For the best experience, open
https://m.kannadavani.news
on your mobile browser.
Advertisement

Uttara kannda : ಮೂರು ದಿನ ನಿಷೇಧಾಜ್ಞೆ ! ಇಡೀ ದಿನ ಏನಾಯ್ತು?

ಕಾರವಾರ :- ಉತ್ತರ ಕನ್ನಡ(uttara kannda) ಜಿಲ್ಲೆಯ ಹೊನ್ನಾವರ ಮತ್ತು ಅಂಕೋಲ ದಲ್ಲಿ ಖಾಸಗಿ ಬಂದರು ನಿರ್ಮಾಣ ವಿರೋಧಿಸಿ ಮೀನುಗಾರರ ಪ್ರತಿಭಟನೆ ಕಾವಿನ ಬೆನ್ನಲ್ಲೇ ಸರ್ವೆ ಕಾರ್ಯ ಮುಂದುವರೆದಿದ್ದು ಇದೀಗ ನಿಷೇಧಾಜ್ಞೆ ಮುಂದುವರೆಸಲಾಗಿದೆ.
11:44 PM Feb 25, 2025 IST | ಶುಭಸಾಗರ್
uttara kannda   ಮೂರು ದಿನ ನಿಷೇಧಾಜ್ಞೆ   ಇಡೀ ದಿನ ಏನಾಯ್ತು
BNS 163 Order for Three Days in Ankola andHonnavara

Uttara kannda : ಮೂರು ದಿನ ನಿಷೇಧಾಜ್ಞೆ ! ಇಡೀ ದಿನ ಏನಾಯ್ತು?

Advertisement

ಪ್ರಕೃತಿ ಮೆಡಿಕಲ್ ,ಕಾರವಾರ.

ಕಾರವಾರ :- ಉತ್ತರ ಕನ್ನಡ(uttara kannda) ಜಿಲ್ಲೆಯ ಹೊನ್ನಾವರ ಮತ್ತು ಅಂಕೋಲ ದಲ್ಲಿ ಖಾಸಗಿ ಬಂದರು ನಿರ್ಮಾಣ ವಿರೋಧಿಸಿ ಮೀನುಗಾರರ ಪ್ರತಿಭಟನೆ ಕಾವಿನ ಬೆನ್ನಲ್ಲೇ ಸರ್ವೆ ಕಾರ್ಯ ಮುಂದುವರೆದಿದ್ದು ಇದೀಗ ನಿಷೇಧಾಜ್ಞೆ ಮುಂದುವರೆಸಲಾಗಿದೆ.

ಹೊನ್ನಾವರದಲ್ಲಿ ಸಮುದ್ರಕ್ಕಿಳಿದು ಮೀನುಗಾರರು ಹಾಗೂ ವುದ್ಯಾರ್ಥಿಗಳ  ಪ್ರತಿಭಟನೆ ,ಈ ಪ್ರತಿಭಟನೆ ಕಾವು ತಗ್ಗಿಸಲು ಹೋರಾಟಕ್ಕೆ ನಿಂತ ಮೀನುಗಾರರ ಬಂಧನ. ಹೌದು ಉತ್ತರ ಕನ್ನಡ ಜಿಲ್ಲೆಯ ಹೊನ್ನಾವರದ ಕಾಸರಕೋಡು ಹಾಗೂ ಅಂಕೋಲದ ಕೇಣಿಯಲ್ಲಿ ಖಾಸಗಿ ಕಂಪನಿಯ ಬಂದರು ನಿರ್ಮಾಣಕ್ಕಾಗಿ ನಡೆಗುತ್ತಿರುವ ಸರ್ವೆ ಕಾರ್ಯಕ್ಕೆ ಮೀನುಗಾರರು ತೀವ್ರ ವಿರೋಧ ವ್ಯಕ್ತಪಡಿಸಿ ಬೀದಿಗಿಳಿದಿದ್ದಾರೆ.

ಇದನ್ನೂ ಓದಿ:-Honnavara ಬಂದರು ಪ್ರತಿಭಟನೆ – 50 ಮೀನುಗಾರರ ಬಂಧನ

ಇತ್ತ ಜಿಲ್ಲಾಡಳಿತ ಸರ್ವೆ ಕಾರ್ಯ ಮುಗಿಸಿಯೇ ಸಿದ್ದ ಎಂದು ಪಟ್ಟು ಹಿಡಿದು ಪೊಲೀಸರ ಬಲ ಪ್ರಯೋಗದ ನಿಷೇಧಾಜ್ಞೆ ನಡುವೆ ಎರಡು ದಿನದ ಸರ್ವೆ ಕಾರ್ಯ ಮುಗಿಸಲಾಗಿದೆ.

Honnavara ಕಾಸರಕೋಡ್ ನಲ್ಲಿ ಪ್ರತಿಭಟನೆ ನಿರತ ಮೀನುಗಾರರು

ಕೇಣಿಯಲ್ಲಿ ಜೆ‌.ಎಸ್.ಡಬ್ಲು ಕಂಪನಿಯ ಬಂದರಿಗಾಗಿ ಸರ್ವೆ ಕಾರ್ಯ ಮಂಗಳವಾರ ಪೂರ್ಣಗೊಂಡಿದೆ.ಇನ್ನು ಹೊನ್ನಾವರದ ಕಾಸರಕೋಡದಲ್ಲಿ  ಹೊನ್ನಾವರ ಫೋರ್ಟ ಕಂಪನಿಗೆ ರಸ್ತೆ ನಿರ್ಮಿಸಲು ನಡೆದ

ಸರ್ವೆ ಕಾರ್ಯಕ್ಕೆ ಮೀನುಗಾರರು ದೊಡ್ಡ ಮಟ್ಟದ ಪ್ರತಿಭಟನೆ ನಡೆಸಿದ್ದು ಶಾಲಾ ವಿದ್ಯಾರ್ಥಿಗಳು ಸಹ ಪ್ರತಿಭಟನೆಯಲ್ಲಿ ಭಾಗಿಯಾಗಿ ಆತ್ಮಹತ್ಯೆಯ ಎಚ್ಚರಿಕೆ ನೀಡಿದ್ರು.

ಆದ್ರೆ ಇದ್ಯಾವುದಕ್ಕೂ ತಲೆಕೆಡಿಸಿಕೊಳ್ಳದ ಜಿಲ್ಲಾಡಳಿತ ಪೊಲೀಸರ ಸರ್ಪಗಾವಲಿನಲ್ಲಿ ಮಂಗಳವಾರ ಬಹುತೇಕ ಸರ್ವೆಕಾರ್ಯ ಪೂರ್ಣಗೊಳಿಸಿದೆ. ಇದಲ್ಲದೇ ನಿಷೇಧಾಜ್ಞೆ ನಡುವೆ ಕಾನೂನು ಉಲ್ಲಂಘಿಸಿದ 50 ಜನರನ್ನು ವಶಕ್ಕೆ ಪಡೆದರೇ ಪ್ರತ್ತೇಕ ಐದು ಪ್ರಕರಣಗಳನ್ನು ದಾಖಲಿಸಿದ್ದು ಪ್ರತಿಭಟನೆಯನ್ನು ಹತ್ತಿಕ್ಕುವಲ್ಲಿ ಯಶಸ್ಸು ಕಂಡಿದೆ. ಇನ್ನು ನಿಯಮ ಮೀರುವವರನ್ನು ನಿರ್ಧಾಕ್ಷಿಣ್ಯವಾಗಿ ಬಂಧಿಸುವ ಎಚ್ಚರಿಕೆಯನ್ನು ಪೊಲೀಸ್ ವರಿಷ್ಟಾಧಿಕಾರಿ ಎಂ.ನಾರಾಯಣ್ ನೀಡಿದ್ದಾರೆ.

ಹೊನ್ನಾವರ ಬಂದರು ಕಾಮಗಾರಿ ವಿರೋಧಿಸಿ ವಿದ್ಯಾರ್ಥಿಗಳ ಪ್ರತಿಭಟನೆ

ಇನ್ನು ಪೊಲೀಸ್ ಇಲಾಖೆ ಪ್ರತಿಭಟನಾ ನಿರತರ ಹೆಡೆಮುರಿ ಕಟ್ಟಿ ಹೊನ್ನಾವರ ಮತ್ತು ಅಂಕೋಲದ ಕೇಣಿಯಲ್ಲಿ ಸರ್ವೆಕಾರ್ಯಕ್ಕೆ ವ್ಯವಸ್ಥೆ ಮಾಡಿದೆ.

 ಅಂಕೋಲ ಹಾಗೂ ಹೊನ್ನಾವರದಲ್ಲಿ ಮೀನುಗಾರರು ಪ್ರತಿಭಟನೆ ಮುಂದುವರೆಸುವ ಹಠಕ್ಕೆ ಬಿದ್ದಿದ್ದು ಇದೀಗ ಮತ್ತೆ ಶಾಂತಿ ಭಂಗವಾಗುವ ಸಾಧ್ಯತೆ ಹಿನ್ನಲೆಯಲ್ಲಿ

ಬಿ.ಎನ್.ಎಸ್  163 ಕಲಂ ನಡಿ ಅಂಕೋಲಾ ತಾಲೂಕಿನ ಭಾವಿಕೇರಿ ಪಂಚಾಯತಿ ಹಾಗೂ ಕೇಣಿಯಲ್ಲಿ ಫೆಬ್ರುವರಿ 25 ರ ಸಂಜೆ 6 ರಿಂದ ಫೆ.28 ರ ರಾತ್ರಿ 9 ರ ವರೆಗೆ ಮೂರು ದಿನ  ಹಾಗೂ ಹೊನ್ನಾವರ ತಾಲೂಕಿನ ಕಾಸರಕೋಡು ಪಂಚಾಯತ ವ್ಯಾಪ್ತಿಯಲ್ಲಿ ಬುಧವಾರ ರಾತ್ರಿ 9 ಗಂಟೆಯಿಂದ ರಾತ್ರಿ 10 ರ ವರೆಗೆ ನಿಷೇದಾಜ್ಞೆ ಜಾರಿಗೊಳಿಸಿ ಜಿಲ್ಲಾಧಿಕಾರಿ ಲಕ್ಷ್ಮೀಪ್ರಿಯಾ ಆದೇಶ ಮಾಡಿದ್ದಾರೆ.

15 ವರ್ಷಗಳಿಂದ ಸರ್ವೆಕಾರ್ಯಕ್ಕೆ ಅಡ್ಡಿಪಡಿಸಿ ವಿರೋಧಿಸುತಿದ್ದ ಮೀನುಗಾರರನ್ನು ಪೊಲೀಸರು ಬಲ ಪ್ರಯೋಗದಿಂದ ಬಂಧಿಸಿದ್ದು ಇದೀಗ ಅಂಕೋಲದ ಕೇಣಿ ಹಾಗೂ ಹೊನ್ನಾವರದ ಕಾಸರಕೋಡ ದಲ್ಲಿ  ಬಿಗಿ ಪೊಲೀಸ್ ಬಂದವಸ್ತ್ ಕಲ್ಪಿಸಿ ನಿಷೇಧಾಜ್ಞೆ ಮುಂದುವರೆಸಲಾಗಿದೆ. ಆದರೇ ಮೀನುಗಾರರು ಮಾತ್ರ ಮತ್ತೆ ಪ್ರತಿಭಟನೆ ಮಾಡಲು ಸಜ್ಜಾಗಿದ್ದು ಇದೀಗ ಭೂದಿ ಮುಚ್ಚಿದ ಕೆಂಡದಂತಾಗಿದೆ.

Advertisement
Tags :
Advertisement
Advertisement

.

tlbr_img1 ಹೋಮ್ tlbr_img2 ಟ್ರೆಂಡಿಂಗ್ tlbr_img3 ವಿಡಿಯೋ