Yallapur :ಒಂದನೇ ತರಗತಿ ವಿದ್ಯಾರ್ಥಿನಿ ಯನ್ನು ಪಾಳು ಬಿದ್ದ ದೇವಸ್ಥಾನದಲ್ಲಿ ಅ*ಚಾರ ಮಾಡಿದ ಅಪ್ರಾಪ್ತ ಬಾಲಕ!
Yallapur :ಒಂದನೇ ತರಗತಿ ವಿದ್ಯಾರ್ಥಿನಿ ಯನ್ನು ಪಾಳು ಬಿದ್ದ ದೇವಸ್ಥಾನದಲ್ಲಿ ಅ*ಚಾರ ಮಾಡಿದ ಅಪ್ರಾಪ್ತ ಬಾಲಕ

ಕಾರವಾರ:- ಒಂದನೇ ತರಗತಿ ಓದುತಿದ್ದ ಪುಟ್ಟ ಬಾಲಕಿಯನ್ನು ಪುಸುಲಾಯಿಸಿ ಪಾಳುಬಿದ್ದ ದೇವಸ್ಥಾನದಲ್ಲಿ ಕರೆದೊಯ್ದು ಅ*ಚಾರ ನಡೆಸಿದ ಘಟನೆ ಉತ್ತರ ಕನ್ನಡ ಜಿಲ್ಲೆಯ ಯಲ್ಲಾಪುರ (yallapura)ತಾಲೂಕಿನ ಮದನೂರಿನಲ್ಲಿ ನಡೆದಿದೆ.
ಛಲವಾದಿ ಸಮುದಾಯಕ್ಕೆ ಸೇರಿದ 1ನೇ ತರಗತಿಯ ಪುಟ್ಟ ಬಾಲಕಿ ಅ*ಚಾರಕ್ಕೊಳಗಾದ ಬಾಲಕಿಯಾಗಿದ್ದು ಹಳಿಯಾಳ ಭಾಗವತಿಯ 17 ವರ್ಷದ ಮುಸ್ಲಿಂ ಸಮುದಾಯಕ್ಕೆ ಸೇರಿದ ಅಪ್ರಾಪ್ತ ಬಾಲಕ ಅತ್ಯಾಚಾರ ಮಾಡಿದವನಾಗಿದ್ದಾನೆ.
ಇದನ್ನೂ ಓದಿ:-Yallapura : ಕೋಟಿ ವಂಚನೆ ಮಾಡಿ ದುಬೈಗೆ ಪರಾರಿಯಾಗಿದ್ದ ಮಾಜಿ PDO ಬಂಧನ
ಆರೋಪಿ ಯಲ್ಲಾಪುರಕ್ಕೆ ಕುಟುಂಬಸ್ಥರ ಮನೆಗೆ ಬಂದಿದ್ದ ವೇಳೆ ಈ ಪುಟ್ಟಯನ್ನ ಪುಸುಲಾಯಿಸಿ ಕರೆದೊಯ್ದು ಊರಿನ ಪಾಳು ಬಿದ್ದ ದೇವಸ್ಥಾನಕ್ಕೆ ಕರೆದೊಯ್ದು ಅ*ಚಾರ ವೆಸಗಿ ಹೋಗಿದ್ದನು.

ಮಗು ರೋಧನೆಯಿಂದ ಅಳುತಿದ್ದುದನ್ನು ಗಮನಿಸಿದ ಪೋಷಕರು ಮಗುವಿನ ಬಳಿ ಕೇಳಿದಾಗ ಪ್ರಕರಣ ಬಯಲಿಗೆ ಬಂದಿದೆ.ತಕ್ಷಣ ಆತನನ್ನು ಹಿಡಿದು ಪೊಲೀಸರಿಗೆ ಒಪ್ಪಿಸಿದ್ದು ಯಲ್ಲಾಪುರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.