For the best experience, open
https://m.kannadavani.news
on your mobile browser.
Advertisement

Uttara kannda -ಪಶ್ಚಿಮ ಘಟ್ಟ ಭಾಗದಲ್ಲಿ ಭೂಕಂಪ-ತಜ್ಞರ ಸ್ಥಳ ಪರಿಶೀಲನೆ ಜಿಲ್ಲಾಧಿಕಾರಿ ಹೇಳಿದ್ದಿಷ್ಟು.

Uttara kannada 02 December 2024/ಕಾರವಾರ :- ಉತ್ತರ ಕನ್ನಡ ಜಿಲ್ಲೆಯ ಕುಮಟಾ,(kumta)ಶಿರಸಿ,(sirsi) ಸಿದ್ದಾಪುರ ,(siddapura) ಯಲ್ಲಾಪುರ (yallapura) ಘಟ್ಟ ಭಾಗದಲ್ಲಿ ಭೂಕಂಪನವಾದ ಕುರಿತು ಸ್ಥಳೀಯರ ಮಾಹಿತಿ ಆಧರಿಸಿ ರಾಜ್ಯ ವಿಪತ್ತು ನಿರ್ವಹಣ ಕೇಂದ್ರದಿಂದ ತಜ್ಞರ ತಂಡ ಜಿಲ್ಲೆಗೆ ಭೇಟಿ ನೀಡಿ ಪರಿಶೀಲನೆ ನಡೆಸಿದೆ.
10:42 PM Dec 02, 2024 IST | ಶುಭಸಾಗರ್
uttara kannda  ಪಶ್ಚಿಮ ಘಟ್ಟ ಭಾಗದಲ್ಲಿ ಭೂಕಂಪ ತಜ್ಞರ ಸ್ಥಳ ಪರಿಶೀಲನೆ ಜಿಲ್ಲಾಧಿಕಾರಿ ಹೇಳಿದ್ದಿಷ್ಟು

Uttara kannada 02 December 2024/ಕಾರವಾರ :- ಉತ್ತರ ಕನ್ನಡ ಜಿಲ್ಲೆಯ ಕುಮಟಾ,(kumta)ಶಿರಸಿ,(sirsi) ಸಿದ್ದಾಪುರ ,(siddapura) ಯಲ್ಲಾಪುರ (yallapura) ಘಟ್ಟ ಭಾಗದಲ್ಲಿ ಭೂಕಂಪನವಾದ (earthquake )ಕುರಿತು ಸ್ಥಳೀಯರ ಮಾಹಿತಿ ಆಧರಿಸಿ ರಾಜ್ಯ ವಿಪತ್ತು ನಿರ್ವಹಣ ಕೇಂದ್ರದಿಂದ ತಜ್ಞರ ತಂಡ ಜಿಲ್ಲೆಗೆ ಭೇಟಿ ನೀಡಿ ಪರಿಶೀಲನೆ ನಡೆಸಿದೆ.

Advertisement

ಇದನ್ನೂ ಓದಿ:-Uttara kannda ಪಶ್ಚಿಮ ಘಟ್ಟ ಭಾಗದಲ್ಲಿ ಭೂಕಂಪ ಅನುಭವ ಜಿಲ್ಲಾಧಿಕಾರಿ ಸ್ಪಷ್ಟನೆ ಹೀಗಿದೆ.

ತಜ್ಞರು ಶಿರಸಿ ಭಾಗದ ದೇವಿಮನೆ ಘಟ್ಟ ಹಾಗೂ ಯಾಣ ಭಾಗದ ಜನರನ್ನು ಸಂಪರ್ಕಿಸಿ ಮಾಹಿತಿ ಪಡೆಯುತ್ತಿರುವುದು.

ವಿಪತ್ತು ನಿರ್ವಹಣಾ ಕೇಂದ್ರದ ಜಗದೀಶ್ ನೇತ್ರತ್ವದ ಇಬ್ಬರ ತಂಡ ಯಾಣ ಭಾಗ ಹಾಗೂ ದೇವಿಮನೆ ಘಟ್ಟ ಪ್ರದೇಶಗಳಿಗೆ ಭೇಟಿ ನೀಡಿ ಇಂದು ಪರಿಶೀಲನೆ ನಡೆಸಿದೆ.

ಭೂಕಂಪದ ಕುರಿತು ಜಿಲ್ಲಾಧಿಕಾರಿ ಹೇಳಿದ್ದೇನು?

Uttrakannada DC Laxmipriya

ಮಾಧ್ಯಮಗಳಿಂದ ಮಾಹಿತಿ ಪಡೆದು ಪಶ್ಚಿಮಘಟ್ಟದ ಭಾಗದಲ್ಲಿ ಜನರು ಹಾಗೂ ಗ್ರಾ.ಪಂ.ಗಳ ಜತೆ ಮಾತನಾಡಿದ್ದೇವೆ.

ಸುಮಾರು 3 ಸೆಕೆಂಡ್ ಕಾಲ ಕಂಪನವಾಗಿರೋದು, ಪಾತ್ರೆಗಳು ಬಿದ್ದಿರುವ ಬಗ್ಗೆ ಸಾರ್ವಜನಿಕರು ದೂರು ನೀಡಿದ್ದಾರೆ.ಯಾವುದೇ ಕಂಪನವಿದ್ರೂ ಜೊಯಿಡಾದಲ್ಲಿರುವ ವಿಪತ್ತು ನಿರ್ವಹಣಾ ಕೋಶ ಮಾಹಿತಿ ನೀಡುತ್ತದೆ.

ರಾಜ್ಯ ವಿಪತ್ತು ನಿರ್ವಹಣಾ ಪ್ರಾಧಿಕಾರದ ಬಳಿ ಕೇಳಿದಾಗ ಯಾವುದೇ ಕಂಪನ‌‌ ರಿಪೋರ್ಟ್ ಆಗಿಲ್ಲ ಅಂದಿದ್ದಾರೆ. ಜನಸಾಮಾನ್ಯರಿಂದ ಸ್ಪಷ್ಟ ಮಾಹಿತಿ ದೊರೆತ ಮೇಲೆ ಮತ್ತೆ ವಿಪತ್ತು ನಿರ್ವಹಣಾ ಪ್ರಾಧಿಕಾರವನ್ನು ಸಂಪರ್ಕಿಸಲಾಗಿದೆ.

ವಿಪತ್ತು ನಿರ್ವಹಣಾ ಪ್ರಾಧಿಕಾರದಿಂದ ಇಬ್ಬರು ತಜ್ಞರು ಜಿಲ್ಲೆಗೆ ಆಗಮಿಸಿದ್ದು, ಸ್ಥಳದಲ್ಲಿ ಪರಿಶೀಲನೆ ನಡೆಸಿದ್ದಾರೆ. ಮಂಗಳವಾರ ಯಾಣ ಪ್ರದೇಶದಲ್ಲಿ ತೋರಿಸಿವ ಪಾಯಿಂಟ್ ಬಳಿ ಭೇಟಿ ನೀಡಲಿದ್ದಾರೆ.

ತಜ್ಞರ ಪರಿಶೀಲನೆಯ ಬಳಿಕ ಪ್ರಮುಖ ಕಾರಣದ ಬಗ್ಗೆ ಮಾಹಿತಿ ದೊರೆಯಲಿದೆ ಎಂದು ಜಿಲ್ಲಾಧಿಕಾರಿ
ಲಕ್ಷ್ಮೀಪ್ರಿಯಾ ರವರು ತಿಳಿಸಿದ್ದಾರೆ.

Advertisement
Tags :
Advertisement
Advertisement

.

tlbr_img1 ಹೋಮ್ tlbr_img2 ಟ್ರೆಂಡಿಂಗ್ tlbr_img3 ವಿಡಿಯೋ