Ankola: PDO ಮನೆಯಲ್ಲಿದ್ದ ಮೂರ್ತಿ ಕದ್ದ ಆರೋಪಿಗಳ ಬಂಧನ
Ankola 11 December 2024:-ಉತ್ತರ ಕನ್ನಡ ಜಿಲ್ಲೆಯ ಅಂಕೋಲ (ankola) ತಾಲೂಕಿನ ಹಿಲ್ಲೂರಿನ ತಿಂಗಳಬೈಲ್ ನಲ್ಲಿನ PDO ವಿಠಲ್ ಎಂಬುವವರ ಮನೆಯಲ್ಲಿ ದೇವರ ಕೋಣೆಯಲ್ಲಿ ಇದ್ದ ಲಕ್ಷಾಂತರ ಮೌಲ್ಯದ ಹಿತ್ತಾಳೆ ಲೋಹದ 47 ಮೂರ್ತಿಗಳನ್ನು ಕದ್ದು ಪರಾರಿಯಾಗಿದ್ದ ಕುರಿತು ಅಂಕೋಲ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿತ್ತು.
08:14 AM Dec 11, 2024 IST | ಶುಭಸಾಗರ್
Ankola 11 December 2024:-ಉತ್ತರ ಕನ್ನಡ ಜಿಲ್ಲೆಯ ಅಂಕೋಲ (ankola) ತಾಲೂಕಿನ ಹಿಲ್ಲೂರಿನ ತಿಂಗಳಬೈಲ್ ನಲ್ಲಿನ PDO ವಿಠಲ್ ಎಂಬುವವರ ಮನೆಯಲ್ಲಿ ದೇವರ ಕೋಣೆಯಲ್ಲಿ ಇದ್ದ ಲಕ್ಷಾಂತರ ಮೌಲ್ಯದ ಹಿತ್ತಾಳೆ ಲೋಹದ 47 ಮೂರ್ತಿಗಳನ್ನು ಕದ್ದು ಪರಾರಿಯಾಗಿದ್ದ ಕುರಿತು ಅಂಕೋಲ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿತ್ತು.
Advertisement
ಇದನ್ನೂ ಓದಿ:-Ankola|ಆಟವಾಡುತಿದ್ದ ಬಾಲಕನ ಮೇಲೆ ಗೇಟು ತುಂಡಾಗಿ ಬಿದ್ದು ಸಾವು
ಪ್ರಕರಣ ದಾಖಲಾಗಿ ಒಂದು ದಿನದಲ್ಲೇ ಆರು ಜನ ಆರೋಪಿಗಳನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ.
ಬಂಧಿತರಾಸ ಕದ್ರಾ KPC ನೌಕರ ಶ್ರೀನಿವಾಸ್, ಧಾರವಾಡದ ಅಶೋಕ್, ಕದ್ರಾದ ಮೌಲಾಲಿ, ಮುಬಾರಕ್ , ಎ.ಎಸ್ ಶೇಖ್ ಶರೀಫ್ , ಮೈಸೂರಿನ ಪುರಖಾನ್ ಎಂದಾಗಿದ್ದು ಇವರಿಂದ ಕೃತ್ಯಕ್ಕೆ ಬಳಸಿದ ಇನೋವಾ ,ಮಹೇಂದ್ರ ಜೈಲೋ, ಡಿಯೋ ಸ್ಕೂಟರ್ ಹಾಗೂ 1,30000 ಮೌಲ್ಯದ ವಿಗ್ರಹಗಳನ್ನು ವಶಕ್ಕೆ ಪಡೆಯಲಾಗಿದೆ.
ಸಧ್ಯ ಆರೋಪಗಳನ್ನು ನ್ಯಾಯಾಲಯದ ಸುಪರ್ಧಿಗೆ ವಹಿಸಲಾಗಿದ್ದು ತನಿಖೆ ಪ್ರಗತಿಯಲ್ಲಿದೆ.
Advertisement