Karwar ಪ್ರವಾಸೋಧ್ಯಮ ಇಲಾಖೆ ಕಚೇರಿಯಲ್ಲಿ ರಹಸ್ಯ ಬೆಡ್ ರೂಮ್ ಪತ್ತೆ !
Karwar ಪ್ರವಾಸೋಧ್ಯಮ ಇಲಾಖೆ ಕಚೇರಿಯಲ್ಲಿ ರಹಸ್ಯ ಬೆಡ್ ರೂಮ್ ಪತ್ತೆ !

ಕಾರವಾರ :- ಆಡಳಿತ ನಡೆಸುವ ಸರ್ಕಾರಿ ಕಚೇರಿಯಲ್ಲಿ ಗೌಪ್ಯವಾಗಿ ಬೆಡ್ ರೂಮ್ ಇರುವುದು ಪತ್ತೆಯಾದ ಘಟನೆ ಉತ್ತರ ಕನ್ನಡ ಜಿಲ್ಲೆಯ ಕಾರವಾರದ ಪ್ರವಾಸೋದ್ಯಮ ಇಲಾಖೆ ಕಚೇರಿಯಲ್ಲಿ ನಡೆದಿದ್ದು ಕಾರಣ ಕೇಳಿ ಪ್ರವಾಸೋದ್ಯಮ ಇಲಾಖೆ ಉಪನಿರ್ದೇಶಕರಿಗೆ ಜಿಲ್ಲಾಧಿಕಾರಿ ಲಕ್ಷ್ಮಿ ಪ್ರಿಯಾ ನೋಟಿಸ್ ನೀಡಿದ್ದಾರೆ.

ಇದನ್ನೂ ಓದಿ:-Karwar :ಪಾಕಿಸ್ತಾನದ ಏಜಂಟೆಗೆ ಕದಂಬ ನೌಕಾನೆಲೆಯ ಮಾಹಿತಿ ಹಂಚಿಕೆ -ಇಬ್ಬರು ಆರೋಪಿಗಳು NIA ವಶಕ್ಕೆ.
ಕಾರವಾರದ ಸರ್ಕಾರಿ ಆಸ್ಪತ್ರೆಗೆ ರಸ್ತೆ ಸಂಪರ್ಕ ಕಲ್ಪಿಸಲು ಕಾರವಾರ ನಗರದ ರಾಷ್ಟ್ರೀಯ ಹೆದ್ದಾರಿ 66 ರಲ್ಲಿ ಇದ್ದ ಪ್ರವಾಸೋಧ್ಯಮ ಕಚೇರಿಯನ್ನು ಜಿಲ್ಲಾಧಿಕಾರಿ ಕಚೇರಿಗೆ ಸ್ಥಳಾಂತರ ಮಾಡಬೇಕಿತ್ತು. ಈ ಸಂದರ್ಭದಲ್ಲಿ ಬೃಹತ್ ಕೈಗಾರಿಕಾ ಇಲಾಖೆಯ ಉಪನಿರ್ದೇಶಕರೂ ಆಗಿರುವ ಜಯಂತ್ ಇಲಾಖೆ ಕಾರ್ಯಕ್ರಮದ ನಿಮಿತ್ತ ಬೆಂಗಳೂರಿಗೆ ತೆರಳಿದ್ದರಿಂದ ಪ್ರವಾಸೋದ್ಯಮ ಇಲಾಖೆಯ ಚಾರ್ಜ ನನ್ನು ಕಾರವಾರದ ಎಸಿ ತಾನಿಷ್ಕ ಗೆ ವಹಿಸಿದ್ದರು.
ಇದನ್ನೂ ಓದಿ:-Karnataka:ಇನ್ಸುರೆನ್ಸ್ ಹಣಕ್ಕಾಗಿ ಕಾರವಾರ ಸೈಬರ್ ಕ್ರೈಂ ಡಿ.ವೈ.ಎಸ್.ಪಿ ಅಧಿಕಾರ ದುರುಪಯೋಗ- ಪೊಲೀಸ್ ಮಾಹಾನಿರ್ದೇಶಕರಿಗೆ ದೂರು
ಹೀಗಾಗಿ ಕಾರವಾರದ ಎಸಿ ತಾನಿಷ್ಕ ಕಚೇರಿ ಸ್ಥಳಾಂತರ ಮಾಡಲು ಆದೇಶಿಸಿದ್ದು ಈವೇಳೆ ಪ್ರವಾಸೋಧ್ಯಮ ಇಲಾಖೆ ಉಪನಿರ್ದೇಶಕರ ಕೊಠಡಿಯಲ್ಲಿ ಗೌಪ್ಯವಾಗಿರುವ ಬೆಡ್ ರೂಮ್ ಪತ್ತೆಯಾಗಿದ್ದು ಇದು ತಿಳಿಯದಂತೆ ಬೆಡ್ ರೂಮ್ ಗೆ ಹೂಗುವ ಬಾಗಿಲನ್ನು ಮರೆಮಾಚುವಂತೆ ಕಚೇರಿಯ ತ್ರಜರಿಯನ್ನು ಇರಿಸಲಾಗಿತ್ತು.

ಇದೀಗ ಕಚೇರಿ ಶಿಫ್ಟ್ ಮಾಡುವ ವೇಳೆ ರಹಸ್ಯ ಕೋಣೆ ಪತ್ತೆಯಾಗಿದ್ದು ಈ ಕೋಣೆಯಲ್ಲಿ ಹಾಸಿಗೆ ದಿಂಬುಗಳು ಪತ್ತೆಯಾಗಿದೆ. ಕಚೇರಿಯಲ್ಲಿ ಹೀಗೆ ರಹಸ್ಯವಾಗಿ ಬೆಡ್ ರೂಮ್ ಇರುವುದು ಹಲವು ಸಂಶಯಕ್ಕೆ ಎಡೆಮಾಡಿಕೊಟ್ಟಿದ್ದು ,ಈ ಕುರಿತು ಮಾಹಿತಿ ನೀಡುವಂತೆ ಪ್ರವಾಸೋಧ್ಯಮ ಉಪನಿರ್ದೇಶಕ ಜಯಂತ್ ಗೆ ಮೂರು ದಿನದಲ್ಲಿ ಉತ್ತರ ನೀಡುವಂತೆ ನೋಟಿಸ್ ನೀಡಿದರೂ ಜಯಂತ್ ರವರು ಉತ್ತರ ನೀಡಿಲ್ಲ. ಹೀಗಾಗಿ ಜಯಂತ್ ವಿರುದ್ಧ ಕ್ರಮ ಕೈಗೊಳ್ಳಲು ಜಿಲ್ಲಾಡಳಿತ ಮುಂದಾಗಿದೆ.
ಮರಳಿ ಅಧಿಕಾರ ವಹಿಸಿಕೊಳ್ಳದ ಜಯಂತ್ !
ಇನ್ನು ಅನುಮತಿಯೇ ಇಲ್ಲದೇ ತರಬೇತಿ ನಿಮಿತ್ತ ಬೆಂಗಳೂರಿಗೆ ತೆರಳಿದ್ದ ಜಯಂತ್ ರವರು ಮರಳಿ ಪ್ರವಾಸೋಧ್ಯಮ ಇಲಾಖೆಯ ಪ್ರಬಾರ ಹುದ್ದೆಯನ್ನು ವಹಿಸಿಕೊಂಡಿಲ್ಲ. ಹೀಗಾಗಿ ಮತ್ತೊಂದು ನೋಟಿಸ್ ನೀಡಿರುವ ಜಿಲ್ಲಾಧಿಕಾರಿ ಕರ್ನಾಟಕ ನಾಗರೀಕ ಸೇವಾ ನಿಯಮ 1957ರ ಪ್ರಕಾರ ಶಿಸ್ತು ಕ್ರಮ ಜರುಗಿಸಲು ಸರ್ಕಾರಕ್ಕೆ ಶಿಫಾರಸ್ಸು ಮಾಡುವುದಾಗಿ ತಿಳಿಸಿದ್ದಾರೆ.