುಟLocal storyರಾಜ್ಯರಾಷ್ಟ್ರೀಯಅಂತರರಾಷ್ಟ್ರೀಯCrime newsಮನೋರಂಜನೆ
Advertisement

Uttara kannda :ಚತುಷ್ಪಥ ಹೆದ್ದಾರಿ ಸವಾರಿಗೆ ಏ.1 ರಿಂದ ಟೋಲ್ ದರ ಹೆಚ್ಚಳ -ಯಾವ ವಾಹನಕ್ಕೆ ಎಷ್ಟು ದರ ವಿವರ ನೋಡಿ

ಕಾರವಾರ: ಕರಾವಳಿ ಭಾಗದಲ್ಲಿ ಹಾದುಹೋಗಿರುವ ಚತುಷ್ಪಥ ರಾಷ್ಟ್ರೀಯ ಹೆದ್ದಾರಿ-66ರಲ್ಲಿ ಸಂಚರಿಸುವ ವಾಹನಗಳು ಏ.1 ರಿಂದ ಟೋಲ್ (toll)ನಲ್ಲಿ ಬಳಕೆದಾರರ ಶುಲ್ಕವನ್ನು ಹೆಚ್ಚಿಸಲಾಗಿದ್ದು ಯುಗಾದಿಗೆ ವಾಹನ ಸವಾರರಿಗೆ ಐ.ಆರ್. ಬಿ ಕಂಪನಿ ದರದ ಬಿಸಿ ನೀಡಿದೆ.
01:01 PM Mar 30, 2025 IST | ಶುಭಸಾಗರ್

Uttara kannda :ಚತುಷ್ಪಥ ಹೆದ್ದಾರಿ ಸವಾರಿಗೆ ಏ.1 ರಿಂದ ಟೋಲ್ ದರ ಹೆಚ್ಚಳ -ಯಾವ ವಾಹನಕ್ಕೆ ಎಷ್ಟು ದರ ವಿವರ ನೋಡಿ

Advertisement

ಕಾರವಾರ: ಕರಾವಳಿ ಭಾಗದಲ್ಲಿ ಹಾದುಹೋಗಿರುವ ಚತುಷ್ಪಥ ರಾಷ್ಟ್ರೀಯ ಹೆದ್ದಾರಿ-66ರಲ್ಲಿ ಸಂಚರಿಸುವ ವಾಹನಗಳು ಏ.1 ರಿಂದ ಟೋಲ್ (toll)ನಲ್ಲಿ ಬಳಕೆದಾರರ ಶುಲ್ಕವನ್ನು ಹೆಚ್ಚಿಸಲಾಗಿದ್ದು ಯುಗಾದಿಗೆ ವಾಹನ ಸವಾರರಿಗೆ ಐ.ಆರ್. ಬಿ ಕಂಪನಿ ದರದ ಬಿಸಿ ನೀಡಿದೆ.

ಪ್ರಕೃತಿ ಮೆಡಿಕಲ್ ,ಕಾರವಾರ.

ಇದಲ್ಲದೇ ಫಾಸ್ಟ್‌ಟ್ಯಾಗ್ ಹೊಂದಿಲ್ಲದ ವಾಹನಗಳು ಪ್ಲಾಜಾದ ಮಾರ್ಗದಲ್ಲಿ ಬಂದರೆ ದುಪ್ಪಟ್ಟು ದಂಡ ವಿಧಿಸುವುದಾಗಿ ಎಚ್ಚರಿಸಲಾಗಿದೆ.

ಇದನ್ನೂ ಓದಿ:-Uttara kannda :ಹೊಟ್ಟೆ ನೋವು ಎಂದು ಆಸ್ಪತ್ರೆಗೆ ಬಂದ ವಿದ್ಯಾರ್ಥಿನಿ ಹೆಣ್ಣು ಮಗುವಿಗೆ ಜನ್ಮ!

Advertisement

ಪ್ರತಿ ವರ್ಷವೂ ಆರ್ಥಿಕ ವರ್ಷದ ಆರಂಭದಲ್ಲಿ ಹೆದ್ದಾರಿಯ ಬಳಕೆದಾರರ ಶುಲ್ಕ ಪರಿಷ್ಕರಣೆ ಮಾಡಲಾಗುತ್ತದೆ. ಈ ಬಾರಿ ಸಹ ಟೋಲ್ ದರ ಹೆಚ್ಚಳ ಮಾಡಲಾಗಿದ್ದು  ಲಘು ವಾಹನಗಳ ಟೋಲ್‌ ದರವನ್ನು ಸರಾಸರಿ 5ರೂ ರಷ್ಟು, ಬಸ್, ಟ್ರಕ್ ಸೇರಿದಂತೆ 2 ಆ್ಯಕ್ಸೆಲ್ ವಾಹನಗಳ ಟೋಲ್ ದರವನ್ನು 10ರೊ ರಿಂದ ₹

15ರೂ, ಭಾರಿ ಗಾತ್ರದ ವಾಹನಗಳ ಟೋಲ್ ದರವನ್ನು 20ರೂ ರಿಂದ 25ರೂ ರಷ್ಟು ದರ ಹೆಚ್ಚಳ ಮಾಡಲಾಗಿದೆ.

ಉತ್ತರ ಕನ್ನಡ ಜಿಲ್ಲೆಯ ಕರಾವಳಿ ಭಾಗದ ಚತುಷ್ಪಥ ಹೆದ್ದಾರಿ-66ರಲ್ಲಿ ಮೂರು ಟೋಲ್ ಪ್ಲಾಜಾಗಳಿವೆ.

 ಅಂಕೋಲಾ(Ankola) ತಾಲ್ಲೂಕಿನ ಬೇಲೆಕೇರಿ ಮತ್ತು ಕುಮಟಾ ತಾಲ್ಲೂಕಿನ ಹೊಳೆಗದ್ದೆ ಪ್ಲಾಜಾ ಜಿಲ್ಲೆಯ ವ್ಯಾಪ್ತಿಯಲ್ಲಿವೆ. ಉಡುಪಿ ಜಿಲ್ಲೆಯ ಶಿರೂರಿನಲ್ಲಿ ಇನ್ನೊಂದು ಟೋಲ್ ಪ್ಲಾಜಾ ನಿರ್ಮಿಸಲಾಗಿದೆ. ಈ ಮೂರು ಪ್ಲಾಜಾಗಳಲ್ಲಿಯೂ ಪರಿಷ್ಕೃತ ಟೋಲ್‌ ಸಂಗ್ರಹ ಏ.1 ರಿಂದ ಆರಂಭಗೊಳ್ಳಲಿದೆ ಎಂದು ಹೆದ್ದಾರಿ ನಿರ್ಮಾಣ ಮತ್ತು ನಿರ್ವಹಣೆಯ ಗುತ್ತಿಗೆ ಪಡೆದಿರುವ ಐ.ಆರ್‌.ಬಿ ಇನ್‌ಫ್ರಾಸ್ಟ್ರಕ್ಟರ್ ಕಂಪನಿ ತಿಳಿಸಿದೆ.

ಪರಿಷ್ಕೃತ ದರವು ಫಾಸ್ಟ್‌ಟ್ಯಾಗ್ ಹೊಂದಿರುವ ವಾಹನಗಳಿಗೆ ಮಾತ್ರ ಅನ್ವಯ. ಫಾಸ್ಟ್‌ಟ್ಯಾಗ್ ಇಲ್ಲದೆ ಪ್ಲಾಜಾದ ಮಾರ್ಗದಲ್ಲಿ ಬಂದು ನಿಲ್ಲುವ ವಾಹನಕ್ಕೆ ಆ ವಾಹನದ ಮಿತಿಗೆ ಇರುವ ಶುಲ್ಕದ ಎರಡು ಪಟ್ಟು ಶುಲ್ಕ ವಿಧಿಸುವುದಾಗಿ ರಾಷ್ಟ್ರೀಯ ಹೆದ್ದಾರಿ 66 ರ ನಿರ್ವಹಣೆ ಹೊತ್ತಿರುವ IRB ಕಂಪನಿ ತಿಳಿಸಿದೆ.

ಪರಿಷ್ಕೃತ ದರಪಟ್ಟಿ ಈ ಕೆಳಗಿನಂತಿದೆ.

ರಾಷ್ಟ್ರೀಯ ಹೆದ್ದಾರಿ -66 ರ ಟೋಲ್ ದರ ಪರಿಷ್ಕೃತ ಪಟ್ಟಿಯ ವಿವರ
Advertisement
Tags :
HighwayKarnatakaRoadTransportTollHike FourLaneRoadTollIncreaseTrafficUpdateUttarakannada
Advertisement
Next Article
Advertisement