Ankola: ಹೆಜ್ಜೇನು ಕಡಿದು ಚಿಕಿತ್ಸೆ ಸಿಗದೇ ಪ್ರವಾಸಿಗ ಸಾವು!
Ankola: ಹೆಜ್ಜೇನು ಕಡಿದು ಚಿಕಿತ್ಸೆ ಸಿಗದೇ ಪ್ರವಾಸಿಗ ಸಾವು!
ಕಾರವಾರ :ಹುಬ್ಬಳ್ಳಿಯಿಂದ ಗೋಕರ್ಣಕ್ಕೆ(Gokarna) ಹೊರಟಿದ್ದ ಯುವಕರ ಮೇಲೆ ಹೆಜ್ಜೇನು ದಾಳಿ ನಡೆಸಿದ್ದು ತಕ್ಷಣ ಚಿಕಿತ್ಸೆ ಸಿಗದೇ ಓರ್ವ ಯುವಕ ಸಾವು ಕಂಡ ಘಟನೆ ಉತ್ತರ ಕನ್ನಡ ಜಿಲ್ಲೆಯ ಅಂಕೋಲದ ಹೊಸಾಕಂಬಿ ಬಳಿ ನಡೆದಿದೆ.
ಹುಬ್ಬಳಿಯ ಆದರ್ಶ ಕಳಸೂರ ಘಟನೆಯಲ್ಲಿ ಸಾವಿಗೀಡಾದ ವ್ಯಕ್ತಿಯಾಗಿದ್ದು ,ಒಟ್ಟು ನಾಲ್ಕು ಮಂದಿ ಸೇರಿ ಹುಬ್ಬಳ್ಳಿಯಿಂದ ಗೋಕರ್ಣಕ್ಕೆ ಪ್ರವಾಸ ತೆರಳಿದ್ದರು.
ಈ ವೇಳೆ ಹೊಸ ಕಂಬಿ ಬಳಿ ಫೋಟೋ ತೆಗೆಯಲು ನಿಂತಿದ್ದ ಯುವಕರಿಗೆ ಏಕಾಏಕಿ ಹೆಜ್ಜೇನು ದಾಳಿ ಮಾಡಿದೆ.
ಇದನ್ನೂ ಓದಿ:- Ankola :ಕಾರಿನಲ್ಲಿ ಸಿಕ್ಕ ಕೋಟಿ ಹಣ -21 ದಿನದ ನಂತರ ದೂರು ದಾಖಲಿಸಿದ ವಾರಸುದಾರ!
ಇದರಿಂದ ತಪ್ಪಿಸಿಕೊಳ್ಳಲು ಒಂದು ಕಿಲೋಮೀಟರ್ ವರೆಗೆ ಓಡಿದ್ರೂ ತಪ್ಪಿಸಿಕೊಳ್ಳಲಾಗದೇ ಹೆಜ್ಜೇನು ಕಚ್ಚಿಸಿಕೊಂಡ ಯುವಕರು ಚಿಕಿತ್ಸೆಗಾಗಿ ಆಸ್ಪತ್ರೆ ಗೆ ದಾವಿಸಿದ್ದಾರೆ.

ತಡರಾತ್ರಿ ಆದ್ದರಿಂದ ಎಲ್ಲೂ ಚಿಕಿತ್ಸೆ ಸಿಗದೇ ಗೋಕರ್ಣ ಖಾಸಗಿ ಆಸ್ಪತ್ರೆ ತಲುಪಿದ್ದರು.ಆದರೆ, ಆಸ್ಪತ್ರೆ ತಲುಪುವಷ್ಟರಲ್ಲಿ ಆದರ್ಶ ಸಾವು ಕಂಡಿದ್ದು ,ಉಳಿದ ಮೂರು ಮಂದಿಗೆ ಆಸ್ಪತ್ರೆಯಲ್ಲಿ ಚಿಕಿತ್ಸೆ ಮುಂದುವರೆದಿದೆ. ಘಟನೆ ಸಂಬಂಧ ಗೋಕರ್ಣ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ದಾಖಲಾಗಿದೆ.