For the best experience, open
https://m.kannadavani.news
on your mobile browser.
Advertisement

Bhatkal: ಅಂತಿಂತ ಕಳ್ಳ ಇವನಲ್ಲ ! ಬ್ಯಾಂಕ್ ನ ಲಾಕರ್ ನನ್ನೇ ಕದ್ದೊಯ್ದ ಹೈನಾತಿ ಮೇಲಿದೆ 16 ಕ್ಕೂ ಹೆಚ್ಚು ಪ್ರಕರಣ 

ಕಾರವಾರ:-ಉತ್ತರ ಕನ್ನಡ ಜಿಲ್ಲೆಯ ಭಟ್ಕಳದ(bhatkal) ಬ್ಯಾಂಕನಲ್ಲಿದ್ದ ಲಾಕರ್ ಸಮೇತ ಹಣವನ್ನು ಕದ್ದೊಯ್ದ ಪ್ರಕರಣಕ್ಕೆ ಸಂಬಂಧಿಸಿದಂತೆ ಆರೋಪಿಯನ್ನು ಬಂಧಿಸಿ ಆತನಿಂದ ಕದ್ದ ಹಣವನ್ನು ಭಟ್ಕಳ ಪೊಲೀಸರು ಜಪ್ತಿ ಪಡಿಸಿಕೊಂಡ ಘಟನೆ ನಡೆದಿದೆ.
09:31 PM Mar 19, 2025 IST | ಶುಭಸಾಗರ್
bhatkal  ಅಂತಿಂತ ಕಳ್ಳ ಇವನಲ್ಲ   ಬ್ಯಾಂಕ್ ನ ಲಾಕರ್ ನನ್ನೇ ಕದ್ದೊಯ್ದ ಹೈನಾತಿ ಮೇಲಿದೆ 16 ಕ್ಕೂ ಹೆಚ್ಚು ಪ್ರಕರಣ 
ಪ್ರಕೃತಿ ಮೆಡಿಕಲ್ ,ಕಾರವಾರ

Bhatkal: ಅಂತಿಂತ ಕಳ್ಳ ಇವನಲ್ಲ ! ಬ್ಯಾಂಕ್ ನ ಲಾಕರ್ ನನ್ನೇ ಕದ್ದೊಯ್ದ ಹೈನಾತಿ ಮೇಲಿದೆ 16 ಕ್ಕೂ ಹೆಚ್ಚು ಪ್ರಕರಣ 

Advertisement

ಕಾರವಾರ:-ಉತ್ತರ ಕನ್ನಡ ಜಿಲ್ಲೆಯ ಭಟ್ಕಳದ (bhatkal) ಬ್ಯಾಂಕನಲ್ಲಿದ್ದ ಲಾಕರ್ ಸಮೇತ ಹಣವನ್ನು ಕದ್ದೊಯ್ದ ಪ್ರಕರಣಕ್ಕೆ ಸಂಬಂಧಿಸಿದಂತೆ ಆರೋಪಿಯನ್ನು ಬಂಧಿಸಿ ಆತನಿಂದ ಕದ್ದ ಹಣವನ್ನು ಭಟ್ಕಳ ಪೊಲೀಸರು ಜಪ್ತಿ ಪಡಿಸಿಕೊಂಡ ಘಟನೆ ನಡೆದಿದೆ.

ಭಟ್ಕಳದ ರಂಗೀನಕಟ್ಟಾ ಶ್ರೀ ವಿನಾಯಕ ಸೌಹಾರ್ದ ಕ್ರಡೀಟ್ ಕೊ-ಆಪರೇಟಿವ್ ಸೊಸೈಟಿಯಲ್ಲಿ  2024 ಏಪ್ರಿಲ್ 16 ರಂದು ಒಟ್ಟು ನಗದು ಹಣ 1,70,968/- ರೂಪಾಯಿಗಳನ್ನು ಲಾಕರ ಸಮೇತ ಎತ್ತಿಕೊಂಡು ಹೋಗಿ ಕಳುವು ಮಾಡಿದ್ದು, ಈ ಬಗ್ಗೆ ಭಟ್ಕಳ ಶಹರ ಪೊಲೀಸ ಠಾಣಾ ಗುನ್ನಾ ನಂ:41/2024 ಕಲಂ:454, 457, 380 ಐ.ಪಿ.ಸಿ ರೀತ್ಯ ಪ್ರಕರಣ ದಾಖಲಾಗಿತ್ತು.

ಇದನ್ನೂ ಓದಿ:-Bhatkal :ಅರಣ್ಯ ಒತ್ತುವರಿ-ಸಚಿವ  ಮಂಕಾಳು ವೈದ್ಯ ವಿರುದ್ಧ ರಾಜ್ಯಪಾಲರಿಗೆ ದೂರು

ಪ್ರಕರಣದ ತನಿಖೆ ಕೈಗೊಂಡ ಸಿ.ಪಿ.ಐ ಸಂತೋಷ ಕಾಯ್ಕಿಣಿ ರವರು ಈ ಪ್ರಕರಣದ ಆರೋಪಿ ಪತ್ತೆಯ ಕುರಿತು ತಂಡ ರಚಿಸಿ ಆರೋಪಿತನಾದ ಭಟ್ಕಳದ ಮೊಹಮ್ಮದ ರಾಯಿಕ್ ತಂದೆ ಮೊಹಮ್ಮದ ಗೌಸ (24 ) ಈತನನ್ನು ಬಂಧಿಸಿ ಈತನಿಂದ 40,000/- ರೂ ನಗದು ಹಣವನ್ನು ಜಪ್ತು ಮಾಡಿದ್ದಾರೆ.

 ಸದರಿ ಆರೋಪಿತನಿಗೆ  ನ್ಯಾಯಾಲಯಕ್ಕೆ ಹಾಜರ ಪಡಿಸಿದ್ದು ಆರೋಪಿತನು ನ್ಯಾಯಾಂಗ ಬಂಧನಕ್ಕೆ ನೀಡಲಾಗಿದೆ.ಆರೋಪಿತನ ಮೇಲೆ ಈಗಾಗಲೇ ಜಿಲ್ಲೆ ಮತ್ತು ಹೊರ ಜಿಲ್ಲೆಯ ವಿವಿಧ ಪೊಲೀಸ ಠಾಣೆಗಳಲ್ಲಿ ಒಟ್ಟು 16 ಕ್ಕಿಂತ ಹೆಚ್ಚು ಪ್ರಕರಣಗಳು ದಾಖಲಾಗಿರುತ್ತದೆ.

ಇದನ್ನೂ ಓದಿ:-Bhatkal: ಮೀನುಗಾರಿಕಾ ಬೋಟ್ ಮುಳುಗಡೆ -6 ಮೀನುಗಾರರ ರಕ್ಷಣೆ

ಈ ಕಾರಾಚರಣೆಯಲ್ಲಿ  ಭಟ್ಕಳ ಠಾಣೆಯ ಸಿ.ಪಿ.ಐ ಸಂತೋಷ ಕಾಯ್ಕಿಣಿ, ಭಟ್ಕಳ ಶಹರ ಪೊಲೀಸ ಠಾಣೆಯ ಪಿ.ಎಸ್.ಐ ನವೀನ್. ಎಸ್. ನಾಯ್ಕ, ಪಿ.ಎಸ್.ಐ ಶಾಂತಿನಾಥ ಪಾಸಾನೆ ಹಾಗೂ ಸಿಬ್ಬಂದಿಯವರಾದ ಸಿ.ಹೆಚ್.ಸಿ ನಾರಾಯಣ ನಾಯ್ಕ, ಸಿ.ಎಚ್.ಸಿ, ದಿನೇಶ ನಾಯಕ, ಸಿ.ಎಚ್.ಸಿ  ಅರುಣ ಪಿಂಟೋ, ಸಿ.ಎಚ್.ಸಿ ದೀಪಕ. ಎಸ್. ನಾಯ್ಕ, ಸಿ.ಎಚ್‌ಸಿ- ಮದಾರಸಾಬ್ ಚಿಕ್ಕೇರಿ, ಸಿ.ಎಚ್.ಸಿ- ಕಿರಣಕುಮಾರ ನಾಯ್ಕ,  ನಾಗರಾಜ ಮೊಗೇರ, ಸಿ.ಪಿ.ಸಿ- ಕೃಷ್ಣಾ ಎನ್.ಜಿ, ಲೊಕೇಶ ಕತ್ತಿ,  ಜಗದೀಶ ನಾಯ್ಕ, ಸಿ.ಪಿ.ಸಿ- ಮಹಾಂತೇಶ ಹಿರೇಮಠ,ಕಾಶಿನಾಥ ಕೊಟಗೊಣಸಿ ಹಾಗೂ  ಕಿರಣ ಪಾಟೀಲ್ ಇವರು ಪಾಲ್ಗೊಂಡಿದ್ದರು.

Advertisement
Advertisement
Advertisement

.

tlbr_img1 ಹೋಮ್ tlbr_img2 ಟ್ರೆಂಡಿಂಗ್ tlbr_img3 ವಿಡಿಯೋ