Ankola ಮೈಕ್ರೋ ಫೈನಾನ್ಸ್ ಸಾಲ ವಸೂಲಿಗೆ ಹೋದ ಸಿಬ್ಬಂದಿ ಆತ್ಮಹ*ತ್ಯೆಗೆ ಯತ್ನ!
Ankola ಮೈಕ್ರೋ ಫೈನಾನ್ಸ್ ಸಾಲ ವಸೂಲಿಗೆ ಹೋದ ಸಿಬ್ಬಂದಿ ಆತ್ಮಹ*ತ್ಯೆಗೆ ಯತ್ನ!

ಕಾರವಾರ :- ಮೈಕ್ರೋ ಫೈನಾನ್ಸ್ ಹಾವಳಿಯಿಂದ ಸಾಲಪಡೆದ ರಾಜ್ಯದ ಜನ ಇವರ ಕಿರುಕುಳಕ್ಕೆ ಮಬೆಬಿಟ್ಟು ಹೋದರೆ ,ಇನ್ನು ಕೆಲವರು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಆದ್ರೆ ಮೈಕ್ರೋ ಫೈನಾನ್ಸ್ ನಲ್ಲಿ ನೀಡಿದ ಸಾಲವನ್ನು ವಸೂಲಿಗೆ ಹೋದ ಸಿಬ್ಬಂದಿಯೊಬ್ಬ ವಸೂಲಿ ಮಾಡಿದ ಹಣ ಕಳೆದುಕೊಂಡು ಆತ್ಮಹತ್ಯೆಗೆ ಯತ್ನಿಸಿದ ಘಟನೆ ಉತ್ತರ ಕನ್ನಡ ಜಿಲ್ಲೆಯ ಅಂಕೋಲದಲ್ಲಿ (ankola)ನಡೆದಿದೆ.
ಭಾರತ್ ಮೈಕ್ರೋ ಫೈನಾನ್ಸ್ ನಲ್ಲಿ ಫೀಲ್ಡ್ ಕಲೆಕ್ಷನ್ ಸಿಬಂದಿಯಾಗಿರುವ ಹಾನಗಲ್ ಮೂಲದ ಗುರುರಾಜ್ ಸೋಮಲಿಂಗ್ ಬಂಡಿವಡ್ಡರ್ (24) ಎಂಬಾತ ಆತ್ಮಹ*ತ್ಯೆಗೆ ಯತ್ನಿಸಿದ ಯುವಕನಾಗಿದ್ದಾನೆ.
ಈತ ಅಂಕೋಲ ತಾಲೂಕಿನ ಸುಂಕಸಾಳ ಗ್ರಾಪಂ ಸುತ್ತಮುತ್ತಲಿನ ಪ್ರದೇಶದಲ್ಲಿ ಮೈಕ್ರೋ ಫೈನಾನ್ಸ್ ನೀಡಲ್ಪಟ್ಟಿದ್ದ ಸಾಲವನ್ನು ವಸೂಲಿ ಮಾದಿತಿದ್ದು ಅಲ್ಲಿ ವಸೂಲಿ ಮಾಡಿದ 40 ಸಾವಿರ ಹಣವನ್ನು ಅಂಕೋಲಕ್ಕೆ ಬರುವ ಮೇಳೆ ಕಳೆದುಕೊಂಡಿದ್ದಾನೆ.
ಇದನ್ನೂ ಓದಿ:-Ankola ಅರ್ಬನ್ ಕೋ ಆಪರೇಟಿವ್ ಬ್ಯಾಂಕ್ ಸರ್ವರ್ ಹ್ಯಾಕ್ 33 ಲಕ್ಷಕ್ಕೂ ಅಧಿಕ ಹಣ ಕದ್ದ ಸೈಬರ್ ಕಳ್ಳರು.
ಇನ್ನು 40 ಸಾವಿರ ವಸೂಲಿ ಹಣ ಕಳೆದುಕೊಂಡ ಈತ ಫೈನಾನ್ಸ್ ಅಧಿಕಾರಿಗಳು ಕೆಲಸದಿಂದ ಕಿತ್ತುಹಾಕುವ ಭಯದಲ್ಲಿ ಆತ್ಮಹ*ತ್ಯೆಗೆ ಯತ್ನಿಸಿದ್ದಾಗಿ ಪ್ರಾಥಮಿಕ ಮಾಹಿತಿ .
ಮಾಹಿತಿ ತಿಳಿದ ಸಹೋದ್ಯೋಗಿಗಳು ಅಸ್ವಸ್ಥನಾಗಿದ್ದ ಆತನನ್ನು ತಕ್ಷಣ ಅಂಕೋಲ ತಾಲೂಕು ಆಸ್ಪತ್ರೆಗೆ ದಾಖಲಿಸಿದ್ದಾರೆ. ನಂತರ ಕಾರವಾರದ ಕ್ರಿಮ್ಸ್ ಗೆ ಈತನನ್ನು ಹೆಚ್ಚಿನ ಚಿಕಿತ್ಸೆಗಾಗಿ ಕಳುಹಿಸಲಾಗಿದ್ದು ಜೀವಾಪಾಯದಿಂದ ಪಾರಾಗಿದ್ದಾನೆ.