Siddapura :ಗೌಡರ ಮನೆಯ ಅಡಕೆ ಕದ್ದ ಕಳ್ಳನ ಬಂಧನ
Siddapura :ಗೌಡರ ಮನೆಯ ಅಡಕೆ ಕದ್ದ ಕಳ್ಳನ ಬಂಧನ.

ಕಾರವಾರ :- ಮನೆಯಲ್ಲಿ ಒಣಗಿಸಿಟ್ಟಿದ್ದ ಅಡಿಕೆಯನ್ನು ಕದ್ದು ಪರಾರಿತಾಗಿದ್ದ ಕಳ್ಳನನ್ನು ಮಾಲು ಸಮೇತ ಬಂಧಿಸಿದ ಘಟನೆ ಉತ್ತರ ಕನ್ನಡ ಜಿಲ್ಲೆಯ ಸಿದ್ದಾಪುರದಲ್ಲಿ (siddapura) ನಡೆದಿದೆ.
ಕೋಲ್ ಸಿರ್ಸಿಯ ಕಾಶಿನಾಥ (34) ಬಂಧಿತ ಅಡಕೆ ಕಳ್ಳನಾಗಿದ್ದು ಈತನಿಂದ 25 ಸಾವಿರ ಮೌಲ್ಯದ ಎಂಟು ಅಡಕೆ ಚೀಲ, ಕೃತ್ಯಕ್ಕೆ ಬಳಸಿದ ಬೈಕ್ ನನ್ನು ವಶಕ್ಕೆ ಪಡೆಯಲಾಗಿದೆ.
ಇದನ್ನೂ ಓದಿ:-Siddapura ಅಯ್ಯಪ್ಪ ಸ್ವಾಮಿ ಜಾತ್ರೆಯಲ್ಲಿ ಕಾರು ಹರಿಸಿದ ರೋಷನ್ -ಉದ್ದೇಶಪೂರ್ವಕವಾಗಿ ಮಾಡಿದನಾ? ಜನ ಏನಂದ್ರು?
ಸಿದ್ದಾಪುರ ತಾಲೂಕಿನ ಕೋಲ್ ಸಿರ್ಸಿಯ ನಾಗರಾಜ ಗೌಡ ಎಂಬುವವರು ಮನೆಯಲ್ಲಿ ಒಣಗಿಸಿಟ್ಟುದ್ದ ಅಡಕೆ (arecanut) ಕಳ್ಳತನವಾದ ಕುರಿತು ಫೆ. 6 ರಂದು ದೂರು ನೀಡಿದ್ದರು. ಈ ದೂರು ಆಧರಿಸಿ ಸಿದ್ದಾಪುರ ಠಾಣೆಯ ಪೊಲೀಸ್ ನಿರೀಕ್ಷಕರಾದ ಜೆ.ಬಿ. ಸೀತಾರಾಮ ರವರ ಮಾರ್ಗದರ್ಶನದಲ್ಲಿ ಪಿ.ಎಸ್.ಐ ಅನೀಲ ಬಿ.ಎಂ. ,ಪಿ.ಎಸ್.ಐ ಗೀತಾ ಶಿರ್ಶಿಕರ್ ಸಿಬ್ಬಂದಿಗಳಾದ ರಮೇಶ ಕೂಡಲ್, ರಾಜು ಎಂ. ಶ್ರೀಶೈಲ್ ಉಪ್ಪಾರಟ್ಟಿ, ಮಣಿಕಂಠ ಎಂ.ಆರ್ ರವರು ಸೇರಿಕೊಂಡು ಕಳ್ಳತನ ಮಾಡಿದ ಆರೋಪಗಳನ್ನು ಬಂಧಿಸಿದ್ದಾರೆ.
