Uttara Kannda ಅಭಿವೃದ್ಧಿಗಾಗಿ 69 ಬೇಡಿಕೆ ದಾಂಡೇಲಿಯಲ್ಲಿ ಜಿಲ್ಲಾ ಸಮಾವೇಶ
Dandeli news :- ಉತ್ತರ ಕನ್ನಡ (Uttara kannda) ಜಿಲ್ಲೆ ಭೌಗೋಳಿಕವಾಗಿ ದೊಡ್ಡ ಜಿಲ್ಲೆ. 79.4% ಅರಣ್ಯವನ್ನೇ ಹೊಂದಿದ ಈ ಜಿಲ್ಲೆಯಲ್ಲಿ ಇಂದಿಗೂ ವಿದ್ಯುತ್ ಇಲ್ಲದ ,ರಸ್ತೆ ಇಲ್ಲದ ಗ್ರಾಮಗಳಿದ್ದರೇ ವೈದ್ಯಕೀಯ ವ್ಯವಸ್ಥೆ,ಮೂಲಭೂತ ಸೌಕರ್ಯಗಳ ಕೊರತೆ ಯಿಂದ ನಲುಗಿ ಹೀಗಿದೆ.
ಅಭಿವೃದ್ಧಿಗಾಗಿ ಎರಡು ಜಿಲ್ಲೆಯಾಗಬೇಕು ಎಂಬ ಹೋರಾಟ ಒಂದುಕಡೆಯಾದರೇ ನಮ್ಮ ಜಿಲ್ಲೆಗೊಂದು ಮಲ್ಟಿ ಸ್ಪೆಷಾಲಿಟಿ ಆಸ್ಪತ್ರೆ ನೀಡಿ ಎಂಬ ಕೂಗು ದಶಕದ್ದು. ಉದ್ಯೋಗ ,ಕೈಗಾರಿಕೆ ,ಪ್ರವಾಸೋದ್ಯಮ ಹಳ್ಳ ಹಿಡಿದರೇ ಜಿಲ್ಲೆಯ ಜನರ ಆರ್ಥಿಕ ಮಟ್ಟ ಸಹ ಕಡಿಮೆಯಿದೆ.
ಇದನ್ನೂ ಓದಿ:-Mundgodu- ಕಬ್ಬಿನ ಗದ್ದೆಯಲ್ಲಿ ಕಬ್ಬು ಕಡಿಯಲು ಹೋದವರಿಗೆ ಶಾಕ್! ಏನಾಯ್ತು ವಿವರ ನೋಡಿ!
ಹೀಗಿರುವಾಗ ನಮ್ಮ ಜಿಲ್ಲೆ ಅಭುವೃದ್ಧಿಯಾಗಬೇಕು, ಉದ್ಯೋಗ ದೊರಕಬೇಕು , ಶಿಕ್ಷಣ ,ವೈದ್ಯಕೀಯ ವ್ಯವಸ್ಥೆ ,ಮೂಲಭೂತ ಸೌಕರ್ಯ, ಕೃಷಿ,ಅತಕ್ರಮಣ ಭೂಮಿ ಸಕ್ರಮತೆ,ಸಾಕಿತ್ಯ ,ಸಂಸ್ಕೃತಿ ಉನ್ನತಿ ಸಿಗಬೇಕೆಂಬ ಹಂಬಲದಲ್ಲಿ ಜಾತ್ಯಾತೀತ ಸಮಾನ ಮನಸ್ಕರ ನಾವುನೀವು ಎಂಬ ವಿನೂತನ ಜಿಲ್ಲಾ ಸಮಾವೇಶವನ್ನು ದಾಂಡೇಲಿಯ ಹಾರ್ನಬಿಲ್ ಸಭಾಭವನದಲ್ಲಿ ಹಮ್ಮಿಕೊಳ್ಳಲಾಗಿತ್ತು.
ಈ ಸಮಾವೇಶದಲ್ಲಿ ಜಿಲ್ಲೆಯ ಅಭಿವೃದ್ಧಿಗಾಗಿ 69 ಪ್ರಮುಖ ಬೇಡಿಕೆಯನ್ನು ಮಂಡಿಸುವ ಮೂಲಕ ರಾಜ್ಯ ಸರ್ಕಾರದ ಜನ ಪ್ರತಿನಿಧಿಗಳ ಮೂಲಕ ಒತ್ತಾಯಿಸಲಾಯಿತು.
ಸಮಾವೇಶದಲ್ಲಿ ಭಾಗಿಯಾದವರು.
ಹಳಿಯಾಳ ಶಾಸಕ ಹಾಗೂ ಆಡಳಿತ ಸುಧಾರಣಾ ಆಯೋಗದ ಅಧ್ಯಕ್ಷ ಆರ್.ವಿ ದೇಶಪಾಂಡೆ, ಜಿಲ್ಲಾ ಕಸಪಾ ಅಧ್ಯಕ್ಷರಾದ ಬಿ.ಎನ್ ವಾಸರೆ, ಸಿ.ಐ.ಟಿ.ಯು ಹಾಗೂ ಜನಪರ ಹೋರಾಟಗಾರ್ತಿ ಯಮುನಾ ಗಾಂವ್ಕರ್, ಡಿ.ಸ್ಯಾಮ್ಸನ್ ,ಕೀರ್ತಿ ಗಾಂವ್ಕರ್, ಶಾಂತರಾಮ ನಾಯಕ, ಸೈಯದ್,ಶಿರಸಿಯ ಮಾರಿಕಾಂಬ ದೇವಸ್ಥಾನದ ಮಾಜಿ ಅಧ್ಯಕ್ಷ ವೆಂಕಟೇಶ್ ನಾಯಕ್ , ಉದ್ಯಮಿ ಜಾರ್ಜ ಫರ್ನಾಂಡಿಸ್ ಸೇರಿದಂತೆ ಹಲವು ಸಂಘ ಸಂಸ್ಥೆಯ ಪ್ರತಿನಿಧಿಗಳು ಭಾಗಿಯಾಗಿದ್ದರು.
ಸಮಾವೇಶದಲ್ಲಿ ಇಟ್ಟ ಪ್ರಮುಖ ಬೇಡಿಕೆಗಳು.
ಜಿಲ್ಲೆಯಲ್ಲಿ ಮೂಲಭೂತ ಸೌಕರ್ಯ,ಕೃಷಿ,ಶಿಕ್ಷಣ , ಮೀನುಗಾರಿಕೆ ಮತ್ತು ಉದ್ಯಮ, ಕೈಗಾರಿಕೆ, ಕಾರ್ಮಿಕರು, ಕೂಲಿಕಾರರ ಔದ್ಯೋಗಿಕ ಸಮಸ್ಯೆ, ಪ್ರವಾಸೋದ್ಯಮ ,ನೆರೆ,ಬರ ನಿರ್ವಹಣೆ, ಮಲ್ಟಿ ಸ್ಪೆಷಾಲಿಟಿ ಆಸ್ಪತ್ರೆ, ಅತಿಕ್ರಮಣ ಭೂಮಿ ಸಕ್ರಮಾತಿ , ರೈಲ್ವೆ ಯೋಜನೆ ಸೇರಿದಂತೆ ಹಲವು ವಿಷಯಗಳ ಬೇಡಿಕೆ ಮಂಡಿಸಲಾಯಿತು.
ಜಿಲ್ಲೆ ಇಬ್ಭಾಗಕ್ಕೆ ವಿರೋಧ.
ಇನ್ನು ಸಮಾವೇಶದಲ್ಲಿ ಶಿರಸಿ ಜಿಲ್ಲೆಯನ್ನಾಗಿಸಲು ಸಾಮೂಹಿಕವಾಗಿ ವಿರೋಧ ವ್ಯಕ್ತವಾಯಿತು . ಜಿಲ್ಲೆ ಚಿಕ್ಕದಾದರೇ ಅಭಿವೃದ್ಧಿ ಸಾಧ್ಯ ಎನ್ನಲಾಗದು, ಉತ್ತರ ಕನ್ನಡ ಅಖಂಡವಾಗಿರಬೇಕು ಜಿಲ್ಲೆಯ ಅಭಿವೃದ್ಧಿ ಆಗಬೇಕು ಉದ್ಯೋಗ ,ಮೂಲಭೂತ ಸೌಕರ್ಯ ದೊರೆಯಬೇಕು ಎಂಬ ಒಮ್ಮತದ ದ್ವನಿ ಸಮಾವೇಶದಲ್ಲಿ ಕೇಳಿಬಂತು.
ಇದನ್ನೂ ಓದಿ:-Mundgod:125 ಕ್ಕೆ ಏರಿಕೆ ಕಂಡ ಮಂಗನಬಾವು ಸೊಂಕು-ಶಾಲೆಗೆ ಮೂರುದಿನ ರಜೆ ಘೋಷಣೆ
ಇದರ ಜೊತೆಗೆ ಶಿರಸಿ (sirsi)ಜಿಲ್ಲೆಯಾದರೇ ಹಳಿಯಾಳ, ದಾಂಡೇಲಿಯನ್ನು ಧಾರವಾಡಕ್ಕೆ ಸೇರಿಸಬೇಕು ಎಂಬ ಆಗ್ರಹ ಕೇಳಿಬಂತು.
ಇನ್ನು ಜಿಲ್ಲೆಯಲ್ಲಿ ಸುಸಜ್ಜಿತ ಆಸ್ಪತ್ರೆ ಆಗಬೇಕು, ರಸ್ತೆ ಸಂಪರ್ಕ, ವಿದ್ಯುತ್ ವ್ಯವಸ್ಥೆ ಜೊತೆ ಉದ್ಯೋಗ ಅತಿಕ್ರಮಣದಾರರಿಗೆ ಭೂಮಿ ಹಕ್ಕು ಸಿಗಬೇಕು ಎಂಬ ದ್ವನಿ ಸಮಾವೇಶದಲ್ಲಿ ಕೇಳಿಬಂತು.
ಇನ್ನು ಜಿಲ್ಲೆಯ ಅಭಿವೃದ್ಧಿಗಾಗಿ 69 ಬೇಡಿಕೆಗಳನ್ನು ಬೆಳಗಾವಿಯ ಅಧಿವೇಶನದಲ್ಲಿ ಪ್ರಸ್ತಾಪಿಸಿ ವಿಶೇಷ ಅನುದಾನ ನೀಡುವಂತೆ ಜನಪ್ರತಿನಿಧಿಗಳಿಗೆ ಹಕ್ಕೊತ್ತಾಯ ಮಾಡಲಾಯಿತು.